ಹಲ್ಲು ನೋವಿಗೆ ಬಹಳಷ್ಟು ಮನೆ ಮದ್ದುಗಳಿವೆ ನಿಜ. ನಿಮಗೆ ಎಂತಹ ಹಲ್ಲು ನೋವು ಇದ್ದರು ಅದನ್ನು ಯಾವುದೇ ಖರ್ಚಿಲ್ಲದೆ ಬೆಳಗ್ಗೆ ಅಗುವಷ್ಟರಲ್ಲಿ ನೋವು ಕಡಿಮೆ ಮಾಡುವ ಶಕ್ತಿ ತೊಗರಿ ಎಲೆಗೆ ಇದೆ. ಮನುಷ್ಯನಿಗೆ ಅದೆಷ್ಟೋ ಸಣ್ಣ ಪುಟ್ಟ ಸಮಸ್ಯೆಗಳಿಗೆ ನಮ್ಮ ಮನೆಯಲ್ಲಿಯೇ ಔಷದಿಗಳು ಇರುತ್ತವೆ. ಆದರೆ ಅದನ್ನು ಉಪಯೋಗಿವ ವಿಧಾನ ತಿಳಿದುಕೊಳ್ಳಬೇಕು ಅಷ್ಟೇ .
ಹಲ್ಲು ನೋವಿನಿಂದ ತುಂಬಾ ಜನರು ಎಷ್ಟೋ ಮನೆ ಮದ್ದುಗಳನ್ನು ಬಳಸುತ್ತಿದ್ದಾರೆ. ಅದರೆ ನಾವು ನಿಮಗೆ ಬಹಳ ಸುಲಭ ಮತ್ತು ಯಾವುದೇ ಖರ್ಚಿಲ್ಲದೆ ಕಡಿಮೆಯಾಗುವ ಮನೆ ಮದ್ದನ್ನು ಹೇಳಲು ಇಷ್ಟಪಡುತ್ತೆವೆ.ತೊಗರಿ ಎಲೆ ಪರಿಚಯ ಪಟ್ಟಣದವರಿಗೆ ಗೊತಿದ್ಯೋ ಇಲ್ವೋ , ಅದರೆ ಹಳ್ಳಿ ಜನರಿಗೆ ಮಾತ್ರ ಗೊತ್ತಿರುತ್ತೆ. ಇದನ್ನು ಹೇಗೆ ಉಪಯೋಗಿಸ ಬೇಕು ಎನ್ನುವುದನ್ನು ತಿಳಿಯಲು ಮುಂದೆ ಓದಿ.
ತೊಗರಿ ಗಿಡದ ಎಲೆಗಳನ್ನು ಸ್ವಲ್ಪ ಕಿತ್ತು ತಂದು ಅದನ್ನು ಹಿಸುಕ ಬೇಕು ಅದರೆ ಅದರ ರಸವನ್ನು ತೆಗೆಯಬಾರದು, ಅದನ್ನು ಚಿಕ್ಕ ಚಿಕ್ಕ ಉಂಡೆಯಂತೆ ಮಾಡಿಕೊಳ್ಳಿ, ರಾತ್ರಿ ಮಲಗುವ ಮೊದಲು ಈ ಚಿಕ್ಕ ಉಂಡೆಯನ್ನು ಹಲ್ಲು ನೋವಿರುವ ಜಾಗದಲ್ಲಿ ಗಟ್ಟಿಯಾಗಿ ಅದುಮಿಟ್ಟುಕೊಂಡು ಮಲಗಿ, ಬೆಳಗ್ಗೆ ಎಂದ ತಕ್ಷಣ ಉಪ್ಪು ನೀರಿನಿಂದ ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಹೋರ ಬಂದು ಹಲ್ಲು ನೋವು ಕಡಿಮೆಯಾಗುತ್ತದೆ. ನೋವು ಕಡಿಮೆ ಆಗದಿದ್ದರೇ ದಂತ ವೈದ್ಯರನ್ನು ಸಂಪರ್ಕಿಸಿ.
-ಲಕ್ಷ್ಮೀ ಲೋಕೆಶ್