ಉಪಯುಕ್ತ ಮಾಹಿತಿ

ಹಾಸನ ಹಾಲು ಒಕ್ಕೂಟದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಹಾಸನ ಹಾಗೂ ಇದರ ಘಟಕಗಳಿಗೆ ವಿವಿಧ  195 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿ ಅರ್ಜಿ ಫಾರಂಗೆ ರೂ. 250/- ಪಾವತಿಸಿ ಒಕ್ಕೂಟದ ಆಡಳಿತ ಕಛೇರಿಯಲ್ಲಿ ಕಛೇರಿ ವೇಳೆಯಲ್ಲಿ ಪಡೆಯಬಹುದಾಗಿದೆ. ಅರ್ಜಿಯನ್ನು ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಸ್ಪಷ್ಟವಾಗಿ ಬರೆದು ಅಥವಾ ಬೆರಳಚ್ಚು ಮಾಡಿಸಿ / ಭರ್ತಿಮಾಡಿ ಅರ್ಜಿ ಶುಲ್ಕದ ಮೊತ್ತ ರೂ. 1000/- ( ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ , ಪ್ರವರ್ಗ 1 ರ ಅಭ್ಯರ್ಥಿಗಳಿಗೆ ರೂ. 500/-) ಮೌಲ್ಯದ ಡಿ.ಡಿ.ಯನ್ನು Managing Director, Haasan co-opertive milk union ltd., Haasan ಇವರ ಹೆಸರಿನಲ್ಲಿ( ಹಾಸನದಲ್ಲಿ ಸಂದಾಯವಾಗುವಂತೆ) ಪಡೆದು ಅರ್ಜಿಯ ಜೊತೆ ಲಗತ್ತಿಸಬೇಕು.

ಅರ್ಜಿಯ ಜೊತೆ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿಯ ಮೇಲ್ಬಾಗದಲ್ಲಿ ಅಂಟಿಸಿ ಎಲ್ಲಾ ದಾSಲೆಗಳನ್ನೊಳಗೊಂಡ ಸೀಲ್ಡ್ ಮಾಡಿದ ಲಕೋಟೆಯ ಮೇಲೆ ಅರ್ಜಿ ಸಲ್ಲಿಸುವ ಹುದ್ದೆಯ ಹೆಸರನ್ನು ಬರೆದು ವ್ಯವಸ್ಥಾಪಕ ನಿರ್ದೆಶಕರು ಹಾಸನ ಸಹಕಾರಿ ಹಾಲು ಒಕ್ಕೂಟ, ಕೈಗಾರಿಕಾ ಕ್ಷೇತ್ರ, ಬಿ.ಎಂ.ರಸ್ತೆ, ಹಾಸನ-573201 ಈ ವಿಳಾಸಕ್ಕೆ ದಿನಾಂಕ 13.08.2018ರ ಸಮಯ ಸಂಜೆ 5.30ರ ಒಳಗೆ ತಲುಪುವಂತೆ ಅಂಚೆ/ಕೋರಿಯರ್ ಅಥವಾ ಮುದ್ದಾಂ ತಲುಪಿಸಬೇಕು.

ಹುದ್ದೆಗಳು: ಸಹಾಯಕ ವ್ಯವಸ್ಥಾಪಕರು, ಮಾರುಕಟ್ಟೆ ಅಧಿಕಾರಿ , ಖರೀದಿ ಅಧಿಕಾರಿ, ತಾಂತ್ರಿಕಾಧಿಕಾರಿ, ಲೆಕ್ಕಾಧಿಕಾರಿ , ಡೇರಿ ಸೂಪರ್ ವೈಸರ್, ವಿಸ್ತಾರಣಾಧಿಕಾರಿ, ಲೆಕ್ಕ ಸಹಾಯಕ, ಮಾರುಕಟ್ಟೆ ಸಹಾಯಕ ಇನ್ನೂ ಮುಂತಾದ ಹುದ್ದೆಗಳು ಇರುತ್ತವೆ. ಅರ್ಜಿಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯದಲ್ಲಿ ಹಾಸನ ಹಾಲು ಒಕ್ಕೂಟವನ್ನು ಸಂಪರ್ಕಿಸುವುದು.

-bbmnews

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!