ಕರ್ನಾಟಕ ಹಾಲು ಮಹಾ ಮಂಡಳಿ (ಕೆ.ಎಮ್.ಎಫ್) ರಾಷ್ಟ್ರದ 2 ನೇ ಅತಿ ದೊಡ್ಡ ಸಹಕಾರಿ ಹಾಲು ಮಹಾ ಮಂಡಳಿಯಾಗಿದ್ದು, ಕಹಾಮದ “ನಂದಿನಿ” ಬ್ರಾಂಡ್ ಅಡಿಯಲ್ಲಿ ಉತ್ಕøಷ್ಟ ಗುಣಮಟ್ಟದ ಹಾಲು, ಮೊಸರು, ಮಜ್ಜಿಗೆ, ಗುಡ್ಲೈಫ್ ಹಾಲು, ತುಪ್ಪ, ಬೆಣ್ಣೆ, ಸುವಾಸಿತ ಹಾಲು, ಪನೀರ್ ಇತ್ಯಾದಿ ಉತ್ಪನ್ನಗಳ ಜೊತೆಗೆ ಸಿಹಿ ಉತ್ಪನ್ನಗಳಾದ ಮೈಸೂರ್ ಪಾಕ್, ಪೇಡಾ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಬಾದಾಮ್ ಬರ್ಪಿ, ಕ್ಯಾಶು ಬರ್ಫಿ, ಡ್ರೈಪ್ರೂಟ್ರ್ಸ್ ಬರ್ಫಿ, ಕೋಕೋನಟ್ ಬರ್ಫಿ, ಚಾಕೋಲೇಟ್ ಬರ್ಫಿ, ಕುಂದ, ಜಾಮೂನ್, ರಸಗುಲ್ಲಾ ಇತ್ಯಾದಿ 20 ಕ್ಕೂ ಹೆಚ್ಚು ಸಿಹಿ ಹಾಲಿನ ಉತ್ಪನ್ನಗಳಿದ್ದು, ಬಹುತೇಕ ನಂದಿನಿ ಗ್ರಾಹಕರು ಮತ್ತು ಸಾರ್ವಜನಿಕರಿಗೆ ನಂದಿನಿ ಹಾಲು, ಮೊಸರು, ಮಜ್ಜಿಗೆ, ಗುಡ್ಲೈಫ್, ಸುವಾಸಿತ ಹಾಲು, ಮೈಸೂರು ಪಾಕ್, ಪೇಡ, ಕ್ಯಾಶು ಬರ್ಫಿ ಮಾತ್ರ ಪರಿಚಯವಿದೆ, ಇನ್ನು ಕೇಲವು ಗ್ರಾಹಕರಲ್ಲಿ “ನಂದಿನಿ” ಉತ್ಪನ್ನಗಳೆಂದರೆ ಹಾಲು ಮತ್ತು ಮೊಸರು ಎಂಬ ಭಾವನೆಯಿದೆ.
ಈ ಹಿನ್ನೆಲೆಯಲ್ಲಿ, ಕೆ.ಎಮ್.ಎಫ್ ಈ ಕ್ರಿಸ್ಮಸ್ ಮತ್ತು ಹೊಸ ವರ್ಷದಿನಾಚರಣೆ ಸಂಧರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಿಹಿ ಉತ್ಪನ್ನಗಳನ್ನು ಬಳಸುವುದನ್ನು ಗಮನದಲ್ಲಿರಿಸಿ ಮತ್ತೊಮ್ಮೆ “ನಂದಿನಿ ಸಿಹಿ ಉತ್ಸವ” ವನ್ನು ಜಾರಿ ಮಾಡಲಾಗುತ್ತಿದೆ. ಈ ಉತ್ಸವದ ಮೂಲಕ ಗ್ರಾಹಕರಿಗೆ ನಂದಿನಿ ಶ್ರೇಣಿಯ ಎಲ್ಲಾ ಸಿಹಿ ಉತ್ಪನ್ನಗಳನ್ನು ಪರಿಚಯಿಸುವ ಉದ್ದೇಶದಿಂದ ದಿನಾಂಕ 21.12.2018 ರಂದು ಬೆಂಗಳೂರಿನ ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್ನಲ್ಲಿರುವ ನಂದಿನಿ ಪಾರ್ಲರ್ನಲ್ಲಿ “ನಂದಿನಿ ಸಿಹಿ ಉತ್ಸವ”ಕ್ಕೆ ಅಧಿಕೃತವಾಗಿ ಚಾಲನೆಯನ್ನು ಕೆ.ಎಮ್.ಎಫ್ನ ಮಾರುಕಟ್ಟೆ ನಿರ್ದೇಶಕರಾದ ಶ್ರೀಯುತ ಎಂ.ಟಿ. ಕುಲಕರ್ಣಿರವರು ನೀಡಿದರು. ಆಡಳಿತ ವಿಭಾಗದ ನಿರ್ದೇಶಕರಾದ ಶ್ರೀಯುತ ಸುರೇಶ್ಕುಮಾರ್, ವಿತ್ತ ವಿಭಾಗದ ನಿರ್ದೇಶಕರಾದ ಶ್ರೀಯುತ ರಮೇಶ್ ಕನ್ನೂರು ಹಾಗೂ ಕಹಾಮದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ದಿನಾಂಕ 21.12.2018 ರಿಂದ 09.01.2019 ರವರೆಗೆ 20 ದಿನಗಳ ಕಾಲ“ನಂದಿನಿ ಸಿಹಿ ಉತ್ಸವ” ಚಾಲ್ತಿಯಲ್ಲಿರುತ್ತದೆ. ಎಲ್ಲಾ ನಂದಿನಿ ಸಿಹಿ ಉತ್ಪನ್ನಗಳ ಗರಿಷ್ಠ ಮಾರಾಟ ದರದ ಮೇಲೆ 10% ರಷ್ಟು ರಿಯಾಯಿತಿಯನ್ನು ನೇರವಾಗಿ ಗ್ರಾಹಕರಿಗೆ ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ನಂದಿನಿ ಪಾರ್ಲರ್ಗಳು, ಮಳಿಗೆಗಳು, ಕ್ಷೀರ ಕೇಂದ್ರಗಳು, ಸೂಪರ್ ಮಾರ್ಕೆಟ್ಗಳಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟ ದರಗಳ ಮೇಲೆ 10% ರಿಯಾಯಿತಿ ನೇರವಾಗಿ ಗ್ರಾಹಕರಿಗೆ ಲಭ್ಯವಿರುತ್ತದೆ,