ಬಾಲ್ಯದಲ್ಲೀ ಓದುವ ಆಸೆಗೆ ಮನೆಯವರ ವಿರೋಧದ ನಡುವೆಯು ಪದವಿಯನ್ನು ಪಡೆದು ಮಂಡ್ಯದ ಸಕ್ಕರೆ ಕಾರ್ಖಾನೆಯೊಂದರಲ್ಲಿ ಟೈಮ್ ಆಫೀಸರ್ ಆಗಿ ಕೆಲಸ ಮಾಡುತ್ತಾ ತಮ್ಮ ಶೇಕಡಾ 80 ರಷ್ಟು ದುಡಿಮೆಯನ್ನು ಪುಸ್ತಕ ಸಂಗ್ರಹಕ್ಕೆ ಬಳಸಿ ಇಡೀ ಪ್ರಪಂಚವೇ ಪುಸ್ತಕ ಮನೆಯ ಕಡೆ ತಿರುಗಿ ನೋಡುವಂತೆ ಮಾಡಿದ ಸಾಧಕರ ಶ್ರೀ ಅಂಕೆಗೌಡರು.
ಮಂಡ್ಯ ಜಿಲ್ಲೆಯ ಪಾ0ಡವಪುರ ತಾಲ್ಲೂಕಿನ ಹರಳಹಳ್ಳಿಯ ರೈತ ಕುಟುಂಬದಲ್ಲಿ ಹುಟ್ಟಿದ ಶ್ರೀ ಅಂಕೇಗೌಡರು ಅಪ್ಪನ ವಿರೋಧದ ನಡುವೆಯೂ ಅಪ್ಪನಿಗೆ ಗೊತ್ತಾಗದ ಹಾಗೇ ಕುರಿ ಮೆಯಿಸುತ್ತಾ ಓದಿಕೊಂಡೆ 7ನೇ ತರಗತಿಯನ್ನು ಪಾಸುಮಾಡಿಕೊಂಡು ತದನಂತರ ಪಿ.ಯು.ಸಿ.ಯಲ್ಲಿ ಇಂಗ್ಲೀಷ್ ವಿಷಯ ಕಷ್ಟವಾಗಿ ಆ ವಿಷಯದ ಪುಸ್ತಕವನ್ನು ಮೈಸೂರಿನ ಲೈಬ್ರರಿಯಲ್ಲಿ ಪಡೆಯಲು ಹೋಗಿ ಆ ಲೈಬ್ರರಿ ನೋಡಿಕೊಳ್ಳುವ ಮೇಲ್ವಿಚಾರಕರಿಂದ ನಿಂದನೆಯ ಮಾತುಗಳನ್ನು ಕೇಳಿ ಅಲ್ಲಿಯೇ ಲೈಬ್ರರಿ ಮಾಡಿಯೇ ತಿರುತ್ತೇನೆಂದು ಶಪತಮಾಡಿ ಅದರಂತೆ ತಮ್ಮ ಬದುಕಿನ ಸಂಪೂರ್ಣ ಸಮಯವನ್ನು ಪುಸ್ತಕಗಳ ಸಂಗ್ರಹ ಮಾಡುವುದರಲ್ಲೇ ಕಳೆದು ಇಂದು ಸುಮಾರು 10 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ ಶ್ರೀಯುತ ಅಂಕೆಗೌಡರು.
ಅಂಕೆಗೌಡರು ಪುಸ್ತಕ ಸಂಗ್ರಹದ ವಿಷಯ ತಿಳಿದು ಒಮ್ಮೆ ಶ್ರೀ ಹರಿಕೊಡೆಯವರು ಅವರನ್ನು ಮನೆಗೆ ಹುಡುಕಿಕೊಂಡು ಹೋಗಿ ತಮ್ಮಿಂದ ಏನು ಸಹಾಯ ಆಗಬೇಕೆಂದು ಕೇಳಿದಾಗ ಪುಸ್ತಕಗಳು ಗೆಜ್ಜಲು ಹತ್ತದಹಾಗೇ ಅವುಗಳನ್ನು ಸಂರಕ್ಷಿಸಲು ಒಂದು ಗೂಡು ಮಾಡಿಕೊಡಿ ಅಷ್ಟು ಸಾಕು, ನನಗೆ ಏನು ಬೇಡವೆನ್ನುತ್ತಾರೆ. ಶ್ರೀ ಹರಿಕೊಡೆಯನವರು ಸುಮಾರು 1ಕೋಟಿ ವೆಚ್ಚದಲ್ಲಿ ಪುಸ್ತಕದ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದನೂ ಅನುದಾನ ಲಭಿಸಿದೆ.
ಪುಸ್ತಕದ ಮನೆಗೆ ದೇಶದ ನಾನ ಭಾಗಗಳಿಂದ ಓದುವ ಹವ್ಯಾಸವಿರುವವರು ಬಂದು ಜ್ಞಾನವನ್ನು ಪಡೆಯುತ್ತಾರೆ. ಮುಂದಿನ ಪೀಳಿಗೆಗೆ ಜ್ಞಾನದ ಕಣಜವನ್ನು ಕಟ್ಟಿಕೊಟ್ಟಿರುವ ಶ್ರೀ ಅಂಕೆಗೌಡರಿಗೆ ಅನೇಕ ಬಿರುದು ಸನ್ಮಾನಗಳು ಹುಡುಕಿಕೊಂಡು ಬಂದಿವೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಆಗಿಯೂ ಎಲ್ಲರನ್ನು ತಲುಪಿರುವ ಶ್ರೀಯುತರು ಜಿ. ವಾಹಿನಿಯ ಡ್ರಾಮಾ ಜೂನಿಯರ್ ನಲ್ಲಿ ನಿಜವಾದ ಸಾಧಕರಾಗಿ ಭಾಗವಹಿಸಿದ್ದರು.
ಪುಸ್ತಕ ಓದುವ ಪ್ರೀತಿಯೊಂದಿದ್ದರೆ ಸಾಕು ಅದು ನಿಮ್ಮನ್ನು ಹಿಮಾಲಯದ ಎತ್ತರಕ್ಕೆ ಕೆರೆದುಕೊಂಡು ಹೋಗುತ್ತದೆನ್ನುವ ಶ್ರೀ ಅಂಕೆಗೌಡರ ಈ ಸಾಧನೆಗೆ ಕೋಟಿ ಕೋಟಿ ನಮನಗಳು.
ಈ ಲೇಖನ ಓದಿದ ಪ್ರತಿಯೊಬ್ಬರು ತಪ್ಪದೇ ಲೈಕ್ ಮಾಡಿ ಶೇರ್ ಮಾಡುವ ಮೂಲಕ ಇವರ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ಪುಟ್ಟ ಪ್ರಯತ್ನವನ್ನು ಮಾಡೋಣ.