ಉಪಯುಕ್ತ ಮಾಹಿತಿ

ಇಂದು ಸರ್ ಎಂ. ವಿಶ್ವೇಶ್ವರಯ್ಯನವರ ಜನಮ ದಿನ. ಇಂಜಿನಿಯರ್ಸ್ ಡೇ!

ಮಾನವ ಸಂಕುಲ ಬೆಳೆದಂತೆಲ್ಲಾ ಜಗತ್ತು ಬೆಳೆಯುತ್ತಿದೆ ಮನುಷ್ಯನ ಆಲೋಚನೆಗಳಿಗೆ ಕನಸುಗಳಿಗೆ ಜೀವ ತುಂಬವ ಕೆಲಸ ನಿರಂತರವಾಗಿ ಸದ್ದಿಲ್ಲದೆ ನಡೆಯುತ್ತಲೇ ಇರುತ್ತದೆ ಅದರಲ್ಲೂ ಅಣೆಕಟ್ಟು, ಕಟ್ಟಡಗಳು, ಸೇತುವೇ, ತಂತ್ರಜ್ಞಾನ/ ಯಂತ್ರೋಪಕರಣಗಳ ಅಳವಡಿಕೆ ಹೀಗೆ ಅನೇಕ ಸೌಕರ್ಯವನ್ನು ಒದಗಿಸಿಕೊಡುವಲ್ಲಿ ಇಂಜಿನಿಯರ್ಸ್‍ಗಳು ಹಗಲು ರಾತ್ರಿ ಶ್ರಮಿಸುತ್ತಿರುತ್ತಾರೆ ಅಂತಹ ಶ್ರಮಜೀವಿ ಇಂಜಿನಿಯರ್ಸ್‍ಗಳಿಗೆ ಇಂಜಿನಿಯರ್ಸ್ ದಿನದ ಶುಭಾಶಯಗಳು!

ಇಂದು (15.09.1860) ಸರ್ ಎಂ. ವಿಶ್ವೇಶ್ವರಯ್ಯನವರ ಜನುಮ ದಿನ. ಈ ದಿನವನ್ನು ಭಾರತದಲ್ಲಿ ಅಭಿಯಂತರ ದಿನವನ್ನಾಗಿ ಆಚರಿಸಲಾಗುತ್ತಿದೆ. ಸರ್.ಎಂ.ವಿ. ಎಂದೇ ಖ್ಯಾತರಾಗಿದ್ದ ದೇಶ ಕಂಡ ಹೆಮ್ಮೆಯ ಇಂಜಿನಿಯರ್, ಮೊಕ್ಷಗುಂಡಂ ವಿಶ್ವೇಶ್ವರಯ್ಯನವರು ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಇವರ ತಂದೆ ಶ್ರೀನಿವಾಸ ಶಾಸ್ತ್ರಿ ತಾಯಿ ಶ್ರೀಮತಿ ವೆಂಕಟಮ್ಮ ಇವರ ಪೂರ್ವಜರು ಆಂದ್ರಪ್ರದೇಶದ ಮೋಕ್ಷಗುಂಡಂ ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ವಾಸವಾಗಿದ್ದ ಕಾರಣ ಇವರ ಹೆಸರಿನೊಂದಿಗೆ ಮೋಕ್ಷಗುಂಡಂ ಸೇರಿಕೊಂಡಿದೆ.

ಶಿಕ್ಷಣ: ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಪೂರೈಸಿದ ಸರ್.ಎಂ.ವಿಯವರು ಹೈಸ್ಕೂಲ್ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆಯುತ್ತಾರೆ. ನಂತರ ಮದ್ರಾಸು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿಯನ್ನು ಪಡೆದು, ತದನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆಯುತ್ತಾರೆ.

ವೃತ್ತಿ ಜೀವನ: ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ, ನಂತರ ಭಾರತೀಯ ನೀರಾವರಿ ಕಮಿಷನ್ ಗೆ ಸೇರಿ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ಪರಿಚಯಿಸಿದ ಕೀರ್ತಿ ಸರ್.ಎಂ.ವಿ. ಗೆ ಸಲ್ಲುತ್ತದೆ. ಅರ್ಥರ್ ಕಾಟನ್‍ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದ ಸರ್.ಎಂ.ವಿಯವರು ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ತಿರುಚನಾಪಳ್ಳಿಯಲ್ಲಿ ಚೋಳರಾಜರಿಂದ ನಿರ್ಮಿಸಲ್ಪಟ್ಟ ಹಾಗೂ 18ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್ ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟು( ಗ್ರಾಂಡ್ ಅಣೆಕಟ್ಟು) ನೋಡಿ ನಂತರ ಮಹಾರಾಜರಲ್ಲಿ ಇದನ್ನು ವರದಿ ಮಾಡಿದ್ದರು. ವಿಶೇಷವಾಗಿ ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸವೊಂದನ್ನು ಅನ್ವೇಷಿಸಿ ಪೇಟೆಂಟ್ ಪಡೆದಿದ್ದರು. ಅದನ್ನು ಮೊದಲ ಬಾರಿಗೆ ಪುಣೆಯ ಖಡಕ್ವಾಸ್ಲಾ ಅಣೆಕಟ್ಟು ಮತ್ತು ಕರ್ನಾಟಕದ ಕೃಷ್ಣರಾಜಸಾಗರ ಅಣೆಕಟ್ಟುಗಳಲ್ಲಿ ಸಹ ಉಪಯೋಗಿಸಲಾಗಿದೆ. ಈ ಗೇಟ್‍ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಟ ಮಟ್ಟದ ನೀರನ್ನು ಶೇಖರಿಸುವುದೇ ಆಗಿತ್ತು. ನೀರಾವರಿಯಲ್ಲಿ ಇವರ ಸಾಧನೆ ಅಪಾರ ಇವರ ಸೇವೆಯನ್ನು ಗುರುತಿಸಿ ಅನೇಕ ಬಿರುದು ಸನ್ಮಾನಗಳು ಇವರನ್ನು ಹುಡುಕಿಕೊಂಡು ಬಂದವು. ಮೈಸೂರು ಭಾಗದ ಅನೇಕ ಊರುಗಳ  ಮನೆ ಮನೆಗಳಲ್ಲೂ ಸರ್.ಎಂ.ವಿ. ಯವರ ಪೋಟೋ ಇಂದಿಗೂ ಪೂಜಿಸಲ್ಪಡುತ್ತದೆ.

ಮೈಸೂರಿನ ದಿವಾನರಾಗಿ: ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ಸರ್.ಎಂ.ವಿ ಯವರು ಮೈಸೂರಿನ ದಿವಾನರಾಗಿ ಮಹಾರಾಜ ಕೃಷ್ಣರಾಜ ಒಡೆಯರ್ ಜೊತೆ ಹಲವಾರು ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು. ಬೆಂಗಳೂರಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಸ್ಥಾಪನೆ (ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂನಿಯರಿಂಗ್) ಮೈಸೂರು ವಿಶ್ವವಿದ್ಯಾನಿಲಯ ಬೆಳವಣಿಗೆ,  ಬ್ಯಾಂಕ್ ಸ್ಥಾಪನೆ, ಹೀಗೆ ಹಲವಾರು ರಂಗದಲ್ಲಿ ತಮ್ಮ ಕೊಡುಗೆಗಳನ್ನು ಆಗಾಧವಾಗಿ ನೀಡಿದ್ದಾರೆ

ಬಿರುದು ಗೌರವಗಳು: ಸರ್.ಎಂ.ವಿಯವರು ಮೈಸೂರಿನ ದಿವಾನರಾಗಿದ್ದಾಗ ಬ್ರೀಟಿಷ್ ಸರ್ಕಾರ ಸರ್ ಪದವಿಯನ್ನು ನೀಡಿತು. ಭಾರತ ಸರ್ಕಾರ ಅತ್ಯನ್ನತ ಗೌರವವಾದ ಭಾರತ ರತ್ನ ನೀಡಿ ಗೌರವಿಸಿದೆ. ಇದನ್ನು ಪಡೆದ ಮೊಟ್ಟ ಮೊದಲ ಕನ್ನಡಿಗರಾಗಿದ್ದಾರೆ. ಇನ್ನೂ ಹತ್ತು ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ಸರ್.ಎಂ. ವಿಶ್ವೇಶ್ವರಯ್ಯನವರ ಸೇವಾ ಸಾಧನೆಗಳು ಪ್ರತಿಯೊಬ್ಬ ಇಂಜಿನಿಯರ್‍ಗೂ ಸ್ಪೂರ್ತಿಯಾಗಲಿ, ಪ್ರಗತಿಯ ಸಮೃದ್ದಿಯ ದೇಶ ಕಟ್ಟುವಲ್ಲಿ ಪ್ರತಿಯೊಬ್ಬರೂ ಶ್ರಮಿಸೋಣ.

-ನವೀನ್ ರಾಮನಗರ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!