ಉಪಯುಕ್ತ ಮಾಹಿತಿ

ಒಣ ಕಣ್ಣಿನ ಸಮಸ್ಯೆಯೇ ? ಇಲ್ಲಿದೆ ನೋಡಿ ನೈಸರ್ಗಿಕ ಮನೆಮದ್ದುಗಳು

ಬೆಚ್ಚಗಿನ ನೀರಿನ ಶಾಖ: ಸ್ವಚ್ಛವಾದ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ. ಕೂಡಲೆ ಹೊರತೆಗೆದು ಹೆಚ್ಚುವರಿ ನೀರನ್ನು ಹಿಂಡಿ ಬೆಟ್ಟೆಯನ್ನು 5-10 ನಿಮಿಷಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳಬೇಕು. ಹೆಚ್ಚು ನೀರು ಸೇವಿಸುವುದು: ನೀರು ನಮ್ಮ ಕಣ್ಣುಗಳನ್ನು ತೇವವಾಗಿಡಲು ಸಹಾಯ ಮಾಡುತ್ತದೆ .ಇದರಿಂದ ಹೆಚ್ಚು ಕಣ್ಣೀರನ ಉತ್ಪಾದನೆಗೆ ಸಹಾಯ ಮಾಡುತ್ತದೆ. ಮಹಿಳೆಯರು ದಿನಕ್ಕೆ 2.5 ಲೀಟರ್ ನೀರು ಕುಡಿಯ ಬೇಕು. ಪುರುಷರು ದಿನಕ್ಕೆ 3.5 ಲೀಟರ್ ನೀರು ಕುಡಿಯಬೇಕು.

ಹರಳೆಣ್ಣೆ: ಪ್ರತಿದಿನ ಒಂದು ಹನಿಯಷ್ಟು ಹರಳೆಣ್ಣೆಯನ್ನು ಕಣ್ಣಿಗೆ ಹಾಕಿಕೊಳ್ಳುವುದರಿಂದ ಕಣ್ಣೀರಿನ ಗ್ರಂಥಿಗಳಿಗೆ ಸುಧಾರಣೆ ಕಂಡು ಬರುತ್ತದೆ. ಹರಳೆಣ್ಣೆಯಿಂದ ಮಾಡಿದ ಕಣ್ಣಿನ ಡ್ರಾಪ್ಸ್ ಅನ್ನು ದಿನಕ್ಕೆ 2 ಬಾರಿ ಉಪಯೋಗಿಸಿ.ಹೆಚ್ಚು ನಿದ್ರೆ: ನಿದ್ರಾಹೀನತೆಯಿಂದಾಗಿ ಕಣ್ಣುಗಳಲ್ಲಿ ನೀರು ಉತ್ಪತಿ ಕಡಿಮೆ ಆಗುತ್ತದೆ. ದಿನಕ್ಕೆ ಕನಿಷ್ಠ 8 ಗಂಟೆಗಳ ಕಾಲ ನಿದ್ದೆ ಮಾಡುವುದರಿಂದ ಒಣ ಕಣ್ಣುಗಳು ಹಾಗದಂತೆ ತಡೆಯುತ್ತದೆ.ಮೊಸರು: ಪ್ರತಿದಿನ ಒಂದು ಬಟ್ಟಲು ಮೊಸರು ತಿನ್ನುವುದರಿಂದ ಒಣಗುವ ತೀವ್ರತೆಯನ್ನು ಕಡಿಮೆ ಮಾಡಬಹುದು. ಮೊಸರಿನಲ್ಲಿ ವಿಟಮಿನ್ ಎ ಇರುತ್ತದೆ.

ಈ ಮೇಲಿನ ಪರಿಹಾರದಿಂದ ನಿಮ್ಮ ಒಣ ಕಣ್ಣುಗಳ ಸಮಸ್ಯೆ ಸರಿಯಾಗದಿದ್ದರೇ ಒಮ್ಮೆ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೀಸಿಕೊಳ್ಳಿ.
– ಲಕ್ಷ್ಮೀಲೋಕೇಶ್

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!