ಉಪಯುಕ್ತ ಮಾಹಿತಿ

ಮಂಡ್ಯ ಸಹಕಾರ ಹಾಲು ಒಕ್ಕೂಟದಲ್ಲಿ ವಿವಿಧ 126 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕರ್ನಾಟಕ ಹಾಲು ಮಹಾಮಂಡಳಿ( ಕೆಎಂಎಫ್) ಇದರ 14 ಹಾಲು ಒಕ್ಕೂಟಗಳಲ್ಲಿ ಒಂದಾದ ಮಂಡ್ಯ ಸಹಕಾರ ಹಾಲು ಒಕ್ಕೂಟವೂ ತನ್ನ ಕಾರ್ಯವ್ಯಾಪ್ತಿಯಲ್ಲಿ ಪ್ರತಿನಿತ್ಯ ಗ್ರಾಮೀಣ ಪ್ರದೇಶದಿಂದ ಹಾಲನ್ನು ಸಂಗ್ರಹಿಸಿ, ಸಂಸ್ಕರಣೆ ಮಾಡಿ ವಿವಿಧ ಉತ್ಪನ್ನಗಳನ್ನು ತಯಾರಿಸಿ, ಉತ್ತಮ ಗುಣಮಟ್ಟದ ಪರಿಶುದ್ಧ ಪಾಶ್ಚೀಕರಿಸಿದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಸಹಕಾರಿ ಸಂಸ್ಥೆಯಾಗಿದ್ದು, ಈ ಕಾರ್ಯಾಚರಣೆಯನ್ನು ಬಲಪಡಿಸಲು ವಿವಿಧ 126 ಹುದ್ದೆಗಳಿಗೆ ವೃತ್ತಿ ನಿಪುಣ ಮತ್ತು ಕ್ರಿಯಾಶೀಲ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಗಳ ವಿವರ: 1. ಸಹಾಯಕ ವ್ಯವಸ್ಥಾಪಕರು(ಪವೈಸೇ/ಕೃ.ಗ) ವೇತನ ಶ್ರೇಣಿ 52650-97100 ಹುದ್ದೆಗಳ ಸಂಖ್ಯೆ: 5, 2.ಸಹಾಯಕ ವ್ಯವಸ್ಥಾಪಕರು (ಖ/ಉ) ವೇತನ ಶ್ರೇಣಿ 52650-97100 ಹುದ್ದೆಗಳ ಸಂಖ್ಯೆ 1, 3. ಲೀಗಲ್ ಆಫೀಸರ್ ವೇತನ ಶ್ರೇಣಿ 43100-83900 ಹುದ್ದೆಗಳ ಸಂಖ್ಯೆ 1, 4. ತಾಂತ್ರಿಕ ಅಧಿಕಾರಿ(ಡಿ.ಟಿ/ಅಭಿಯಂತರ) ವೇತನ ಶ್ರೇಣಿ 43100-83900 ಹುದ್ದೆಗಳ ಸಂಖ್ಯೆ 13, 5. ಉಗ್ರಾಣಾಧಿಕಾರಿ/ಐ.ಎಂ ಅಧಿಕಾರಿ ವೇತನ ಶ್ರೇಣಿ 43100-83900 ಹುದ್ದೆಗಳ ಸಂಖ್ಯೆ 1, 6. ಆಡಳಿತ ಸಹಾಯಕ, ಲೆಕ್ಕ ಸಹಾಯಕ, ಕೆಮಿಸ್ಟ್ ದರ್ಜೆ-1 ವೇತನ ಶ್ರೇಣಿ 33450-62600 ಒಟ್ಟು ಹುದ್ದೆಗಳ ಸಂಖ್ಯೆ 8,  7. ಸೀನಿಯರ್ ಸಿಸ್ಟಂ ಅಪರೇಟರ್ ವೇತನ ಶ್ರೇಣಿ 33450-62600 ಹುದ್ದೆಗಳ ಸಂಖ್ಯೆ 4,  8. ವಿಸûರಣಾಧಿಕಾರಿ ದರ್ಜೆ-3 ವೇತನ ಶ್ರೇಣಿ 33450-62600 ಹುದ್ದೆಗಳ ಸಂಖ್ಯೆ 22, 9. ಆಡಳಿತ ಸಹಾಯಕ, ಲೆಕ್ಕ ಸಹಾಯಕ, ಮಾರುಕಟ್ಟೆ ಸಹಾಯಕ, ಕೆಮಿಸ್ಟ್ ದರ್ಜೆ-2 ವೇತನ ಶ್ರೇಣಿ 27650-52650 ಒಟ್ಟು ಹುದ್ದೆಗಳು 18, 10. ಜೂನಿಯರ್ ಸಿಸ್ಟಂ ಅಪರೇಟರ್, ಕೋ ಆರ್ಡಿನೇಟರ್(ರಕ್ಷಣೆ) ಆರೋಗ್ಯ ನಿರೀಕ್ಷಕರು, ನರ್ಸ್(ಮಹಿಳೆ) ವೇತನ ಶ್ರೇಣಿ 27650-52650 ಒಟ್ಟು ಹುದ್ದೆಗಳು 8, 11. ಮಾರುಕಟ್ಟೆ ಸಹಾಯಕ ದರ್ಜೆ-3/ಡಿಸ್‍ಪ್ಯಾಚರ್ ವೇತನ ಶ್ರೇಣಿ 21400-42000 ಹುದ್ದೆಗಳು 6 12. ಜೂನಿಯರ್ ಟೇಕ್ನಿಷಿಯನ್ ವೇತನ ಶ್ರೇಣಿ 21400-42000 ಹುದ್ದೆಗಳು 36, 13. ಚಾಲಕರು ವೇತನ ಶ್ರೇಣಿ 214000-42000 ಹುದ್ದೆಗಳು 2. (ಸೂಚನೆ: ವಿದ್ಯಾರ್ಹತೆ ಇತ್ಯಾದಿಗಳನ್ನು ಒಕ್ಕೂಟದ ವೆಬ್ ಸ್ಶೆಟ್‍ಗೆ ಭೇಟಿ ನೀಡಿ ಪಡೆಯಿರಿ)

ಅರ್ಜಿಗಳನ್ನು ಆನ್ ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ. ಖುದ್ದಾಗಿ/ಅಂಚೆ/ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅರ್ಜಿ ಸಲ್ಲಿಸಲು ಮಂಡ್ಯ ಹಾಲು ಒಕ್ಕೂಟದ ಅಧಿಕೃತ ವೆಬ್ ಸೈಟ್ www.manmul.coop  ಅನ್ನು ಸಂಪರ್ಕಿಸಿ ಅದರಲ್ಲಿ Guideline ಮತ್ತು How to apply ನಲ್ಲಿರುವ ಮಾಹಿತಿಯನ್ನು ಪಡೆದು ಅದನ್ನು ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಪ್ರಾರಂಭ ದಿನಾಂಕ 17.09.2018, ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 16.10.2018, ಅರ್ಜಿ ಶುಲ್ಕ ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 17.10.2018 ಆಗಿರುತ್ತದೆ.

ಓದಿ ಸುಮ್ಮನಾಗಬೇಡಿ! ಲೈಕ್ ಮಾಡಿ ಶೇರ್ ಮಾಡಿ ನಿಮ್ಮಿಂದ ಒಬ್ಬರಿಗೆ ಸಹಾಯವಾಗಲಿ, ಮಾಹಿತಿ ಎಲ್ಲರಿಗೂ ತಲುಪಲಿ.

ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆಯ ವಿಧಾನ, ಪರೀಕ್ಷೆ ಹೇಗಿರುತ್ತದೆ, ಮುಂತಾದ ಮಾಹಿತಿ ಬೇಕಾದರೆ ಈ ಕೆಳಕಂಡ ಲಿಂಕ್ ಬಳಸಿ ಚಿಗುರು ಕನ್ನಡ ಟಿವಿ ಗೆ Subscribe  ಆಗಿ ಅತಿ ಶೀಘ್ರದಲ್ಲೇ ಸಂಪೂರ್ಣಮಾಹಿತಿಯ ವಿಡಿಯೋ ಅಪಲೋಡ್ ಮಾಡಲಾಗುತ್ತದೆ.

Subscribe: chiguru kannada TV

ಶುಭವಾಗಲಿ.
ನವೀನ್ ರಾಮನಗರ

 

 

 

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!