ಸಾಧಕರು

ಪೋಲಿಸ್ ಪೇದೆ ಹೆಂಡತಿ ಐಪಿಎಸ್ ಅಧಿಕಾರಿಯಾದ ನಿಜವಾದ ಕಥೆ ಎಲ್ಲರಿಗೂ ಸ್ಪೂರ್ತಿ

ಸತತ ಪರಿಶ್ರಮ, ಗುರಿ, ತಾಳ್ಮೆ ಛಲವಿದ್ದವರು ಏನನ್ನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ಸಾಮಾನ್ಯ ಪೋಲಿಸ್ ಪೇದೆಯ ಹೆಂಡತಿ ಐಪಿಎಸ್ ಅಧಿಕಾರಿಯಾದ ಈ ಕಥೆ ಜೀವಂತ ಸಾಕ್ಷಿ. ಈ ಕಥೆ ಪೂರ್ತಿ ಓದಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಮತ್ತೊಬ್ಬರಿಗೆ ಸ್ಪೂರ್ತಿಯ ಕಿಡಿಯೊಂದನ್ನು ಹಚ್ಚಿ ಯಾರಿಗೆ ಗೊತ್ತು ಯಾರು ಯಾವ ಸಾಧನೆ ಮಾಡುತ್ತಾರೆಂದು!

ತಮಿಳುನಾಡಿನ ದಿಂಡಿಕಲ್ ಎಂಬ ಊರಿನ ಅಂಬಿಕಾಗೆ ಚಿಕ್ಕವಯಸ್ಸಿನಲ್ಲಿಯೇ ಪೋಲಿಸ್ ಪೇದೆಯ ಜೊತೆ ಮದುವೆಯಾಗುತ್ತದೆ. 18ನೇ ವಯಸ್ಸಿಗೆ ಇಬ್ಬರ ಮಕ್ಕಳ ತಾಯಿಯಾಗುತ್ತಾಳೆ ಅಂಬಿಕಾ. ಒಮ್ಮೆ ತನ್ನ ಗಂಡ ಸರಿಯಾದ ಸಮಯಕ್ಕೆ ಊಟಕ್ಕೆ ಬರಲಿಲ್ಲವೆಂದು ಅನತಿ ದೂರದಲ್ಲೆ ಇದ್ದ ಪೋಲಿಸ್ ಗ್ರೌಂಡ್‍ಗೆ ತನ್ನ ಇಬ್ಬರು ಕಂದಮ್ಮಗಳನ್ನು ಕರೆದುಕೊಂಡು ಊಟದ ಬುತ್ತಿಯ ಜೊತೆ ಅಲ್ಲಿಗೆ ಬರುತ್ತಾಳೆ. ಗಂಡ ಪೋಲಿಸ್ ಪೇದೆ ಪರೇಡ್‍ನಲ್ಲಿ ಭಾಗವಹಿಸಿರುತ್ತಾನೆ ಅವರಂತೆ ನೂರಾರು ಜನ ಅಲ್ಲಿ ಪರೇಡ್‍ನಲ್ಲಿ ಭಾಗವಹಿಸಿರುತ್ತಾರೆ. ಪ್ರತಿಯೊಬ್ಬ ಪೇದೆಯು ವೇದಿಕೆ ಮೇಲಿದ್ದ ಕೆಲವೇ ಕೆಲವು ಪೋಲಿಸ್ ಅಧಿಕಾರಿಗಳಿಗೆ ಗೌರವದಿಂದ ಸೆಲ್ಯೂಟ್ ಹೊಡೆಯುವುದನ್ನು ಅಚ್ಚರಿಯಿಂದ ಗಮನಿಸುತ್ತಾಳೆ. ಪರೇಡ್ ಮುಗಿದ ಕೂಡಲೇ ಗಂಡನಿಗೆ ಊಟದ ಬುತ್ತಿಕೊಟ್ಟು ಮನೆಗೆ ಬರುತ್ತಾಳೆ. ಅವತ್ತು ರಾತ್ರಿ ಆಕೆಗೆ ನಿದ್ರೆಯೇ ಬರುವುದಿಲ್ಲ!

ಎಂದಿನಂತೆ ಗಂಡ ಬೆಳಿಗ್ಗೆ ಕೆಲಸಕ್ಕೆ ಹೋಗಲು ತಯಾರಾಗುತ್ತಿದ್ದಾಗ, ನಿನ್ನೆ ಪರೇಡ್‍ನಲ್ಲಿ ನೀವು ಮತ್ತು ನಿಮ್ಮಂತ ಪೋಲಿಸ್ ಪೇದೆಗಳು ವೇದಿಕೆ ಮೇಲಿದ್ದ ಅವರಿಗೇಕೆ ಗೌರವದಿಂದ ಸಲ್ಯೂಟ್ ಹೊಡೆಯುತ್ತಿದ್ರಿ ಅಂತ ಅಚ್ಚರಿಯ ಕಣ್ಣುಗಳಲ್ಲಿ ಅಂಬಿಕಾ ಕೇಳುತ್ತಾಳೆ. ಅವರು ಐಪಿಎಸ್ ಅಧಿಕಾರಿಗಳು ನಮ್ಮ ಮೇಲಾಧಿಕಾರಿಗಳು ಎಂಬ ಉತ್ತರವನ್ನು ಅವಳ ಗಂಡ ನೀಡುತ್ತಾನೆ. ಕೂಡಲೇ ಆಕೆ ನಾನು ಐಪಿಎಸ್ ಅಧಿಕಾರಿ ಆಗುತ್ತೇನೆ ಎಂದು ಹೇಳಿ ಅಡುಗೆ ಮನೆಯ ಕಡೆ ನಡೆಯುತ್ತಾಳೆ. ಆಕೆ ಆಗ ಇನ್ನೂ ಎಸ್.ಎಸ್.ಎಲ್.ಸಿಯನ್ನು ಕೂಡ ಪಾಸು ಮಾಡಿಕೊಂಡಿರುವುದಿಲ್ಲ. ಗಂಡ ತನ್ನ ಹೆಂಡತಿಯ ಮಾತನ್ನು ಕೇಳಿ ಒಂದು ಕ್ಷಣ ಸುಮ್ಮನಾಗಿ ಅವಳ ಈ ಮಾತಿಗೆ ಏನನ್ನು ಹೇಳೆಬೇಕೆಂದು ತೊಚದೆ ಕೆಲಸಕ್ಕೆ ಹೋಗುತ್ತಾನೆ.

ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಗಂಡ ಅಂಬಿಕಾಳನ್ನು ಕರೆದು ನೀನು ಬೆಳಿಗ್ಗೆ ಐಪಿಎಸ್ ಅಧಿಕಾರಿಯಾಗಬೇಕೆಂದಲ್ಲ ಅದಕ್ಕೆ ಮೊದಲು ಎಸ್.ಎಸ್.ಎಲ್.ಸಿ. ಪರೀಕ್ಷೆ ಪಾಸಾಗಬೇಕು ನಂತರ ಪಿಯುಸಿ, ಪದವಿ ಉತ್ತೀರ್ಣವಾಗಿರಬೇಕು ಎಂದು ತಿಳಿಸುತ್ತಾನೆ. ಆಕೆಗೆ ಅಷ್ಟು ಬೇಕಿತ್ತು. ಗಂಡನ ಸಮ್ಮತಿ ಪಡೆದು ಬಾಹ್ಯವಾಗಿ ಎಸ್.ಎಸ್.ಎಲ್.ಸಿ. ಮತ್ತು ಪದವಿ ಪರೀಕ್ಷೆಗಳನ್ನು ಎದುರಿಸಿ ಪದವಿ ಪಡೆದು ಐಪಿಎಸ್ ಅಧಿಕಾರಿಯಾಗಲು ಸಿದ್ದಳಾಗುತ್ತಾಳೆ.  ಗಂಡನ ಮನವೊಲಿಸಿ ಮನೆಯಲ್ಲಿ ಓದಲು ಸಾಧ್ಯವಿಲ್ಲವೆಂದು ಚೆನ್ನೈನಲ್ಲಿ ಪಿಜಿಯಲ್ಲಿ ಇದ್ದುಕೊಂಡು ಓದುತ್ತಾಳೆ ಮೊದಲ ಮೂರುವರ್ಷ ಪ್ರೀಲಿಮಿನರಿ ಪರೀಕ್ಷೆಯೂ ಕೂಡ ಪಾಸಾಗುವುದಿಲ್ಲ. ಕೊನೆಗೆ ಗಂಡ ಮನೆಯಲ್ಲಿ ಮಕ್ಕಳನ್ನು ನೋಡಿಕೊಂಡು ಕೆಲಸಕ್ಕೆ ಹೋಗುವುದು ಕಷ್ಟವಾಗುತ್ತಿದೆ ಮನೆಗೆ ಬಂದು ಬಿಡು ಎಂದಾಗ ಕೊನೆಯದಾಗಿ ಈ ಒಂದು ವರ್ಷ ಅವಕಾಶ ಕೊಡಿ ನಾನು ಖಂಡಿತ ಐಪಿಎಸ್ ಪಾಸುಮಾಡುತ್ತೇನೆಂದು ಮತ್ತೊಂದು ವರ್ಷ ಕಷ್ಟಪಟ್ಟು ಓದುತ್ತಾಳೆ ಗಂಡನ ಪ್ರೋತ್ಸಾಹ ಮತ್ತು ತನ್ನ ಅಪರಿಮಿತ ಪರಿಶ್ರಮದಿಂದ ಕೊನೆಯ ಪ್ರಯತ್ನದಲ್ಲಿ ಐಪಿಎಸ್ ಆಗುವ ಮೂಲಕ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾಳೆ ಅಂಬಿಕಾ. ಪ್ರಸ್ತುತ ಮುಂಬೈ ನಲ್ಲಿ ಪೋಲಿಸ್ ಅಧಿಕಾರಿಯಾಗಿರುವ ಅಂಬಿಕಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಟ್ಟಿ ಯಶಸ್ಸು ಸಿಗದೇ ಅರ್ಧದಲ್ಲೇ ಬಿಟ್ಟು ಬಿಡುವ ಎಷ್ಟೋ ವಿದ್ಯಾರ್ಥಿಗಳಿಗೆ ಸ್ಪೂರ್ತಿ! ಅಷ್ಟೇ ಅಲ್ಲ ಸತತ ಪ್ರಯತ್ನ ಛಲವಿದ್ದವರು ಏನಾನ್ನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿ ಐಪಿಎಸ್ ಅಧಿಕಾರಿ ಅಂಬಿಕಾ ಮೇಡಂ. ಇವರ ಯಶೋಗಾಥೆ ಯುವ ಮನಸ್ಸುಗಳಿಗೆ ಆದರ್ಶವಾಗಲಿ ಎಂಬುದೇ ನನ್ನ ಆಶಯ.

-ನವೀನ್ ರಾಮನಗರ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!