ಉಪಯುಕ್ತ ಮಾಹಿತಿ

ಕಾಲ ಬದಲಾದಂತೆ ಜನರು ಬದಲಾಗಿದ್ದಾರೆ! ಓದಿ, ವಿಡಿಯೋ ನೋಡಿ!!

ಯಾವುದೇ ಕಾರ್ಯಕ್ರಮವಿರಲಿ ನಾಲ್ಕು ಜನ ಗುಂಪು ಸೇರಿ ಮಾತನಾಡುವುದನ್ನು ನಾವು ನೋಡಿರುತ್ತವೆ. ಪ್ರತಿಯೊಬ್ಬರು ತಮ್ಮ ಅನುಭವದ ಅಥವಾ ನೋಡಿದ್ದ, ಕೇಳಿದ್ದ ವಿಚಾರಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಸ್ವಲ್ಪ ಹಿರಿಯ ವಯಸ್ಸಿನವರಂತೂ ನಮ್ಮ ಕಾಲದಲ್ಲಿ ಆಗಿತ್ತು, ಇವತ್ತಿನ ರೀತಿ ಇರಲಿಲ್ಲ ಅಂತ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ ಮಾತನಾಡುತ್ತಿರುತ್ತಾರೆ.

ಕಾಲವೆಂಬುದು ನಮ್ಮ ಕೈಬೆರಳುಗಳ ನಡುವೆ ಜಾರಿಹೋಗುವ ಮರಳಿ ಕಣದಂತೆ ಸರಿದು ಹೋಗುತ್ತಿರುತ್ತದೆ. ಗೊತ್ತಿಲ್ಲದಂತೆ ನಮ್ಮ ಸುತ್ತ ಮುತ್ತಾ ಸಾಕಷ್ಟು ಬದಲಾವಣೆಗಳು ಹಾಗಿರುತ್ತವೆ. ಇದನ್ನು ನೀವೂ ಗಮನಿಸಿರುತ್ತೀರಿ. ಊರಿಗೊಂದು ಟಿವಿ, ಊರಿನ ಪಟೇಲರೋ ಶ್ಯಾನುಭೋಗರೋ ಮನೆಯಲ್ಲೊಂದು ದೂರವಾಣಿ ಇದ್ದ ಕಾಲದಲ್ಲಿ ಬದುಕು ಹೇಗಿತ್ತು. ಇವತ್ತು ಮನೆ ಮನೆಯಲ್ಲೂ ಟಿವಿಗಳಿವೆ, ಡ್ಯೂಪ್ಲೇಕ್ಸ್ ಮನೆಗಳಲ್ಲಂತೂ ಒಂದಕ್ಕಿಂದ ಹೆಚ್ಚು ಟಿವಿಗಳಿರುತ್ತವೆ. ಅಂದೂ ಟಿವಿಗಳು ದಪ್ಪದಾಗಿ ಇರುತ್ತಿತ್ತು, ಮನುಷ್ಯರು ತೆಳ್ಳಗೆ ಇರುತ್ತಿದ್ದರು. ಇಂದು ಟಿವಿಗಳು ಸ್ಲಿಮ್ ಆಗಿವೆ ಮನುಷ್ಯರು ದಪ್ಪಗೆ ಆಗಿದ್ದಾರೆ. ಅಂದೂ ದೂರವಾಣಿ ಕುಟುಂಬವನ್ನು ಸಂಭ್ರಮದಿಂದ ಬೆಸೆಯುತ್ತಿತ್ತು. ಇಂದು ಮೊಬೈಲ್ ಫೋನ್‍ಗಳು ಕುಟುಂಬವನ್ನು ಬೇರ್ಪಡಿಸುತ್ತಿವೆ! ಮನೆಯಲ್ಲಿ ದೂರವಾಣಿ ಇದ್ದಾಗ ಒಂದು ಕರೆ ಬಂದರೆ ಎಲ್ಲರೂ ಹಂಚಿಕೊಂಡು ಮಾತನಾಡುತ್ತಿದ್ದ ನೆನಪುಗಳು ಇನ್ನೂ ಜೀವಂತವಾಗಿವೆ.

ಅಂದೂ ಯಾವುದಾದರು ಕೆಲಸದ ನಿಮಿತ್ತಾ ಕಾಯುವುದಿದ್ದರೆ ಜನರು ಪತ್ರಿಕೆಗಳನ್ನು, ಕಥೆ ಪುಸ್ತಕಗಳನ್ನು ಓದುತ್ತಾ ಕಾಲವನ್ನು ದೂಡುತ್ತಿದ್ದರು. ಇಂದು ಪತ್ರಿಕೆಗಳ ಜಾಗದಲ್ಲಿ ಮೊಬೈಲ್ ಪೋನ್‍ಗಳು ವಿಜೃಂಬಿಸುತ್ತಿವೆ. ಹಿಂದೇ ಖುಷಿಮುನಿಗಳು ತಪಸ್ಸು ಮಾಡಲು ಕುಳಿತರೇ ಹೇಳುತ್ತಲೇ ಇರಲಿಲ್ಲ ಆವಾಗ ಅವರ ಗಡ್ಡ. ತಲೆಕೂದಲು ಎಲ್ಲವೂ ಅಗತ್ಯಕ್ಕಿಂತ ಹೆಚ್ಚು ಬೆಳೆಯುತ್ತಿತ್ತು, ಇಂದು ಅದೇ ಹೇರ್ ಸ್ಟೈಲ್‍ಗಳು ಜನಪ್ರಿಯವಾಗಿವೆ. ಹಿಂದೇ ವ್ಯಕ್ತಿಗಳು ಪ್ರೀತಿಸಲ್ಪಡುತ್ತಿದ್ದರು, ವಸ್ತುಗಳು ಬಳಸಲ್ಪಡುತ್ತಿತ್ತು. ಇಂದು ವಸ್ತುಗಳನ್ನು ಜನ ತುಂಬಾ ಪ್ರೀತಿ ಮಾಡುತ್ತಾರೆ, ಜನರನ್ನು ವಸ್ತುಗಳಂತೆ ಅಗತ್ಯಕ್ಕೆ ತಕ್ಕ ಹಾಗೇ ಬಳಸಿಕೊಳ್ಳುತ್ತಾರೆ. ಪಟ್ಟಿ ಮಾಡುತ್ತಾ ಹೊರಟರೆ ಮುಗಿಯುವುದೇ ಇಲ್ಲ!

ಶ್ರೀಮಂತರಿರಲಿ ಬಡವನಿರಲಿ ಕೊನೆಗೆ ಈ ಭೂಮಿಯಲ್ಲಿ 6 ಅಡಿ 3 ಅಡಿ ಜಾಗಮಾತ್ರ ಶಾಶ್ವತವೆಂಬುದು ಸರ್ವಕಾಲಿಕ ಸತ್ಯ. ಆಗಾಗಿ ಇದ್ದಷ್ಟು ದಿನ ಬದುಕನ್ನು ಪ್ರೀತಿಸಿ ನಮ್ಮ ಸುತ್ತಲಿನ ಜನರೊಡನೆ ಬಾಂದವ್ಯವನ್ನು ಬೆಳೆಸಿಕೊಂಡು ನಗು ನಗುತ್ತಾ ಬದುಕಬೇಕು! ಏಕೆಂದರೆ ಈ ಸಮಯ ಕಳೆದುಹೋಗುತ್ತದೆ! ಏನಂತಿರೀ?

ಈ ಮೇಲಿನ ಎಲ್ಲಾ ಅಂಶಗಳನ್ನು ಪ್ರತಿಬಿಂಬಿಸುವ ವಿಡಿಯೋ ನೋಡಲು ತಪ್ಪದೇ ಈ ಲಿಂಕ್‍ನ್ನು ಕ್ಲಿಕ್ ಮಾಡಿ ಜೊತೆಗೆ ಚಿಗುರು ಕನ್ನಡ ಟಿವಿಗೆ Subscribe ಆಗಲು ಮರೆಯದಿರಿ.Click Hear and watch video

-ನವೀನ್ ರಾಮನಗರ

fallow us on facebook click hear and like

 

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!