ಕರ್ನಾಟಕದಲ್ಲಿ ಇರುವ ಪ್ರತಿಯೊಬ್ಬರಿಗೂ ರಾಗಿ ಮುದ್ದೆ ಗೊತ್ತಿರಲೇಬೇಕು. ಹೌದು ರಾಗಿ ಮಾನವನ ದೇಹಕ್ಕೆ ಅತ್ಯುತ್ತಮವಾದ ಆಹಾರ ಅದ್ರಲ್ಲೂ ರಾಗಿ ಮುದ್ದೆ ಅಂದ್ರೆ ಕೆಲವರಿಗಂತೂ ತುಂಬಾನೇ ಇಷ್ಟ ರಾಗಿಮುದ್ದೆ ಇಲ್ಲದೇ ಕೆಲವರು ಊಟವನ್ನು ಮಾಡುವುದೇ ಇಲ್ಲ. ಹೆಚ್.ಡಿ ದೇವೇಗೌಡ್ರು ಪ್ರಧಾನಿ ಗಳಾಗಿದ್ದಾಗ ರಾಗಿಮುದ್ದೆ ದೇಶವ್ಯಾಪಿ ಜನಪ್ರಿಯವಾಗಿತ್ತು. ಅವ್ರು ವಿದೇಶಗಳಿಗೆ ಹೋದರು ಜೊತೆಯಲ್ಲಿ ಅಡುಗೆ ಭಟ್ಟರನ್ನು ಕೆರೆದುಕೊಂಡು ಹೋಗಿ ರಾಗಿಮುದ್ದೆ ಸೊಪ್ಪು ಸಾರು ಮಾಡಿಸಿಕೊಂಡು ಊಟಮಾಡುತ್ತಿದ್ದರಂತೆ. ವರನಟ ಡಾ. ರಾಜ್ ಕುಮಾರ್ ಕೂಡ ರಾಗಿ ಮುದ್ದೆ ನಾಟಿ ಕೋಳಿ ಸಾರನ್ನು ತುಂಬಾ ಇಷ್ಟಪಡುತ್ತಿದ್ದರಂತೆ. ರಾಗಿಯನ್ನು ವಿವಿಧ ರೂಪಗಳಲ್ಲಿ ಬಳಸಬಹುದು ರಾಗಿ ರೊಟ್ಟಿ, ರಾಗಿ ಇಡ್ಲಿ, ರಾಗಿನೂಡಲ್ಸ್ , ರಾಗಿಮುದ್ದೆ, ರಾಗಿ ಅಮ್ಲಿ , ಹೀಗೆ ರಾಗಿಯನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು.
ಮನೆಗಳಲ್ಲಿ ರಾಗಿಮುದ್ದೆ ಮಾಡುವುದು ಚಿಕ್ಕ ಪಾತ್ರೆಗಳಲ್ಲಿ ಆದರೆ ಮದುವೆ ಮನೆಯಲ್ಲಿ ಹೇಗೆ ರಾಗಿಮುದ್ದೆ ಮಾಡುತ್ತಾರೆ ಗೊತ್ತಾ. ಈ ಕೆಳಗಿನ ವಿಡಿಯೋವನ್ನು ನೋಡಿ . ಹಾಗೆಯೇ ಬದುಕಿಗೊಂದು ಭರವಸೆಯ ಮಾತು ಫೇಸ್ ಬುಕ್ ನ ಅಧಿಕೃತ ಯೂ ಟ್ಯೂಬ್ ಚಾನೆಲ್ ಚಿಗುರು ಟಿ.ವಿಯನ್ನು ತಪ್ಪದೆ ಉಚಿತವಾಗಿ subscribe ಮಾಡಿಕೊಳ್ಳಿ.