ಬೆಳಿಗ್ಗೆ ಎದ್ದ ತಕ್ಷಣ ಕೆಲವರಿಗೆ ಕಾಫಿ/ಟೀ ಕುಡಿಯುತ್ತ ಪತ್ರಿಕೆ ಓದುವ ಹವ್ಯಾಸವಿರುತ್ತದೆ. ಪತ್ರಿಕೆಗಳನ್ನು ಓದುವುದರಿಂದ ಹಲವಾರು ಉಪಯೋಗಗಳಿವೆ ಪ್ರಪಂಚ, ದೇಶ, ರಾಜ್ಯ, ಜಿಲ್ಲೆ, ತಾಲ್ಲೂಕು, ಹೀಗೆ ಹಲವಾರು ವಿಭಾಗಗಳಲ್ಲಿ ನಮಗೆ ಸುದ್ದಿಗಳು ಪತ್ರಿಕೆಗಳಿಂದ ತಿಳಿಯುತ್ತದೆ. ಪ್ರತಿನಿತ್ಯ ಪತ್ರಿಕೆ ಓದುವುದರಿಂದ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸುಮಾಡಿಕೊಳ್ಳಬಹುದು, ಜೊತೆಗೆ ಉದ್ಯೋಗ ಮಾಹಿತಿಗಳು ದೊರೆಯುತ್ತವೆ.
ಈ ಮೇಲಿನ ಎಲ್ಲಾ ವಿಚಾರಗಳು ತಮಗೆಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಪತ್ರಿಕೆ ಇತಿಹಾಸದ ಬಗ್ಗೆ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳೋಣ.
ವಿಶ್ವದ ಮೊದಲ ಪತ್ರಿಕೆ: ಸುಮಾರು 1000 ವರ್ಷಗಳ ಹಿಂದೆ ಚೀನಾದಲ್ಲಿ ಆರಂಭಗೊಂಡ ಚಿಂಗ್ ಪಾವೋ ವಿಶ್ವದ ಮೊದಲ ಪತ್ರಿಕೆ. ಚಿಂಗ್ ಪಾವೋ ಅಂದರೆ ‘ರಾಜಧಾನಿ ಸುದ್ದಿ’ ಎಂದರ್ಥ. ಆ ದಿನಗಳಲ್ಲಿ ಸರ್ಕಾರವೇ ಜನರಿಗೆ ಈ ಪತ್ರಿಕೆಯ ಮೂಲಕ ಸುದ್ದಿ ತಲುಪಿಸುತ್ತಿತ್ತು. ವಿಶ್ವದ ಎರಡನೇ ಪತ್ರಿಕೆ ಆಕ್ವಡಿಯನ್. ಇದರ ಅರ್ಥ ದಿನದ ಘಟನಾವಳಿ ಎಂದು. ಈ ಎರಡು ಪತ್ರಿಕೆಗಳು ಇತಿಹಾಸ ಪುಟಗಳಲ್ಲಿ ದಾಖಲಾಗಿರುವ ವಿಶ್ವದ ಪುರಾತನ ಪತ್ರಿಕೆಗಳು!
ವಿಶ್ವದ ಮೊದಲ ದಿನ ಪತ್ರಿಕೆ: ಮಾನಿಂಗ್ ಪೋಸ್ಟ್ ಇದು ವಿಶ್ವದ ಮೊಟ್ಟ ಮೊದಲ ದಿನ ಪತ್ರಿಕೆ! 1772ರಲ್ಲಿ ಲಂಡನ್ನಲ್ಲಿ ಆರಂಭ. ತದನಂತರ ಲಂಡನ್ ಟೈಮ್ಸ್ ಆರಂಭವಾಯಿತು.
ಭಾರತದ ಇತಿಹಾಸಕ್ಕೆ ಬಂದಾಗ ದಿ ಬೆಂಗಾಲ್ ಗೆಜೆಟ್ ಭಾರತದ ಮೊದಲ ಪತ್ರಿಕೆ. ಇದು 1780ರಲ್ಲಿ ಕೋಲ್ಕತ್ತಾದಲ್ಲಿ ಆರಂಭವಾಯಿತು. ಇದರ ಸ್ಥಾಪಕ ಜೇಮ್ಸ್ ಆಗಸ್ಟಸ್ ಹಿಕ್ಕಿ. ದಿ ಬೆಂಗಾಲ್ ಗೆಜೆಟ್ ನಂತರದ ದಿನಗಳಲ್ಲಿ ತನ್ನ ಹೆಸರನ್ನು ದಿ ಇಂಗ್ಲಿಷ್ ಮನ್ ಎಂದು ಬದಲಿಸಿಕೊಂಡಿತು. ಉರ್ದು ಅಕ್ಬರ್ ಭಾರತದ ಮೊಟ್ಟಮೊದಲ ಉರ್ದು ಪತ್ರಿಕೆ. ಕರ್ನಾಟಕದಲ್ಲಿ ಕನ್ನಡದ ಮೊಟ್ಟ ಮೊದಲ ಪತ್ರಿಕೆ ಪ್ರಾರಂಭಗೊಂಡಿದ್ದು 1843ರಲ್ಲಿ. ಅದರ ಹೆಸರು ಮಂಗಳೂರು ಸಮಾಚಾರ್. ಇದನ್ನು ಬಾಸೆಲ್ ಮಿಷನ್ ಎಂದೇ ಹೆಸರಾಗಿದ್ದ ಜರ್ಮನ್ ಮುದ್ರಿಸಿ ಪ್ರಕಟಿಸಿದರು. ಆ ದಿನದ ನೆನಪಾಗಿ ಕನ್ನಡ ಪತ್ರಿಕಾ ದಿನ ಎಂದು ಇಂದಿಗೂ ಆಚರಿಸಲಾಗುತ್ತದೆ.
ಓದಿ ಸುಮ್ಮನಾಗಬೇಡಿ, ನೀವು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಒಂದಿಷ್ಟು ಒಳ್ಳೆಯ ವಿಚಾರಗಳು ವಿನಿಮಯಗೊಂಡರೆ ಇತಿಹಾಸದ ಘಟನೆಗಳು ಎಲ್ಲರಲ್ಲೂ ಸದಾಕಾಲ ನೆನಪಿನಲ್ಲಿರುತ್ತದೆ.
-bbmnews
ಬದುಕಿಗೊಂದು ಭರವಸೆಯ ಮಾತು! ವೆಬ್ಸೈಟ್ನ ಅಧಿಕೃತ ಚಾನೆಲ್ ಚಿಗುರು ಕನ್ನಡ ಲಿಂಕ್
Pls Subscribe chiguru kannada youtube channel
https://www.youtube.com/channel/UCP2QXRwuOMb9Fc1SyjOsZxw