ಮನೆಯಲ್ಲಿ ಬಳಸುವ ಕರಿಬೇವು ಕೇವಲ ಒಗ್ಗರಣೆಗೆ ಮಾತ್ರ ಸೀಮಿತವಲ್ಲ. ಅದರಿಂದ ಆರೋಗ್ಯದ ಪ್ರಯೋಜನಗಳೂ ತುಂಬಾ ಇದೆ. ಅವುಗಳನ್ನು ಓದಿ ತಿಳಿಯೋಣ ಬನ್ನಿ.
ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬಿಸಿನೀರಿಗೆ ನಾಲ್ಕು ಎಲೆ ಕರಿಬೇವಿನ ಸೊಪ್ಪು ಹಾಕಿ ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳು ಕಡಿಮೆಯಾಗುತ್ತದೆ. 2.ಇದರ ಕಡ್ಡಿಯನ್ನು ಅರಿಶಿಣ ಹಾಗೂ ಜೇನುತುಪ್ಪದ ಜೊತೆ ತಿಕ್ಕಿ ಮೊಡವೆಯ ಮೇಲೆ ಹಚ್ಚುವುದರಿಂದ ಮೊಡವೆಗಳು ಕಲೆ ಸಮೆತ ಕಡಿಮೆಯಾಗುತ್ತದೆ. 3.ಕರಿಬೇವನ್ನು ಕಾದ ತೆಂಗಿನ ಎಣ್ಣೆಗೆ ಹಾಕಿ ಅರ್ಧ ಗಂಟೆಗಳ ಮುಚ್ಚಿಡಿ. ಸೋಸಿದ ಬಳಿಕ ಬಾಟಲ್ ಗೆ ಹಾಕಿ ಉಪಯೋಗಿಸಬಹುದು, ಇದನ್ನು 6 ತಿಂಗಳವರೆಗೆÀ ಕೆಡುವುದಿಲ್ಲ ಈ ಎಣ್ಣೆಯನ್ನು ಕೂದಲಿಗೆ ಬಳಸುವುದರಿಂದ ಕೂದಲು ಬೆಳೆಯುತ್ತದೆ ಹಾಗೂ ಹೊಟ್ಟಿನ ಸಮಸ್ಯೆ ದೂರವಾಗುತ್ತದೆ. 4.ಬಿಸಿ ನೀರಿಗೆ ಹತ್ತು ಎಲೆ ಕರಿಬೇವು, ಚಿಟಿಕೆ ಉಪ್ಪು, ಒಂದು ಚಮಚ ಜೇನುತುಪ್ಪ ಹಾಕಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವಿನ ಸಮಸ್ಯೆ ಕಡಿಮೆಯಾಗುತ್ತದೆ. ಆಹಾರದ ರೂಪದಲ್ಲಿ ಇದರಿಂದ ತಯಾರಿಸಿದ ಚಟ್ನಿಪುಡಿಯನ್ನೂ ಸೇವಿಸಿ ಆರೋಗ್ಯ ಸಮಸ್ಯೆಗಳಿಂದ ದೂರವಿರಿ.ಓದಿ ಸುಮ್ಮನಾಗಬೇಡಿ ನಿಮ್ಮ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಶೇರ್ ಮಾಡಿ
-ಲಕ್ಷ್ಮೀ ಸಂತೋಷ್