ನಮ್ಮ ರಾಮನಗರ: ಶಿಕ್ಷಕ ಸದಾಶಿವ ಮೂರ್ತಿ ಅವರ ಅಕಾಲಿಕ ಅಗಲಿಕೆ ಶಾಲಾ ಮಕ್ಕಳು, ಪೋಷಕರು ಹಾಗೂ ಗ್ರಾಮಸ್ಥರಿಗೆ ಅಗಾಧವಾದ ಆಘಾತ ತಂದಿದೆ ಎಂದು ಬಿಡದಿ ರೈತಸಂಘದ ಉಪಾಧ್ಯಕ್ಷ, ಎಸ್ ಡಿ ಎಂಸಿ ಅಧ್ಯಕ್ಷ ಮುತ್ತುರಾಯನಪುರದ ರಂಗಸ್ವಾಮಿ ಕಂಬನಿ ಮಿಡಿದರು.
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಮುತ್ತುರಾಯನಪುರದ ಸರ್ಕಾರಿ ಶಾಲೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸದಾಶಿವ ಮೂರ್ತಿ ಅವರ ಅಗಲಿಕೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶೈಕ್ಷಣಿಕ ವಿಚಾರವಾಗಿ ಎಸ್ ಡಿ ಎಂಸಿ ಸಮಿತಿಯವರು ನೀಡುತ್ತಿದ್ದ ಸಲಹೆ-ಸೂಚನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದ ಮೂರ್ತಿಯವರು ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು ಎಂದರು.
ವಿಕ್ಟೋರಿಯಾ ಆಸ್ಪತ್ರೆಯ ಪಿ.ಆರ್ .ಓ ಚನ್ನಪಟ್ಟಣದ ಗಿರೀಶ್ ಗೆ ಕಾಯಕಲ್ಪ ಪುರಸ್ಕಾರ
ಗ್ರಾಮಸ್ಥರ ಪ್ರೀತಿ, ವಿಶ್ವಾಸಕ್ಕೆ ಮಾರುಹೋಗಿದ್ದ ಸದಾಶಿವ ಮೂರ್ತಿ ಯವರು ಅನೇಕ ಬಾರಿ ಪದೋನ್ನತಿ ವರ್ಗಾವಣೆಯ ಆದೇಶ ಬಂದರೂ ಅದನ್ನು ನಯವಾಗಿ ತಿರಸ್ಕರಿಸಿ ಮುತ್ತುರಾಯನಪುರದಲ್ಲಿಯೇ ಕಳೆದ ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸಿದ ರೀತಿಯೇ ಅವರು ಗ್ರಾಮಸ್ಥರ ಬಗ್ಗೆ ಹೊಂದಿದ್ದ ಗೌರವ, ವಿಶ್ವಾಸ ತೋರುತ್ತದೆ ಎಂದು ರಂಗಸ್ವಾಮಿ ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ದಿ.ಶಿಕ್ಷಕ ಸದಾಶಿವ ಮೂರ್ತಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೊನೆಗೂ ಸಿಕ್ತು ಕೊರೊನಾಗೆ ಮದ್ದು!? ಓದಿ.
-Hemanth Gowda