ಉಪಯುಕ್ತ ಮಾಹಿತಿ

ಯುಗಾದಿ ಹಬ್ಬದಲ್ಲಿ ತೋರಣ ಕಟ್ಟಲು ಬಳಸಿ ಕಡ್ಡಿ! ಸ್ಟೆಪ್ಲರ್ ಪಿನ್ಗೆ ಹೇಳಿ ಬೈ ಬೈ!

ಯುಗಾದಿ ಹಬ್ಬ ಬರುತ್ತಿದೆ ಜೊತೆಗೆ  ಸಾಲು ಹಬ್ಬಗಳು ಸರದಿಯಲ್ಲಿವೆ. ನಮ್ಮ ಮನೇಲಿ ಹಬ್ಬಯಿದೆ ಎನ್ನುವುದನ್ನು ಸೂಚಿಸಲು ನಾವು ಬಾಗಿಲಿಗೆ ಕಟ್ಟುವ ಹಸಿರೆಲೆಗಳ ತೋರಣಕ್ಕೆ ಮಾವಿನ ಎಲೆಗಳ ಬಳಸುವುದು ವಾಡಿಕೆ ಮತ್ತು ದಾರದ ಮೇಲೆ ಎಲೆಗಳನ್ನು ಮಡಚಿ ಚುಚ್ಚುವುದು ಪದ್ಧತಿ.

ಅದಕ್ಕೆ ಬದಲಾಗಿ ಇತ್ತೀಚೆಗೆ ನಾವು ಕಂಡುಕೊಂಡ ಸುಲಭ ಉಪಾಯ ಸ್ಟೆಪ್ಲರ್ ಪಿನ್ ಬಳಸಿ ಒಂದೇ ನಿಮಿಷದಲ್ಲಿ ಮುಗಿಸಿಬಿಡುವುದು.ಆದರೆ ಹಬ್ಬದ ಆನಂತರ ತೋರಣ ಕಸದ ಜೊತೆ ಎಸೆದಾಗ ಅವನ್ನು ಆಹಾರವನ್ನು ಅರಸಿ ಬೀದಿಬದಿಯ ದನಗಳು ಬಂದು ಸೇವಿಸುವುದ ನಾವೆಲ್ಲರೂ ಕಂಡಿದ್ದೇವೆ ಅವು ಹಸುವಿನ ಹೊಟ್ಟೆಯಲ್ಲಿ ಸ್ಟೆಪ್ಲರ್ ಪಿನ್ಅವಕ್ಕೆ ಕೊಡಬಾರದ ಯಾತನೆ ಕೊಟ್ಟು ಜೀವಕ್ಕೂ ಹಾನಿಕಾರಕ.

 

ಹಾಗಾದರೆ ತೋರಣಕ್ಕೆ ಚುಚ್ಚಲು ಕಡ್ಡಿ ಎಲ್ಲಿ ಸಿಗುತ್ತೆ? ಆ ಕಡ್ಡಿಗಳು ನಮ್ಮ ಮನೆಯಲ್ಲೇ ಇವೆ. ದೇವರಿಗೆ ಊದಿನಕಡ್ಡಿ ಹಚ್ಚಿ ನಂತರ ಅವು ಪೂರ್ತಿಯಾಗಿ ಉರಿದ ಮೇಲೆ ಉಳಿದ ಕಡ್ಡಿಯು ತೋರಣ ಕಟ್ಟುವ ಎಲೆಗಳಿಗೆ ಚುಚ್ಚಲು ಬಳಸಬಹುದು.

ಸಣ್ಣ,ತೆಳ್ಳ ಹಾಗೂ ಒಂದೇ ಅಳತೆಯ ಕಡ್ಡಿಗಳು ಇರುವುದರಿಂದ ಚುಚ್ಚುವುದೂ ಸುಲಭ ಮತ್ತು ತೋರಣ ಕೂಡಾ ಚೆನ್ನಾಗಿ ಕಾಣುವುದು. ಒಂದು ತೋರಣ ಕಟ್ಟಲು ಮನೆಯ ಒಂದು ವಾರದ ಅಗರಬತ್ತಿ ಕಡ್ಡಿಗಳ ಸ್ಟಾಕ್ ಸಾಕಾಗುತ್ತೆ. ಈ ಐಡಿಯಾ ಹಲವರಿಗೆ ತಿಳಿದಿರಲೂಬಹುದು. ಎಷ್ಟೋಸಲ ಗೊತ್ತಿದ್ದೂ ನಾವು ಮಾಡುವ ತಪ್ಪುಗಳ ತಪ್ಪಿಸಲು ಸಾಧ್ಯವಿದೆ.

ನಿವೊಬ್ಬರೇ ಓದಿ ಸುಮ್ಮನಾಗಬೇಡಿ. ಇದನ್ನು ನಿಮ್ಮ ಗೆಳೆಯರ ಬಳಗಕ್ಕೆ ಹಂಚಿಕೊಳ್ಳಿ ಒಳ್ಳೆಯ ವಿಚಾರ ಗರಿಕೆಯ ಹಾಗೆ ಹಬ್ಬಲಿ ನಿಮ್ಮೇಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!