ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನ ವಿವಿಧ 487 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.
ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ. ಖುದ್ದಾಗಿ/ಅಂಚೆ/ಕೋರಿಯರ್/ಪ್ರತ್ಯೇಕವಾಗಿ ಅರ್ಜಿ ಕಳುಹಿಸಲು ಅವಕಾಶವಿರುವುದಿಲ್ಲ. ಖುದ್ದಾಗಿ/ಅಂಚೆ/ಪ್ರತ್ಯೇಕವಾಗಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆಂದು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದೆ.
ಹುದ್ದೆಗಳು: ಹಿರಿಯ ಉಪ ನಿರ್ದೇಶಕರು(ವಿತ್ತ ) ಉಪನಿರ್ದೇಶಕರು, ಸಹಾಯಕ ನಿರ್ದೇಶಕರು , ಆಡಳಿತ ಸಹಾಯಕ, ಲೆಕ್ಕ ಸಹಾಯಕ, ಕಿರಿಯ ತಾಂತ್ರಿಕರು , ಸೇವಕರು ಹೀಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ (ಹುದ್ದೆಗಳ ಸಂಪೂರ್ಣ ಮಾಹಿತಿ, ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ www.kmfnandini.coop ನೋಡುವುದು)
ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಪ್ರಾರಂಭಿಕ ದಿನಾಂಕ 20.10.2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19.11.2022 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 19.11.2022ಆಗಿರುತ್ತದೆ. ಸಂಪೂರ್ಣ ಮಾಹಿತಿಯನ್ನು ಕೆಎಂಎಫ್ ನ ಅಧಿಕೃತ ವೆಬ್ ಸೈಟ್ www.kmfnandini.coop ವಿವರಗಳನ್ನು ಓದಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.