ವಿಜ್ಞಾನ ಮತ್ತು ತಂತ್ರಜ್ಞಾನ

ಇನ್ನೂ ಮುಂದೆ ವಾಟ್ಸಪ್ ಸಂದೇಶ ಫಾರ್ವರ್ಡ್ ಮಿತಿ 5 ನಂಬರ್ ಗೆ ಮಾತ್ರ ಸಿಮೀತ!!

ಇನ್ನೂ ಮುಂದೆ ವಾಟ್ಸಪ್ ಸಂದೇಶ ಫಾರ್ವರ್ಡ್ ಮಿತಿ 5 ನಂಬರ್ ಗೆ ಮಾತ್ರ ಸಿಮೀತ!!

ಮೊಬೈಲ್ ಎಂಬ ಸಾಧನ ಇವತ್ತು ಪ್ರತಿಯೊಬ್ಬರ ಕೈಯಲ್ಲೂ ಇದೆ! ಅದರಲ್ಲೂ ಅಂಡ್ರಾಯಡ್ ಮೊಬೈಲ್ ಇದ್ದು ಅದಕ್ಕೆ ನೆಟ್ ಸೌಲಭ್ಯವಿದ್ದರಂತೂ ಮುಗಿದೇ ಹೋಯಿತು. ಫೇಸ್‍ಬುಕ್, ಟ್ಟಟರ್,  ವಾಟ್ಸಪ್ ಗಳಲ್ಲೇ ಪೂರ್ತಿ ಸಮಯವನ್ನು ಕಳೆಯುವವರ ಸಂಖ್ಯೆ ಹೆಚ್ಚಿದೆ.

ಸಾಮಾಜಿಕ ಜಾಲ ತಾಣಗಳು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಂಡರೆ ನಿಜಕ್ಕೂ ಅದು ಸಾರ್ಥಕವಾಗುತ್ತದೆ. ದುರಂತವೆಂದರೆ ಅದನ್ನು ಬೇಕಾಬಿಟ್ಟಿ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ ಮೂಲಕ ಅದರ ದುರ್ಬಳಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಯುವ ಸಮಾಹ ವಿದ್ಯಾರ್ಥಿಗಳು ಇದರ ಮೋಹಕ್ಕೆ ಬಿದ್ದು ತಮ್ಮ ಗುರಿಯನ್ನೇ ಮರೆತು ಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

ಇತ್ತಿಚೇಗೆ ಸುಳ್ಳು ಸುದ್ಧಿಗಳನ್ನು ಹೆಚ್ಚು ಹೆಚ್ಚು ಹರಡುವ ಮೂಲಕ ಸಮಾಜದಲ್ಲಿ ಅನೇಕ ಹಿಂಸೆಗಳಿಗೆ, ಹತ್ಯ ಪ್ರಕರಣಗಳಿಗೆ ಈ ವಾಟ್ಸಪ್ ಕಾರಣವಾಗುತ್ತಿದೆ. ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಾಟ್ಸಪ್ ಬಳಕೆದಾರರು ಅತಿ ಹೆಚ್ಚು ಇದ್ದು. ಯಾವುದೇ ವಾಟ್ಸಪ್ ಸಂದೇಶ ಬಂದರೂ ಕೆಲವರು ಅದರ ನೈಜತೆಯನ್ನು ಪರೀಕ್ಷಿಸದೆ ಮತ್ತೊಬ್ಬರಿಗೆ ಫಾವರ್ಡ್ ಮಾಡಿಬಿಡುತ್ತಾರೆ. ಗ್ರೂಪ್‍ಗಳಲ್ಲಂತೂ ಗುಡ್‍ಮಾರ್ನಿಂಗ್, ಗುಡ್‍ನೈಟ್ ಸಂದೇಶಗಳನ್ನು ನೋಡಿ ನೋಡಿ ಸಾಕಷ್ಟು ಜನರಿಗೆ ವಾಕರಿಕೆ ಬರುವಷ್ಟು ಬೇಸವಾಗಿ ಬಿಟ್ಟಿದೆ. ಇನ್ನೂ ಸಂದೇಶದ ನಿಜವಾದ ಸೃಷ್ಟಿಕರ್ತ ಯಾರು ಅಂತ ಗೊತ್ತೇ ಆಗುವುದಿಲ್ಲ ಕೆಲವರಂತೂ ಎಡಿಟ್, ಕ್ರಾಪ್ ಮಾಡಿ ಮಾಡಿ ಫಾವರ್ಡ್ ಮಾಡುವ ಗೀಳಿಗೆ ಬಿದ್ದಿದ್ದಾರೆ.

ಇಂತಹ ಹುಚ್ಚಾಟಗಳಿಗೆ ಕಡಿವಾಣ ಹಾಕಲು ವಾಟ್ಸಪ್ ಸಂಸ್ಥೆ ಮುಂದಾಗಿರುವುದು ನಿಜಕ್ಕೂ ಸಮಾಧಾನ ತಂದಿದೆ. ಇನ್ನೂ ಮುಂದೆ ಒಂದು ಬಾರಿಗೆ 5 ನಂಬರ್ ಗೆ ಮಾತ್ರ ಚಾಟ್ ಮಾಡಲು ಸಾಧ್ಯವಾಗುವಂತೆ ನಿರ್ಭಂದ ಹೇರಲಿದೆ. ಜತೆಗೆ ಆಡಿಯೋ, ಫೋಟೊ, ಮತ್ತು ವಿಡಿಯೋಗಳನ್ನು ಫಾರ್ವರ್ಡ್ ಮಾಡಲು ಅನುಕೂಲವಾಗಲು ಸದ್ಯ ನೀಡಲಾಗಿರುವ ಕ್ವಿಕ್ ಫಾರ್ವರ್ಡ್ ಬಟನ್ ಕೂಡ ತೆಗೆಯಲು ಕಂಪನಿ ಮುಂದಾಗಿದೆ. ಜಾಗತಿಕವಾಗಿ 20 ನಂಬರ್ ಗೆ ಸಂದೇಶದ ಮಿತಿಯನ್ನು ಸಿಮಿತಗೊಳಿಸಲಾಗುವುದೆಂದು ಕಂಪನಿ ತಿಳಿಸಿದೆ.

ಯಾವುದೇನೆ ಇರಲಿ ಸಾಮಾಜಿಕ ಜಾಲತಾಣದ ಮಾಧ್ಯಮವನ್ನು ಉಪಯುಕ್ತವಾಗಿ ಬಳಸಿಕೊಳ್ಳುವ ಮನಸ್ಸು ನಮ್ಮದಾಗಬೇಕು. ತಂತ್ರಜ್ಞಾನ ನಮ್ಮ ಬದುಕಿಗೆ ವರವಾಗಬೇಕೆ ಹೊರತು, ಶಾಪವಾಗಬಾರದು.

ನವೀನ್ ರಾಮನಗರ

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!