ಕರ್ನಾಟಕ ಹಾಲು ಮಹಾಮಂಡಳಿವತಿಯಿಂದ ಸಿ.ಎಂ. ಪರಿಹಾರ ನಿಧಿಗೆ ರೂ. 5ಕೋಟಿ ಚೆಕ್ ಹಸ್ತಾಂತರ.
ದೇಶದ ಎರಡನೇ ಅತಿದೊಡ್ಡ ಸಹಕಾರ ಸಂಸ್ಥೆ ಕೆಎಂಎಫ್ ಪ್ರಾಕೃತಿಕ ವಿಕೋಪ, ನೇರೆ, ಮುಂತಾದ ಸಂದರ್ಭಗಳಲ್ಲಿ ಸಿ.ಎಂ. ಪರಿಹಾರ ನಿಧಿಗೆ ದೇಣಿಗೆಯನ್ನು ನೀಡುತ್ತಾ ಬಂದಿರುವುದು ಎಲ್ಲರಿಗೂ ತಿಳಿದ ಸಂಗತಿ. ಈಗ ಪ್ರಸ್ತುತ ವಿಶ್ವದಲ್ಲಿ ವ್ಯಾಪಿಸಿರುವ ಕೊರೊನಾ ನಮ್ಮ ಕರ್ನಾಟಕದಲ್ಲು ಹಬ್ಬುತ್ತಿದೆ ಈ ಸಂದರ್ಭದಲ್ಲಿ ಸರ್ಕಾರ ಸಾಕಷ್ಟು ಮುತುವರ್ಜಿ ವಹಿಸಿ ಈ ಕೊರೊನಾ ಸೊಂಕನ್ನು ತಡೆಗಟ್ಟಲು ಹಗಲಿರುಳು ಪ್ರಯತ್ನಿಸುತ್ತಿದೆ. ಈ ಸಂದರ್ಭದಲ್ಲಿ ಕೆಎಂಎಫ್ ಕೊವಿಡ್ 19 ಸಿ.ಎಂ. ಪರಿಹಾರ ನಿಧಿಗೆ ರೂ. 5ಕೋಟಿಯನ್ನು ನೀಡಿದೆ.
ರೂ. 5ಕೋಟಿಯ ಚೆಕ್‍ನ್ನು ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್ ಮತ್ತು ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಲ ಜಾರಕಿ ಹೊಳಿರವರು ಜಂಟಿಯಾಗಿ ಸಿ.ಎಂ. ಯಡಿಯೂರಪ್ಪನವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ: ಸುಧಾಕರ್. ಹಾಗೂ ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಿ.ಸಿ. ಸತೀಶ್‍ರವರು ಹಾಗೂ ಕೆಎಂಎಫ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸರ್ಕಾರ ಈಗಾಗಲೇ ಕೆಎಂಎಫ್ ನಿಂದ ಹೆಚ್ಚುವರಿ ಹಾಲನ್ನು ಪ್ರತಿದಿನ (ಸುಮಾರು 7ಲಕ್ಷ ಲೀಟರ್ ಹಾಲು ) ಖರೀದಿಸಿ ಬಡವರಿಗೆ, ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಕೆಎಂಎಫ್ ಮತ್ತು ಹಾಲು ಒಕ್ಕೂಟದ ಸಿಬ್ಬಂದಿಯವರೂ ಕೂಡ ಕಛೇರಿಗಳಿಗೆ ಆಗಮಿಸಿ ತೊಂದರೆ ಆಗದ ರೀತಿ ಹಾಲನ್ನು ಗ್ರಾಹಕರಿಗೆ ತಲುಪಿಸಲು ಶ್ರಮಿಸುತ್ತಿದ್ದಾರೆ.