ಮುತ್ತಪ್ಪ ರೈ ಸಾವಿನ ಸುದ್ದಿ ಕೇಳಿದ ಎಲ್ಲರಿಗೂ ಈ ಸುದ್ದಿಯೂ ಸುಳ್ಳಿರಬಹುದಾ ಅಂತ ಪರೀಕ್ಷಿಸಿದ್ದಾರೆ. ಏಕೆಂದರೆ ಈ ರೀತಿ ಸುದ್ದಿ ಮುತ್ತಪ್ಪ ರೈ ವಿಷಯದಲ್ಲಿ ಸಾಕಷ್ಟು ಬಾರಿ ಗಾಳಿಸುದ್ದಿಯಾಗಿತ್ತು. ಆದರೆ ಈ ಬಾರಿ ನಿಜವಾಗಲೂ ಮುತ್ತಪ್ಪ ರೈ ಬಾರದ ಲೋಕಕ್ಕೆ ಹೋಗಿದ್ದಾರೆ. ಶುಕ್ರವಾರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದು ಚಿರನಿದ್ರೆಗೆ ಜಾರಿದ್ದಾರೆ.
ಮುತ್ತಪ್ಪ ರೈ ಅಂದ್ರೆ ಡಾನ್ ಅಂತ ಈಗಲೂ ಎಷ್ಟೋ ಜನ ನೆನಪಿಸಿಕೊಳ್ಳುತ್ತಾರೆ. ಡಾನ್ ಆಗಿದ್ದು ಇತಿಹಾಸ. ಆದರೆ ಮುತ್ತಪ್ಪ ರೈ ಜಯಕರ್ನಾಟಕ ಸಂಘಟನೆಯ ಮೂಲಕ ರಾಜ್ಯದ ಉದ್ದಗಲಕ್ಕೂ ಸಮಾಜಮುಖಿಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ವಿಧಿಮುಂದೆ ಮನುಷ್ಯ ಯಾವತ್ತಿಗೂ ಗೆಲ್ಲಲಾರ! ಕ್ಯಾನ್ಸರ್ ಎಂಬ ಮಾರಿ ಮುತ್ತಪ್ಪ ರೈ ದೇಹದೊಳಕ್ಕೆ ಸೇರಿಕೊಂಡಾಗಲೇ ಮುತ್ತಪ್ಪ ರೈ ನಿರ್ಧರಿಸಿ ಬಿಟ್ಟಿದ್ದರು. ಟಿಕೇಟ್ ಕನ್ಫ್ರ್ಮ್ ಅಂತ!! ಆದರೂ ಎದೆಗುಂದದೆ ಕ್ಯಾನ್ಸರ್ ವಿರುದ್ದ ಹೋರಾಡಿದ್ದರು ಕೊನೆಗೆ ಗೆದ್ದಿದ್ದು ಮಾತ್ರ ಕ್ಯಾನ್ಸರ್.
ಮುತ್ತಪ್ಪ ರೈ ಮೂಲತ ಪುತ್ತೂರಿನವರೂ ಬದುಕು ಅವರನ್ನು ಕರೆದುಕೊಂಡು ಹೋಗಿದ್ದು ಭೂಗತ ಲೋಕದೆಡೆಗೆ ಬೆಂಗಳೂರಿನಿಂದ ದುಬೈಗೆ ಹೋಗಿ ಭೂಗತಲೋಕದ ದೊರೆಯಾಗಿ ಆಳಿದ ಮುತ್ತಪ್ಪರೈಗೆ ಭೂಗತ ಲೋಕದಿಂದ ಹೊರಬರಬೆಕೇಂದು ನಿರ್ಧರಿಸಿ ಎಲ್ಲವನ್ನೂ ತ್ಯಜಿಸಿ ಭಾರತಕ್ಕೆ ಬಂದರು ಅವರ ಮೇಲಿದ್ದ ಅಷ್ಟೂ ಕೇಸ್ಗಳು ಖುಲಾಸೆಯಾಗಲು ತುಂಬಾ ದಿನ ಬೇಕಾಗಲಿಲ್ಲ. ಜಯಕರ್ನಾಟಕ ಸಂಘಟನೆ ಕಟ್ಟಿಕೊಂಡು ರಾಜ್ಯದ ಉದ್ದಗಲಕ್ಕೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಬೆಂಗಳೂರು ಮೈಸೂರು ರಸ್ತೆಯ ಬಿಡದಿ ಸಮೀಪ ಭವ್ಯ ಬಂಗಲೆಯಲ್ಲಿ ತಮ್ಮ ಬದುಕನ್ನು ಕಳೆಯುತ್ತಿದ್ದ ಮುತ್ತಪ್ಪ ರೈ ಕಾನ್ಸರ್ಗೆ ತುತ್ತಾದ ಮೇಲೆ ಕೆಲವು ದಿನಗಳ ಹಿಂದೆ ಸುದ್ದಿಗೋಷ್ಟಿ ನಡೆಸಿ ಅಂತರಂಗದ ಮಾತುಗಳನ್ನು ಹಂಚಿಕೊಂಡಿದ್ದರು. ವಿಧಿ ಅವರನ್ನು ಕರೆದುಕೊಂಡಿದೆ. ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಬಿಡದಿಯ ಸ್ವಗೃಹದಲ್ಲೇ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. ಲಾಕ್ಡೌನ್ ಇರುವುದರಿಂದ ಅವರ ಅಭಿಮಾನಿಗಳು ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲವೇನೊ. ಮತ್ತೇ ಹುಟ್ಟಿ ಬನ್ನಿ ಮುತ್ತಪ್ಪ ರೈ ಎಂಬ ಪ್ಲೆಕ್ಸ್ಬೋರ್ಡುಗಳು ಮೈಸೂರು ಬೆಂಗಳೂರು ರಸ್ತೆಯುದ್ದಕ್ಕೂ ಹಾಕಿದ್ದು ಅವರ ಮೇಲಿನ ಪ್ರೀತಿಯನ್ನು ತೋರಿಸುತ್ತಿದೆ.