ರಾಮನಗರ ಫೆ. ೧೦ (ಕರ್ನಾಟಕ ವಾರ್ತೆ):- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಫೆ.೧೦ರಂದು ರಾಮನಗರ ಟೌನ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಪ್ರಗತಿ ದರ್ಶನ ವಿಶೇಷ ಕಾರ್ಯಕ್ರಮವನ್ನು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಮಂಜುನಾಥ್ ಅವರು ಚಾಲನೆ ನೀಡಿದರು.
ಚಾಲನೆ ನೀಡಿದ ನಂತರ ಮಾತನಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಹತ್ವಾಕಾಕ್ಷಿ ಕಾರ್ಯಕ್ರಮಗಳು/ ಯೋಜನೆಗಳಾದ ಡಯಾಲಿಸಿಸ್ ಸೌಲಭ್ಯ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ವಿಸ್ತರಣಾ ಚಿಕಿತ್ಸಾಲಯಗಳು, ಟೆಲಿ ಮೆಡಿಸಿನ್, ದಂತ ಭಾಗ್ಯ ಯೋಜನೆ, ಕೆ.ಪಿ.ಎಂ.ಇ ಕಾಯ್ದೆ ಹಾಗೂ ಇತರೆ ಯೋಜನೆಗಳ ಕುರಿತು ಜಾಹೀರಾತುಗಳನ್ನು ಎಲ್.ಇ.ಡಿ ವಾಹನಗಳ ಮುಖಾಂತರ ರಾಮನಗರ ಜಿಲ್ಲೆಯ ರಾಮನಗರ/ಚನ್ನಪಟ್ಟಣ/ ಮಾಗಡಿ/ ತಾಲ್ಲೂಕುಗಳ ವ್ಯಾಪ್ತಿಯಲಿ ತಲಾ ೦೫ ರಂತೆ ನಮ್ಮ ಜಿಲ್ಲೆಯಲ್ಲಿ ಒಟ್ಟು ೧೫ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಮಾಹಿತಿಯನ್ನು ತಿಳಿದುಕೊಂಡು ಇತರರಿಗೆ ತಿಳಿಸುವುದರ ಮೂಲಕ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಜಿ.ಎಲ್ ಪದ್ಮಾ, ರಾಮನಗರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶಶಿಕಲಾ, ಜಿಲ್ಲಾ ಆರೋಗ್ಯ ಶಿಕ್ಷಾಣಾಧಿಕಾರಿ ಬಿ.ಎಸ್. ಗಂಗಾಧರ್, ಸಂಚಾರಿ ನಿಯಂತ್ರಣಾಧಿಕಾರಿ ಬಸವರಾಜು, ಮೇಲ್ವಿಚಾರಕಾರದ ಶಂಭುಲಿಂಗಯ್ಯ, ದಾಸಪ್ಪ ಸೇರಿದಂತೆ ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.
credit: dipr ramangara