ಬೆಂಗಳೂರು : ರಷ್ಯಾ-ಉಕ್ರೇನ್ ಯುದ್ದ ಹಾಗೂ ಕರೋನಾ ಸಾಂಕ್ರಾಮಿಕ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಓದಿನ ಮೇಲೂ ಪರಿಣಾಮ ಬೀರಿದ್ದು, ಮುದ್ರಣ ಕಾಗದದ ಬೆಲೆ
ಗಗನಕ್ಕೇರಿದೆ ಇದರಿಂದಾಗಿ ನೋಟ್ ಪುಸ್ತಕಗಳ ಬೆಲೆ ದುಪ್ಪಟ್ಟಾಗಿದೆ. ಮುದ್ರಣ ಕಾಗದ ಸಿಗದೆ ಪಠ್ಯಪುಸ್ತಕಗಳ ಮುದ್ರಣದ ಮೇಲೂ ಗಂಭೀರ ಪರಿಣಾಮ ಬಿದ್ದಿದ್ದು,
ಸಕಾಲದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ಸಿಗುವುದು ಅನುಮಾನ ಎನ್ನುವಂತಾಗಿದೆ.
ಪ್ರತೀ ವರ್ಷ ಮೇ ಮಾಹೆ ಮೊದಲನೇ ವಾರದೊಳಗೆ ಶಿಕ್ಷಣ ಇಲಾಖೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡುತ್ತಿತ್ತು. ಈ ವರ್ಷ ಇನ್ನೂ ಶೇ.35 ರಷ್ಟು ಪಠ್ಯ ಪುಸ್ತಕಗಳು ಪೂರೈಕೆ ಆಗಿಲ್ಲಾ ಹೀಗಾಗಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆಯಲ್ಲಿ ಸಾಕಷ್ಟು ವಿಳಂಬವಾಗುವ ಲಕ್ಷಣ ಕಾಣಿಸುತ್ತಿದೆ. ರಷ್ಯಾ-ಉಕ್ರೇನ್ ಯುದ್ದ ಹಾಗೂ ಕರೋನಾದಿಂದಾಗಿ ಮದ್ರಣ ಕಾಗದದ ಅಭಾವ ಸೃಷ್ಟಿಯಾಗಿದೆ. ಕಡಿಮೆ ಬೆಲೆಗೆ ಮುದ್ರಣ ಕಾಗದ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಭಾರತದಲ್ಲಿ ತಯಾರಾಗುವ ಮುದ್ರಣ ಕಾಗದ ಹೊರ ದೇಶಗಳಿಗೆ ರಫ್ತಾಗುತ್ತಿತ್ತು. ಆದರೆ, ಯುದ್ದದ ಪರಿಣಾಮ ಜಾಗಿಕವಾಗಿ ಮುದ್ರಣ ಕಾಗದದ ಬೆಲೆ ದುಬಾರಿಯಾಗಿದೆ.