ಟೈಮ್ ಇಲ್ಲ! ಈ ಪದ ನೀವೆಲ್ಲರೂ ಒಂದಲ್ಲ ಒಂದು ಸಾರಿ ಹೇಳಿಯೇ ಹೇಳಿರುತ್ತೀರಿ, ಕೇಳಿರುತ್ತೀರಿ . ಟೈಮ್ ಅನ್ನೋದು ಎಲ್ಲರಿಗು ಸರಿಸಮಾನವಾಗೇ ಸಿಗುತ್ತದೆ. ಆದರೆ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಮೇಲೆ ನಿಮ್ಮ ಯಶಸ್ಸು ನಿರ್ಧಾರವಾಗುತ್ತದೆ. ಕೆಲವರು ಸಮಯಕ್ಕೆ ಬಹಳ ಮಹತ್ವ ನೀಡುತ್ತಾರೆ. ಕೆಲವರು ಸಮಯಕ್ಕೆ ಮಹತ್ವ ನೀಡದೆ ಸೊಂಬೇರಿಗಳಾಗಿ ಕಾಲಕಳೆಯುತ್ತಿರುತ್ತಾರೆ.ಸಮಯವನ್ನು ಸದ್ವಿನಿಯೋಗ ಪಡಿಸಿಕೊಂಡ ವ್ಯಕ್ತಿ ಬದುಕಿನಲ್ಲಿ ಯಶಸ್ವಿಯಾಗುತ್ತಾನೆ.
ಯಾಂತ್ರೀಕೃತ ಬದುಕಿನಲ್ಲಿ ಸಮಯವೆಂಬುದು ಅತ್ಯಮೂಲ್ಯವಾದದ್ದು. ಸಮಯಕ್ಕೆ ಗೌರವ ನೀಡಿದರೆ ಖಂಡಿತಾ ಸಮಯವೇ ನಿಮಗೆ ಗೌರವ ತಂದು ಕೊಡುತ್ತದೆ ಎಂದರೆ ತಪ್ಪಾಗಲಾರದು. ಪ್ರತಿ ನಿಮಿಷವೂ ಕೂಡ ಅತ್ಯಮೂಲ್ಯ ಆ ನಿಮಿಷಗಳನ್ನು ನೀವು ಚೆನ್ನಾಗಿ ಬಳಸಿಕೊಂಡರೆ ನಿಮ್ಮ ಪ್ರಗತಿ ಖಂಡಿತಾ ಸಾಧ್ಯವಾಗುತ್ತದೆ. ಸಮಯದ ಕುರಿತು ಹಲವಾರು ಮಹನೀಯರು ಅತ್ಯಮೂಲ್ಯವಾದ ಮಾತುಗಳನ್ನು ಹೇಳಿದ್ದಾರೆ.
ವೀಡಿಯೊ ನೋಡಲು ಈ ಕೆಂಪು ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ! Inspiratinal Quotes about Time
ಮತ್ತಷ್ಟು ಉಪಯುಕ್ತ ವಿಡಿಯೋಗಳಿಗಾಗಿ ಚಿಗುರು ಕನ್ನಡ ಯು ಟ್ಯೂಬ್ ಚಾನೆಲ್ ಗೆ subscribe ಆಗಿ Subscribe: chiguru kannada