ಅತಿಥಿ ಅಂಕಣ

ಕಲಬೆರಕೆ ಹಾಲು ಸೇವಿಸಿದ್ರೆ ಏನಾಗುತ್ತೆ ಗೊತ್ತಾ? ಓದಿ

ಹಾಲನ್ನು ಸಾಮಾನ್ಯವಾಗಿ ನೀರು ಸೇರಿಸಿ ಕಲಬೆರಕೆ ಮಾಡಲಾಗುತ್ತದೆ. ಇದರಿಂದ ಹಾಲಿನಲ್ಲಿರುವ ಪೌಷ್ಠಿಕಾಂಶಗಳು ಕುಂದುವುದರಿಂದ, ಸೇವಿಸಿದ ಹಾಲಿನಿಂದ ದೇಹಕ್ಕೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಹಾಗೆಯೇ ಹಾಲಿಗೆ ಗಂಜಿ, ಸಕ್ಕರೆ, ಉಪ್ಪು, ಕಾಷ್ಟಿಕ್ ಸೋಡಾ, ಯೂರಿಯಾ, ಸೋಡಿಯಂ ಕಾರ್ಬೋನೇಟ್, ಫಾರ್ಮಾಲಿನ್, ಅಮೋನಿಯಂ ಸಲ್ಫೇಟ್ ಮುಂತಾದವುಗಳಿಂದ ಕಲಬೆರಕೆ ಮಾಡುವ ಅನಮರ್ಪಕ ಅಭ್ಯಾಸಗಳಿವೆ.

ಡಿಟರ್ಜೆಂಟ್‍ನಿಂದ ಕಲಬೆರಕೆಯಾದ ಹಾಲಿನ ಸೇವನೆಯಿಂದ ಫುಡ್ ಪಾಯ್ಸನ್, ಜಠರ-ಕರುಳಿನ ತೊಡಕುಗಳುಂಟಾಗುತ್ತವೆ. ಇದರ ಅತಿಯಾದ ಕ್ಷಾರೀಯತೆ ದೇಹದ ಅಂಗಾಂಶಗಳಿಗೆ ಹಾನಿಯುಂಟು ಮಾಡಿ, ದೇಹದ ಪ್ರೋಟೀನ್ ಅಂಶವು ನಶಿಸುತ್ತದೆ. ಯೂರಿಯಾ, ಫಾರ್ಮಲಿನ್, ಕಾಷ್ಟಿಕ್ ಸೋಡಾಗಳಂತಹ ರಾಸಾಯನಿಕಗಳಿಂದ ಕಲಬೆರಕೆಯಾದ ಹಾಲನ್ನು ಸೇವಿಸಿದ ಕೂಡಲೇ ಹೊಟ್ಟೆನೋವು ಉಂಟಾಗಿ ದೀರ್ಘಕಾಲೀನ ಪರಿಣಾಮಗಳುಂಟಾಗುತ್ತವೆ. ಯೂರಿಯಾದಿಂದ ವಾಂತಿ, ವಾಕರಿಕೆ ಮತ್ತು ಜಠರದುರಿತದಂತಹ ಲಕ್ಷಣಗಳುಂಟಾಗುತ್ತವೆ. ಫಾರ್ಮಲಿನ್ ಕಲಬೆರಕೆಯಾದ ಹಾಲಿನ ಸೇವನೆಯಿಂದ ದೇಹದ ಪ್ರಮುಖ ಭಾಗವಾದ ಯಕೃತ್ತು ನಶಿಸುವ ಸಂಭವವಿರುತ್ತದೆ.

ಗೆಳೆತನವೆಂದರೆ ಹೇಗಿರಬೇಕು ಗೊತ್ತಾ ? ಓದಿ

Image result for nandini milk

ಕಾಷ್ಟಿಕ್ ಸೋಡಾ ಕಲಬೆರಕೆಯಾದ ಹಾಲಿನ ಸೇವನೆಯಿಂದ, ವಿಶೇಷವಾಗಿ ಮಕ್ಕಳಲ್ಲಿ ದೇಹದ ಆಹಾರದ ಪೈಪಿನಲ್ಲಿರುವ ಲೋಳೆಪೊರೆಗೆ ಹಾನಿಯುಂಟಾಗುತ್ತದೆ. ಹೆಚ್ಚಿನ ಉಪ್ಪಿನಂಶದಿಂದ ಕಲಬೆರಕೆಯಾದ ಹಾಲಿನ ಸೇವನೆಯಿಂದ ಈಗಾಗಲೇ ಅಧಿಕ ರಕ್ತದೊತ್ತಡ, ಹೃದಯದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಹೆಚ್ಚಿನ ಆರೋಗ್ಯದ ತೊಂದರೆಯುಂಟಾಗುತ್ತದೆ. ಕಲಬೆರಕೆಯಾದ ಹಾಲಿನ ಸೇವನೆಯಿಂದುಂಟಾಗುವ ಇಂತಹ ದುಷ್ಪರಿಣಾಮಗಳನ್ನು ತಪ್ಪಿಸಲು ‘ನಂದಿನಿ’ಯಂತಹ ಪ್ರತಿಷ್ಟಿತ ಬ್ರಾಂಡ್ ಹಾಲನ್ನು ಖರೀದಿಸುವುದು ಅತಿ ಸೂಕ್ತ. ನಂದಿನಿ ಹಾಲು ಪರಿಶುದ್ಧವಾದ ಹಾಲಾಗಿದ್ದು, ಇದು ವಿವಿಧ ಹಂತದಲ್ಲಿ ವಿವಿಧ ಗುಣಮಟ್ಟದ ಪರೀಕ್ಷೆಯಲ್ಲಿ ದೃಢೀಕರಿಸಿ ಮಾರುಕಟ್ಟೆಗೆ ವಿತರಣೆಯಾಗುತ್ತದೆ.

ನೀರು ಕುಡಿಯುವುದರಿಂದ ಆಗುವ ಪ್ರಯೋಜನ ಓದಿ

ಡಿ.ಸಿ. ಭಾನುಪ್ರಕಾಶ್
ಕೇಂದ್ರ ಗುಣಭರವಸೆ ವಿಭಾಗ, ಕೆ.ಎಂ.ಎಫ್

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!