ಭಾರತ ಭೇಟಿಗಾಗಿ ಆಗಮಿಸಿರುವ ಅಮೆರಿಕಾ ಅಧ್ಯಕ್ಷ ಡೋನಲ್ಡ್ ಟ್ರಂಪ್ ಮತ್ತು ಪತ್ನಿ ಮೇಲಾನಿರವನ್ನು ಪ್ರಧಾನಿ ನರೇಂದ್ರ ಮೋದಿಯವರು ವಿಮಾನ ನಿಲ್ದಾಣದಲ್ಲಿ ಆಲಂಗಿಸಿ ಆತ್ಮೀಯವಾಗಿ ಸ್ವಾಗತಿಸದರು. ನಂತರ ನೇರವಾಗಿ ಸಬರಮತಿ ಆಶ್ರಮಕ್ಕೆ ಟ್ರಂಪ್ ದಂಪತಿಗಳನ್ನು ಕರೆದುಕೊಂಡು ಹೋದರು.
ಚರಕದ ಪಕ್ಕ ಕುಳಿತು ಡೋನಾಲ್ಡ್ ಟ್ರಂಪ್ ದಂಪತಿಗಳು ಚರಕವನ್ನು ಸೂಕ್ಷ್ಮವಾಗಿ ಗಮನಿಸಿ, ಆಶ್ರಮದ ಸಿಬ್ಬಂದಿಯಿಂದ ನೂಲನ್ನು ನೇಯುವ ಬಗೆಯನ್ನು ತಿಳಿದುಕೊಂಡರು. ನಂತರ ಆಶ್ರಮದ ಡೈರಿಯಲ್ಲಿ ತಮ್ಮ ಹಸ್ತಾಕ್ಷರವನ್ನು ದಾಖಲಿಸಿದರು.
ತದನಂತರ ಮೊಟೇರಾ ಸ್ಟೇಡಿಯಂನತ್ತ ದಾವಿಸಿದರು. ಈ ಸಂದರ್ಭದಲ್ಲಿ ಲಕ್ಷಾಂತರ ಜನರು ಡೋನಾಲ್ಡ್ ಟ್ರಂಪ್ ಮತ್ತು ಮೇಲಾನಿಯವರನ್ನು ನೋಡಲು ರಸ್ತೆಗಳ ಪಕ್ಕದಲ್ಲಿ ನಿಂತು ಅವರತ್ತ ಕೈ ಬೀಸಿ ಸ್ವಾಗತಿಸಿದರು.