ಕರ್ನಾಟಕ ಹಾಲು ಮಹಾಮಂಡಳಿ ದೇಶದಲ್ಲೇ ಸಹಕಾರ ಕ್ಷೇತ್ರದಲ್ಲಿ 2ನೇ ಸ್ಥಾನದಲ್ಲಿದೆ. ತನ್ನ 14 ಹಾಲು ಒಕ್ಕೂಟಗಳ ಮುಖೇನ ಹಾಲು ಸಂಗ್ರಹಣೆ, ಸಂಸ್ಕರಣೆ ಮಾರಾಟ, ಪ್ರಕ್ರಿಯೇಯಲ್ಲಿ ತೊಡಗಿಸಿಕೊಂಡು ನಂದಿನಿ ಬ್ರಾಂಡ್ ಮೂಲಕ ದೊಡ್ಡ ಮಟ್ಟದಲ್ಲಿ ಬೆಳೆದಿದೆ.ಕೆಎಂಎಫ್‍ನ 14 ಹಾಲು ಒಕ್ಕೂಟಗಳಲ್ಲಿ ಒಂದಾದ ಕಲಬುರಗಿ-ಬೀದರ-ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿ.,ದಲ್ಲಿ ದಿನಾಂಕ 02.12.2019ರಂದು ನೇಮಕಾತಿ ಪ್ರಕಟಣೆಗೊಂಡಿದೆ. (ಈ ಹುದ್ದೆಗಳಿಗೆ 2017ರಲ್ಲಿಯೇ ನೇಮಕಾತಿ ಪ್ರಕಟಣೆ ಮಾಡಲಾಗಿದ್ದು, ಕಾರಣಾಂತರಗಳಿಂದ ಈಗ ಪ್ರಕ್ರಿಯೇ ಪುನ: ಪ್ರಾರಂಭಿಸಲಾಗಿದೆ ಎಂಬ ಮಾಹಿತಿ ಇದೆ ಹೆಚ್ಚಿನ ಮಾಹಿತಿಗೆ ಕಲಬುರಗಿ ಒಕ್ಕೂಟವನ್ನು ಸಂಪರ್ಕಿಸಿ)
37ವಿವಿಧ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಸಹಾಯಕ ವ್ಯವಸ್ಥಾಪಕರು(ಎಹಚ್-ಎಐ), ಸಹಾಯಕ ವ್ಯವಸ್ಥಾಪಕರು, ತಾಂತ್ರಿಕ ಅಧಿಕಾರಿ, ಮಾರುಕಟ್ಟೆ ಅಧಿಕಾರಿ, ಖರೀದಿ ಅಧಿಕಾರಿ, ಹಿರಿಯ ಕೆಮಿಸ್ಟ್, ಮಾರುಕಟ್ಟೆ ಅಧೀಕ್ಷಕರು, ವಿಸ್ತರಣಾಧಿಕಾರಿಗಳು, ಕಿರಿಯ ತಾಂತ್ರಿಕರು ಹೀಗೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ದಿನಾಂಕ: 06.12.2019ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಕೊನೆಯ ದಿನಾಂಕ 06.01.2020 ಆಗಿರುತ್ತದೆ. ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಶುಲ್ಕ ಹೆಚ್ಚಿನ ಮಾಹಿತಿಗಾಗಿ https://www.gumul.co.in/ಭೇಟಿ ನೀಡಿ, ಸಹಾಯವಾಣಿ: 9538161839 ಒಕ್ಕೂಟದ ಕೇಂದ್ರ ಕಛೇರಿ ಮಾಹಿತಿ ಕೇಂದ್ರ:08472-257620, 99001177820, 9741169211