ಅಂತರಿಕ್ಷದಲ್ಲಿ ಹತ್ತು ಹಲವು ದಾಖಲೆಗಳೊಂದಿಗೆ ವಿಶ್ವದ ಗಮನ ಸೆಳೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದಿನಿಂದ ಚಂದ್ರಲೋಕದಲ್ಲಿ ಹೊಸ ಪರ್ವ ಆರಂಭಿಸಿದೆ. ಜುಲೈ 15ರಂದು ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಚಂದ್ರಯಾನ-2 ಇಂದು ಮಧ್ಯಾಹ್ನ 2.43ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿತು.