ರಾಮ ನವಮೀ ಶ್ರೀ ರಾಮನ ಜನ್ಮ ದಿನ . ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಶ್ರೀ ರಾಮ ಮನೆದೇವರು ಇರುವವರು ಒಂಭತ್ತು ದಿನದ ಹಬ್ಬ ಮಾಡುತ್ತಾರೆ. ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ , ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಹೀಗೆ 09 ದಿನದ ರಾಮೋತ್ಸವ ಮಾಡುತ್ತಾರೆ.
ರಾಮನವಮಿ ಹಬ್ಬ ಆಚರಿಸಲು ತುಂಬ ಪರಿಕರಣೆ ಇಲ್ಲ. ಇದು ಸರಳವಾದ ಹಬ್ಬ. ಸಾಮಾನ್ಯವಾಗಿ ರಾಮ ಪಟ್ಟಾಭಿಷೇಕದ ರಾಮ ಪಂಚಾಯತದ ಪಟವನ್ನು ಇಟ್ಟು ಪೂಜೆ ಮಾಡುತ್ತಾರೆ. ಇದರಲ್ಲಿ ಶ್ರೀ ರಾಮನ ಜೊತೆಗೆ ಎಲ್ಲ ತಮ್ಮಂದಿರೂ ಇರುತ್ತಾರೆ. ಶ್ರೀ ರಾಮಚಂದ್ರನಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಪಾನಕಕೋಸಂಬರಿಗಳನ್ನು ನೈವೇದ್ಯ ಮಾಡಿ ಇತರರಿಗೆ ಹಂಚುತ್ತಾರೆ. ರಾಮನ ಭಜನೆ, ಹಾಡುಗಳಿಂದ ರಾಮನ ಧ್ಯಾನ ಮಾಡುತ್ತಾರೆ.
ರಾಮ ನವಮಿಯ ಇನ್ನೊಂದು ವಿಶೇಷತೆ ರಾಮ ನಾಮ ಬರೆಯುವುದು. ರಾಮ ನಾಮದ ಮಹಿಮೆ ಅಪಾರ. ಇದನ್ನು ತಾರಕ ನಾಮ ಎಂದೂ ಹೇಳುತ್ತಾರೆ. (ತಾರಕ = ಸಂರಕ್ಷಕ, ಕಾಪಾಡುವವನು, ಪಾರುಮಾಡುವುದು) ರಾಮ ನಾಮವನ್ನು ಜಪಿಸಿದರೆ ಅವನು ನಮ್ಮನ್ನು ಸದಾ ಸಂರಕ್ಷಿಸಿ, ಕಾಪಾಡುತ್ತಾನೆ. ರಾಮನ ಧ್ಯಾನಕ್ಕೆ ರಾಮನಾಮ ಬರೆಯುವುದು ಒಂದು ಉತ್ತಮ ಸಾಧನ. “ರಾಮ” “ಶ್ರೀ ರಾಮ” “ಶ್ರೀ ರಾಮ ಜಯ ರಾಮ” “ಶ್ರೀ ರಾಮ ಜಯ ರಾಮ ಜಯ ಜಯ ರಾಮ” ಇತ್ಯಾದಿ – ನಿಮಗೆ ಇಷ್ಟವಾದ ನಾಮವನ್ನು ಜಪಿಸಬಹುದು. ರಾಮ ನವಮಿಯ ದಿನ ರಾಮ ನಾಮ ಬರೆದರೆ ಅತಿ ಉತ್ತಮ. ನಿಮ್ಮ ಕೈಲಾದಷ್ಟು ನಾಮ ಬರೆಯಬಹುದು, ಕನಿಷ್ಠ ಪಕ್ಷ 9 ನಾಮಗಳನ್ನಾದರೂ ಬರೆಯಿರಿ. ಇದನ್ನು ಮಕ್ಕಳೂ ಬರೆಯಬಹುದು. ನಮ್ಮ ತಾಯಿ ನನಗೆ ಓದಿ ಬರೆಯಲು ಬಂದ ತಕ್ಷಣ ಈ ರಾಮ ನಾಮ ಬರೆಯುವ ಅಭ್ಯಾಸ ಮಾಡಿಸಿದರು. ಆ ಅಭ್ಯಾಸ ಇಂದಿಗೂ ಮುಂದುವರೆಸುತ್ತಿದ್ದೀನಿ.
ರಾಮ ನವಮಿ ಅಂದರೆ ಪಾನಕ, ಮಜ್ಜಿಗೆ, ಕೋಸಂಬರಿ ಸಮಾರಾಧನೆ ನೆನಪಾಗುತ್ತದೆ. ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಪಾನಕ, ಕೋಸಂಬರಿಗಳನ್ನು ಹಂಚುತ್ತಾರೆ. ಬೇಸಿಗೆಯ ಸುಡುವ ಬಿಸಿಲಿಗೆ ತಂಪು ಮಾಡಲು ತಂಪಾದ ಪಾನಕ ಮಜ್ಜಿಗೆ ಹೇಳಿ ಮಾಡಿಸಿದ ಜೋಡಿ. ಈ ಕಾರಣಕ್ಕೇ ಈ ಪಾನೀಯಗಳನ್ನು ಮಾಡುತ್ತಾರೆ ಅನ್ನಿಸುತ್ತದೆ. ಸಾಮಾನ್ಯವಾಗಿ ಬೇಲದಹಣ್ಣು (wood apple) ಮತ್ತು ಬೆಲ್ಲ ಸೇರಿಸಿ ಷರಬತ್ತು ಮಾಡುತ್ತಾರೆ. ಬೇಲದ ಹಣ್ಣು ಸಿಗದಿದ್ದರೆ ನಿಂಬೆ ಹಣ್ಣಿನಿಂದ ಮಾಡಿ. ಒಟ್ಟಿನಲ್ಲಿ ಯಾವುದೋ ಒಂದು ಹಣ್ಣಿನಿಂದ ಪಾನಕ ಮಾಡಿ ಅಷ್ಟೆ
ಮನಗಳ ತಣಿಸಿದರೆ ಮಹಾನವಮಿ ಆಚರಿಸಿದ ಫಲ.
-:ಶ್ರೀ ರಾಮ ನವಮಿಯ ಶುಭಾಶಯಗಳು:- ಸರ್ವೇ ಜನಾಃ ಸುಖಿನೋಭವಂತು
# ಡಾ.ಬಸವರಾಜ್ ಗುರೂಜಿ, ಜ್ಯೋತಿಷಿ
9972848937