ಉಕ್ರೇನ್ ಜತೆಗಿನ ಯುದ್ದ ಮತ್ತು ಅದಕ್ಕೆ ಅಮೆರಿಕ ಹಾಗೂ ಯುರೋಪಿಯನ್ ದೇಶಗಳ ಬೆಂಬಲದ ನಡುವೆಯೇ, ಭೂಮಿಯ ಯಾವುದೇ ಭಾಗ ತಲುಪಬಲ್ಲ ಸಾಮಥ್ರ್ಯ
ಹೊಂದಿರುವ ಸಮ್ರ್ಯಾಟ್ ಎಂಬ ಭಾರೀ ಶಕ್ತಿಶಾಲಿ ಕ್ಷಿಪಣಿಯನ್ನು ರಷ್ಯಾ ಬುಧವಾರ ಯಶಸ್ವಿಯಾಗಿ ಪ್ರಯೊಗಿಸಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಮ್ಮ ದೇಶದ ಮೇಲೆ ಪರಮಾಣು ಪ್ರಯೋಗದ ಬೆದರಿಕೆ ಹಾಕುವ ಶತ್ರು ರಾಷ್ಟ್ರಗಳು ಎರಡೆರಡು ಬಾರಿ ಯೋಚನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
200 ಟನ್ ತೂಕದ ಈ ಕ್ಷಿಪಣಿಯು ಅಸಂಖ್ಯಾತ ಸಿಡಿ ತಲೆಗಳನ್ನು ಹೊತ್ತೊಯ್ಯುವ, ಭೂಮಿ ಮೇಲಿನ ಯಾವುದೇ ಗುರಿಯನ್ನು ಹೊಡೆದುರುಳಿಸುವ ಸಾಮಥ್ರ್ಯ ಹೊಂದಿದೆ.
ದಾಳಿ ತೀವ್ರ : ಈ ನಡುವೆ ಕಲ್ಲಿದ್ದಲು ಗಣಿಗಳು ಮತ್ತು ಕಾರ್ಖಾನೆಗಳನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಉಕ್ರೇನಿನ ನಗರಗಳು ಮತ್ತು ಸೇನಾನೆಲೆಗಳ ಮೇಲಿನ
ದಾಳಿಯನ್ನು ರಷ್ಯಾ ಪಡೆಗಳು ಇನ್ನಷ್ಟು ತೀವ್ರಗೊಳಿಸಿದೆ.