ಕನ್ನಡಿಗರ ಹೆಮ್ಮೆ ಸುಧಾಮೂರ್ತಿಯವರು ಇನ್ಪೋಸಿಸ್ ಸಂಸ್ಥೆಯ ರೂವಾರಿ ನಾರಾಯಣಮೂರ್ತಿಯವರ ಧರ್ಮಪತ್ನಿಯಾಗಿ, ಜಗತ್ತಿನ ಶ್ರೀಮಂತರ ಪೈಕಿ ಅವರು ಒಬ್ಬರಾಗಿದ್ದರೂ ಕೂಡ ಸರಳ ಬದುಕನ್ನು ಇಷ್ಟ ಪಡುವ ಗೃಹಿಣಿ. ಇನ್ಫೋಸಿಸ್ ಪೌಂಡೇಷನ್ ಮುಖೇನ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿರುವ ಇವರು ದೇವದಾಸಿಯರಿಗೆ ಉದ್ಯೋಗ ಮತ್ತು ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಟ್ಟು ಅವರ ಪಾಲಿನ ದೇವತೆಯಾಗಿದ್ದಾರೆ. ಅವರು ತಯಾರಿಸಿದ ಕೌದಿಯನ್ನು ಇತ್ತಿಚೇಗೆ ಕೌನ್ ಬನೇಗಾ ಕರೋಡ್‍ಪತಿ ಕಾರ್ಯಕ್ರಮದಲ್ಲಿ ಬಾಲಿವುಡ್ ಬಾದ್‍ಷಾ ಅಮಿತಾಬ್ ಬಚ್ಚನ್ ರವರಿಗೆ ಪ್ರೀತಿಯ ಉಡುಗೊರೆಯಾಗಿ ನೀಡಿ ಜನರ ಮೆಚ್ಚುಗೆ ಗಳಿಸಿದ್ದಾರೆ.
ಅಮಿತಾಬ್ ಬಚ್ಚನ್ ರವರ ನಿರೂಪಣೆಯ ಜನಪ್ರಿಯ ಟಿ.ವಿ ಕಾಯಕ್ರಮ ಕೌನ್ ಬನೇಗಾ ಕರೋಡ್‍ಪತಿಯ ಫಿನಾಲೇ ಈ ವಾರ ಅಂದರೆ ದಿನಾಂಕ 29.11.2019 ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಪ್ರೋಮೊ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಈ ಕಾರ್ಯಕ್ರಮವನ್ನು ವೀಕ್ಷಿಸಲು ಕೊಟ್ಯಂತರ ಜನ ಕಾತುರರಾಗಿದ್ದಾರೆ.
ಅಮಿತಾಬ್ ಕೂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸುಧಾಮೂರ್ತಿಯವರ ಜೊತೆಗಿನ ಪೋಟೊ ಪ್ರಸಾರ ಮಾಡಿದ್ದಾರೆ. ಈ ಪೋಟೊ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಸ್ವತ: ಅಮಿತಾಬ್ ಸುಧಾಮೂರ್ತಿಯವರ ಕಾಲಿಗೆ ನಮಸ್ಕರಿಸಿ ಆಶಿರ್ವಾದ ಪಡೆದಿದ್ದಾರೆ. ಇದು ಕೂಡ ಪ್ರೋಮೊದಲ್ಲಿ ಪ್ರಸಾರವಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಸುಧಾಮೂರ್ತಿಯವರ ಕನಸಿನ ಇನ್ಪೋಸಿಸ್ ಪೌಂಡೇಷನ್‍ನ ಕಾರ್ಯಗಳ ಬಗ್ಗೆ ಸ್ವತ: ಅಮಿತಾಬ್ ಬಚ್ಚನ್ ರವರೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೆನಪಿಗಾಗಿ ಕರ್ನಾಟಕದ ದೇವದಾಸಿಯರು ತಯಾರಿಸಿದ ಕೌದಿಯನ್ನು ಅಮಿತಾಬ್‍ರವರಿಗೆ ಸುಧಮ್ಮ ನೀಡಿದ್ದಾರೆ.