ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಸಿದ್ದರಾಮಯ್ಯರವರು, ಕರ್ನಾಟಕ ಹಾಲು ಮಹಾಮಂಡಳದ 2026 ನೇ ವರ್ಷದ ಕ್ಯಾಲೇಂಡರ್ ಅನ್ನು ತಮ್ಮ ಅಧಿಕೃತ ನಿವಾಸದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸನ್ಮಾನ್ಯ ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವರಾದ ಶ್ರೀ.ಕೆ. ವೆಂಕಟೇಶರವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ|| ಶಾಲಿನಿ ರಜನೀಶ್‌ರವರು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಅಂಜುಂ ಪರ್ವೇಜ್‌ರವರು, ಕಹಾಮದ ಆಡಳಿತಾಧಿಕಾರಿಗಳಾದ ಶ್ರೀ.ಟಿ.ಹೆಚ್.ಎಂ ಕುಮಾರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಬಿ. ಶಿವಸ್ವಾಮಿರವರು ಮತ್ತು ಮುಖ್ಯ ಮಂತ್ರಿಗಳ ಮಾದ್ಯಮ ಸಲಹೆಗಾರರಾದ ಶ್ರೀ. ಕೆ.ವಿ. ಪ್ರಭಾಕರ್ ರವರು ಉಪಸ್ಥಿತರಿದ್ದರು.

