ಉಕ್ರೇನ್ ಸೇನೆಗೆ ತಕ್ಷಣವೇ ಶಸ್ತ್ರಾಸ್ತ್ರ ತ್ಯಜಿಸಲು ರಷ್ಯಾ ರಕ್ಷಣಾ ಸಚಿವಾಲಯ ಸೂಚನೆ ನೀಡಿದೆ. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎನ್ನುವ ಸಂದೇಶವನ್ನು ರವಾನಿಸಿದೆ.
ಮರಿಯುಪೊಲ್ ರಕ್ಷಣೆಗೆ ನಿಂತಿರುವ ಉಕ್ರೇನ್ ಸೈನಿಕರು ಮತ್ತು ಬಾಡಿಗೆ ಸೈನಿಕರು ಪ್ರತಿರೋಧ ಕೈಬಿಡಬೇಕು.
ಶಸ್ತ್ರತ್ಯಾಗಕ್ಕೆ ವಿಧಿಸಿರುವ ಅಂತಿಮ ಗಡುವು ಮಂಗಳವಾರ ಮಧ್ಯಾಹ್ನದಿಂದಲೇ ಶುರುವಾಗಿದೆ ಎಂದು ತಿಳಿಸಲಾಗಿದೆ.
ಅರ್ಥಹೀನ ಪ್ರತಿರೋಧ ತೋರುತ್ತಿರುವ ಸೈನಿಕರಿಗೆ ತಕ್ಷಣ ಶಸ್ತ್ರ ತ್ಯಜಿಸಲು ಆದೇಶ ರವಾನಿಸುವಂತೆ ಕೀವ್ ಅಧಿಕಾರಿಗಳಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗಿದೆ. ಕೀವ್
ಅಧಿüಕಾರಿಗಳಿಂದ ಸಂದೇಶ ರವಾನೆಯಾಗದಿದ್ದರೆ ಹೋರಾಟಗಾರರು ಸ್ವಯಂ ಪ್ರೇರಿತವಾಗಿ ಶಸ್ತ್ರ ತ್ಯಜಿಸಲು ನಿರ್ಧರಿಸಬೇಕು ಎಂದು ರಕ್ಷಣಾ ಸಚಿವಾಲಯ ತಾಕೀತು ಮಾಡಿದೆ.
ಕೀವ್ ಆಡಳಿತವು ಭಯಾನಕವಾದ ಹೊಸಾ ಅಪರಾಧಗಳನ್ನು ನೆಡೆಸಲು ಸಿದ್ದತೆ ನೆಡೆಸಿರುವ ಬಗ್ಗೆ ನೈಜ ಪುರಾವೆಗಳು ಸಿಕ್ಕಿವೆ ಆಜೋವಾ ಸಮುದ್ರದ ಬಂದರು ನಗರ
ಮರಿಯುಪೋಲ್‍ನಲ್ಲಿ ಪ್ರತಿರೋಧ ತೋರುತ್ತಿರುವ ಉಕ್ರೇನ್ ಯೋಧರು ಮತ್ತು ಬಾಡಿಗೆ ಸೈನಿಕರು ದುರಂತ ಸ್ಥಿತಿಯಲ್ಲಿದ್ದಾರೆ ಎಂದು ರಷ್ಯಾ ತಿಳಿಸಿದೆ.
ಪೂರ್ವ ಉಕ್ರೇನ್ ದೇಶದಾದ್ಯಂತ ಹಲವು ಬಾರಿ ವಾಯು ದಾಳಿ ನೆಡೆಸಲಾಗಿದೆ ಎಂದು ರಷ್ಯಾ ರಕ್ಷಣ ಸಚಿವಾಲಯ ತಿಳಿಸಿದೆ. ಉಕ್ರೇನಿನ ಪೂರ್ವ ಭಾಗ ಕೇಂದ್ರೀಕರಿಸಿ ರಷ್ಯಾ ಪಡೆಗಳು ಹೊಸಾ ದಾಳಿ ಆರಂಭಿಸಿವೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿಕೆ ನೀಡಿದ ಬೆನ್ನಲ್ಲೇ ರಷ್ಯಾ ರಕ್ಷಣಾ ಸಚಿವಾಲಯದಿಂದ ಈ ಎಚ್ಚರಿಕೆ ಹೊರಬಿದ್ದಿದೆ.
ಉಕ್ರೇನ್ ಕೈಗೊಂಡಿರುವ ವಿಶೇಷ ಸೇನಾ ಕಾರ್ಯಾಚರಣೆಯು ಈಗ ಹೊಸಾ ಘಟ್ಟವನ್ನು ತಲುಪಿದೆ ಎಂದು ರಷ್ಯಾ ವಿದೇಶಾಂಗ ಸಚಿವ ಸರ್ಗಿ ಲಾವ್ರೊವ್ ಮಂಗಳವಾರ ತಿಳಿಸಿದ್ದಾರೆ. ಇಂಡಿಯಾ ಟುಡೆ ಟಿ.ವಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು, ಸೇನಾ ಕಾರ್ಯಾಚರಣೆಯ ಮತ್ತೊಂದು ಹಂತವು ಈಗ ಪ್ರಾರಂಭವಾಗುತ್ತಿದೆ ಎಂದು ಹೇಳಿದರು.