ಸುದ್ದಿ

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಚ್‍ಎಸ್‍ವಿ ಆಯ್ಕೆ.

ಕಲಬುರ್ಗಿಯಲ್ಲಿ ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕವಿ, ವಿಮರ್ಶಕ ಎಚ್.ಎಸ್. ವೆಂಕಟೇಶಮೂರ್ತಿಯವರು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕಲಬುರ್ಗಿಯ ವಿ.ವಿ. ಆವರಣದಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2020ರ ಫೆಬ್ರವರಿ 5,6 ಹಾಗೂ 7 ರಂದು ನಡೆಯಲಿದೆ.

ಎಚ್.ಎಸ್.ವಿ.ಎಂದೇ ಖ್ಯಾತರಾಗಿರುವ ಎಚ್.ಎಸ್. ವೆಂಕಟೇಶಮೂರ್ತಿಯವರು ಮೂಲತ: ದಾವಣಗೆರೆ ಜಿಲ್ಲೆಯವರು. ಕವಿತೆ, ನಾಟಕ, ಕಾದಂಬರಿ ಮಕ್ಕಳ ಸಾಹಿತಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆಗಾಧವಾದ ಸಾಧನೆಯನ್ನು ಮಾಡಿದ್ದಾರೆ. ಇವರ ಆಯ್ಕೆಗೆ ನಾಡಿನ ಎಲ್ಲಾ ಸಾಹಿತಿಗಳು ಕವಿಗಳು ಸಾಹಿತ್ಯ ಪ್ರೇಮಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಹಗಲು ಕನಸಿನಲ್ಲಿ ಮಾಸ್ಟರ್ ಆನಂದ್!

-Naveen Ramanagara

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!