ಉಪಯುಕ್ತ ಮಾಹಿತಿ

ಒಂದು ಒಳ್ಳೆಯ ಪುಸ್ತಕ ನಿಮ್ಮ ಬದುಕನ್ನೇ ಬದಲಿಸಬಹುದು! ಓದಿ!!

ಇಂದು ವಿಶ್ವ ಪುಸ್ತಕ ದಿನ ( ಏಪ್ರಿಲ್ 23) ಪುಸ್ತಕ ಓದುವ ಹವ್ಯಾಸ ಇರುವವರಿಗೆ ಓದಿನ ರುಚಿ ಗೊತ್ತಿರುತ್ತದೆ. ಓದು ಮನುಷ್ಯನನ್ನು  ಮನುಷ್ಯನನ್ನಾಗಿ ನೋಡುವುದನ್ನು ಕಲಿಸುತ್ತದೆಂದು ಎಲ್ಲೋ ಓದಿದ ನೆನಪು! ನಿಜ ಇಂದಿನ ಆಧುನಿಕ ಯುಗದಲ್ಲಿ ಎಲ್ಲವೂ ಸ್ಮಾರ್ಟ್! ಭಾವನಾತ್ಮಕವಾಗಿ ಸ್ಪಂದಿಸುವ ಜನರು ತುಂಬಾ ಕಡಿಮೆಯಾಗುತ್ತಿದ್ದರೇನೋ ಅಂತ ಅನಿಸುತ್ತದೆ. ಪುಸ್ತಕ ಓದುವ ವ್ಯಕ್ತಿಗಳು ಮನುಷ್ಯತ್ವದ ಜೊತೆಗೆ ಅಂತ:ಕರಣವನ್ನು ಅರ್ಥಮಾಡಿಕೊಂಡು ಎಲ್ಲರೊಂದಿಗೂ ನಗು ನಗುತ್ತಾ ಇರುತ್ತಾರೆ.

ಓದುವ ಹವ್ಯಾಸ ಬಾಲ್ಯದಿಂದಲೇ ರೂಡಿಸಿಕೊಳ್ಳಬೇಕು. ಇಂದಿನ ಮಕ್ಕಳಿಗೆ ಕಂಪ್ಯೂಟರ್, ಮೊಬೈಲ್ ಅಟ್ಯಾಚ್‍ಮೆಂಟ್ ಜಾಸ್ತಿ ಇರುತ್ತದೆ. ಪುಸ್ತಕ ಓದುವ ಹವ್ಯಾಸ ಕಡಿಮೆ ಇರುತ್ತದೆ. ಪೋಷಕರು ಮಕ್ಕಳಿಗೆ ಬಾಲ್ಯದಲ್ಲೇ ಅವರ ವಯಸ್ಸಿಗೆ ಅನುಗುಣವಾಗಿ ಸಿಗುವ ಪುಸ್ತಕಗಳನ್ನು ಕೊಡಿಸಿ ಓದಲು ಪ್ರೇರೆಪಿಸಬೇಕು. ಜೊತೆಗೆ ಪೋಷಕರು ಸಹ ಅವರೊಟ್ಟಿಗೆ ಓದುವ ಅಭ್ಯಾಸ ಬೆಳೆಸಿಕೊಂಡರೆ ಪುಸ್ತಕ ಓದುವ ಹವ್ಯಾಸ ಅಭ್ಯಾಸವಾಗಿಬಿಡುತ್ತದೆ.

ಪ್ರತಿ ದಿನ ಹೊಸ ಹೊಸ ಪುಸ್ತಕಗಳು ಬಿಡುಗಡೆಯಾಗುವುದನ್ನು ನಾವು ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಒಂದು ಒಳ್ಳೆಯ ಪುಸ್ತಕ ಒಳ್ಳೆಯ ಗೆಳೆಯ ಇದ್ದಹಾಗೆ ಪುಸ್ತಕಗಳನ್ನು ಖರೀದಿಸಿ ಓದುವುದನ್ನು ರೂಡಿಸಿಕೊಳ್ಳಬೇಕು. ಪುಸ್ತಕಗಳು ನಿಮ್ಮ ಜೊತೆ ಶಾಶ್ವತವಾಗಿರುತ್ತವೆ. ಅವುಗಳಿಗೆ ಸಾವೆಂಬುದೇ ಇಲ್ಲ! ಕಥೆ, ಕಾದಂಬರಿ, ವ್ಯಕ್ತಿತ್ವ ವಿಕಸನ, ಕವಿತೆ, ಲಲಿತ ಪ್ರಬಂಧಗಳು, ಆತ್ಮಚರಿತ್ರೆ, ಪ್ರವಾಸ ಕಥನ ಹೀಗೆ ಅನೇಕ ಪ್ರಕಾರಗಳು ಓದುಗರಿಗೆ ಸಿಗುತ್ತವೆ.

ಪುಸ್ತಕಗಳು ನಿಮ್ಮ ಭವಿಷ್ಯದ ದಾರಿದೀಪ! ಒಂದು ಒಳ್ಳೆಯ ಪುಸ್ತಕ ನಿಮ್ಮ ಬದುಕನ್ನೇ ಬದಲಿಸಬಹುದು! ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮನ್ನು ಯಾವತ್ತಿಗೂ ಒಂಟಿಯಾಗಿಸದಂತೆ ಜೊತೆ ಜೊತೆ ಬರುವ ಏಕೈಕ ಗೆಳೆಯ ಪುಸ್ತಕಗಳು! ದೇಶ ಸುತ್ತಬೇಕು ಕೋಶ ಓದಬೇಕು! ಆಗಲೇ ಬದುಕು ಶ್ರೀಮಂತವಾಗುವುದು!
-ನವೀನ್ ರಾಮನಗರ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!