ಅತಿಥಿ ಅಂಕಣ

ಶನಿವಾರದ ರಾಶಿಫಲ (20.04.2019)

ಮೇಷರಾಶಿ: ಅಧಿಕ ಗಳಿಕೆಗೆ ಇಂದು ಶುಭದಿನವಾಗಿದೆ. ಅದು ಹಣಗಳಿಕೆಯಾಗಿರಬಹುದು. ಇಲ್ಲವೇ ವಿದ್ಯೆಯ ಗಳಿಕೆ ಆಗಿರಬಹುದು. ಇದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ ಮತ್ತು ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುವುದು.
ಶುಭಸಂಖ್ಯೆ: 09

ವೃಷಭರಾಶಿ: ಕೆಲ ಗ್ರಹಗಳ ಸಂಚಾರದಿಂದ ಇಂದಿನ ನಿಮ್ಮ ಕಾರ್ಯಗಳು ಅಡೆ-ತಡೆಯಿಲ್ಲದೆ ಮುಂದೆ ಸಾಗುವುದು. ಸಾರ್ವಜನಿಕ ಕ್ಷೇತ್ರಗಳಲ್ಲಿ ಸಂಘ ಸಂಸ್ಥೆಗಳಿಂದ ಸನ್ಮಾನ ದೊರೆಯುವ ಸಾಧ್ಯತೆ ಇರುವುದು. ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ.
ಶುಭಸಂಖ್ಯೆ: 04

ಮಿಥುನರಾಶಿ : ಕೆಲವು ನಾಟಕೀಯ ಘಟನೆಗಳು ನಿಮ್ಮ ಸುತ್ತಮುತ್ತ ನಡೆಯುವ ಸಾಧ್ಯತೆ ಇದ್ದು, ಅದನ್ನೇ ನಿಜವೆನ್ನುವ ಭ್ರಮೆಗೆ ಒಳಗಾಗುವಿರಿ. ಈ ಭ್ರಮಾಲೋಕದಿಂದ ಹೊರಬಂದಲ್ಲಿ ನೈಜ ಜೀವನದ ದರ್ಶನವಾಗುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.
ಶುಭಸಂಖ್ಯೆ: 01

ಕರ್ಕಾಟಕರಾಶಿ: ಅನೇಕ ರಕ್ಷ ಣಾವ್ಯೂಹಗಳನ್ನು ಹೆಣೆದು ಬಿಡಬೇಡಿ. ದೇವಿ ಆರಾಧನೆಯ ಜೊತೆಗೆ ಆಂಜನೇಯ ಸ್ತೋತ್ರವನ್ನು ಪಠಿಸಿ. ಪ್ರಯಾಣಕಾಲದಲ್ಲಿ ಎಚ್ಚರಿಕೆ ಅಗತ್ಯ ಖರ್ಚಿಗೆ ತಕ್ಕಷ್ಟು ಹಣ ಬರುವುದರಿಂದ ಈ ದಿನ ತೊಂದರೆ ಇರುವುದಿಲ್ಲ.

ಸಿಂಹರಾಶಿ: ನೇರ ಮಾತುಗಾರರಾದ ನೀವು ಇಂದು ತಮಾಷೆಗಾಗಿ ಆಡಿದ ಮಾತಿನಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯಪ್ರವೃತ್ತರಾಗಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
ಶುಭಸಂಖ್ಯೆ: 07

ಕನ್ಯಾರಾಶಿ: ಗತದಿನಗಳ ಅವಮಾನಗಳನ್ನು ನೆನಪಿಸಿಕೊಂಡು ಹಿಂಸೆಯನ್ನು ಅನುಭವಿಸದಿರಿ. ಹೊಸದಾದ ಸಂಕಲ್ಪ ನಿಮಗೆ ಹೊಸತನ ಮತ್ತು ಹೊಸ ಹುಮ್ಮಸ್ಸನ್ನು ಹುಟ್ಟುಹಾಕುವುದು. ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.
ಶುಭಸಂಖ್ಯೆ: 06

ತುಲಾರಾಶಿ: ಮಾತಿನ ಬಗ್ಗೆ ಸದಾ ಜಾಗೃತಿಯನ್ನು ಹೊಂದಬೇಕಾಗುವುದು. ನೀವು ಆಡಿದ ತಮಾಷೆ ಮಾತು ಪತಿಪತ್ನಿಯರಲ್ಲಿ ವಿರಸವುಂಟು ಮಾಡುವ ಸಾಧ್ಯತೆ ಇದೆ. ಹಾಗಾಗಿ ಎರಡು ಬಾರಿ ಚಿಂತಿಸಿ ಮಾತನ್ನು ಆಡಿ. ಒಳಿತಾಗುವುದು.
ಶುಭಸಂಖ್ಯೆ: 03

ವೃಶ್ಚಿಕರಾಶಿ: ಉತ್ತಮ ವಾಗ್ಮಿ ಆದ ನೀವು ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ. ಹಾಗಾಗಿ ಪ್ರಭಾವಿ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಬರುವರು ಮತ್ತು ಸಭೆ-ಸಮಾರಂಭಗಳಿಗೆ ನಿಮ್ಮನ್ನೆ ನಿರೂಪಕರನ್ನಾಗಿ ನೇಮಿಸುವ ಸಾಧ್ಯತೆ ಇರುತ್ತದೆ.
ಶುಭಸಂಖ್ಯೆ: 05

ಧನುರಾಶಿ: ಅನೇಕ ರೀತಿಯ ಜನರನ್ನು ಇಂದು ಭೇಟಿಯಾಗಲಿದ್ದೀರಿ. ಮನಸ್ಸಿನ ಗೊಂದಲವನ್ನು ನಿರ್ಮಿಸುವವರ ಬಗ್ಗೆ ವಿಶೇಷವಾದ ಎಚ್ಚರಿಕೆಯಿರಲಿ. ಕೆಲ ಗ್ರಹಗಳ ಸಂಚಾರವು ಮಕ್ಕಳ ವಿದ್ಯೆಯಲ್ಲಿ ಹಿನ್ನಡೆ ಉಂಟು ಮಾಡುವುದು.
ಶುಭಸಂಖ್ಯೆ: 09

ಮಕರರಾಶಿ: ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು. ಈ ಹಿಂದೆ ನಡೆದು ಹೋದ ಘಟನೆಗಳಿಗೆ ನೀವೆಷ್ಟು ಕಾರಣೀಭೂತರು ಎಂಬುದನ್ನು ಚಿಂತಿಸಿ. ಆದ ಅಚಾತುರ್ಯವನ್ನು ಪುನಃ ಮರುಕಳಿಸದಂತೆ ನೋಡಿಕೊಳ್ಳಿ.
ಶುಭಸಂಖ್ಯೆ: 02

ಕುಂಭರಾಶಿ: ಮನಸ್ಸನ್ನು ನಿಗ್ರಹಿಸುವಂತಹ ತುರ್ತು ಶಕ್ತಿಯನ್ನು ಸಂಪಾದಿಸಿಕೊಳ್ಳಿ. ಆಂಜನೇಯ ಮಂತ್ರವನ್ನು ಇಲ್ಲವೆ ಹನುಮಾನ್‌ ಚಾಲೀಸನ್ನು ತಪ್ಪದೆ ಪಠಿಸಿ. ನಿರ್ಧಾರಗಳನ್ನು ತಳೆಯುವಾಗ ಹಿರಿಯರ ಸಲಹೆಯನ್ನು ಸ್ವೀಕರಿಸಿ.
ಶುಭಸಂಖ್ಯೆ: 08

ಮೀನರಾಶಿ:ನಿಮ್ಮ ಮನಸ್ಸನ್ನು ಘಾಸಿಗೊಳಿಸಿ ದುರ್ಬಲರನ್ನಾಗಿ ಮಾಡುವ ಜನರನ್ನು ಅಲಕ್ಷಿಸಿಬಿಡಿ. ನಿಮಗೆ ಧೈರ್ಯವನ್ನು ತುಂಬುವ ಮತ್ತು ಸಕಾರಾತ್ಮಕವಾಗಿ ಚಿಂತಿಸುವ ಜನರ ಸಂಪರ್ಕವನ್ನು ಹೊಂದಿ. ನಿಮ್ಮ ಮುಖದಲ್ಲಿ ಮಂದಹಾಸ ಮೂಡುವುದು.
ಶುಭಸಂಖ್ಯೆ: 04

ಶುಭಂಕರೋತಿ
# ಡಾ.ಬಸವರಾಜ್ ಗುರೂಜಿ
ಜ್ಯೋತಿಷಿ. ಶ್ರೀ ಮಹಾಲಕ್ಷ್ಮಿ ಉಪಾಸಕರು
9972848937

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!