ಕೆಎಂಎಫ್ ಸುದ್ದಿ

ಸುವರ್ಣ ಪಥದತ್ತ ಕಹಾಮ ಕ್ಷೀರಸಾಗರ ಮಾಸ ಪತ್ರಿಕೆ

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ಮತ್ತು ರಾಜ್ಯದ ಗ್ರಾಮೀಣ ಭಾಗದ ಹಾಲು ಉತ್ಪಾದಕ ರೈತರ ಕೊಂಡಿಯಾಗಿರುವ ಕ್ಷೀರಸಾಗರ ಮಾಸÀ ಪತ್ರಿಕೆಗೆ 47 ವರ್ಷ ತುಂಬಿದೆ. ಇನ್ನು ಮೂರು ವರ್ಷಗಳಲ್ಲಿ ಸುವರ್ಣ ಮಹೋತ್ಸವದ ಸಂಭ್ರಮ.

ಹಾಲು ಉತ್ಪಾದಕರ ರೈತರಿಗೆ ಉತ್ತೇಜನ, ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆಗೆ ಪ್ರೋತ್ಸಾಹ, ರಾಸುಗಳ ಪೋಷಣೆ, ತಾಂತ್ರಿಕ ಕೌಶಲ್ಯಗಳ ನೆರವು ಹೀಗೆ ಹತ್ತು ಹಲವಾರು ಮಾಹಿತಿಗಳನ್ನು ಹಾಲು ಉತ್ಪಾದಕರ ರೈತರಿಗೆ ತಲುಪಿಸಿಸುವ ಉದ್ದೇಶದಿಂದ ಕ್ಷೀರಸಾಗರ ಪತ್ರಿಕೆ 1977ನೇ ಇಸವಿಯಲ್ಲಿ ಅಂದಿನ ಕೆ.ಡಿ.ಡಿ.ಸಿ ಯಿಂದ ಪ್ರಾರಂಭವಾಯಿತು. ಕೆಡಿಡಿಸಿಯ ಸಮೂಹ ಮಾಧ್ಯಮ ಸಲಹೆಗಾರರಾಗಿದ್ದ ಕೇಂದ್ರ ಸರ್ಕಾರದ ವಾರ್ತಾ ಇಲಾಖೆಯ ಅಧಿಕಾರಿಯಾಗಿ ನಿವೃತ್ತಿ ಅಂಚಿನಲ್ಲಿದ್ದ ಆರ್. ರಾಜಪ್ಪ ಶೆಟ್ಟಿಯವರು ಪ್ರಪ್ರಥಮ ಸಂಪಾದಕರಾಗಿದ್ದರು. ಇವರ ಜೊತೆ ಬಿ. ವಿಶ್ವನಾಥ್ ರವರು ಪತ್ರಿಕೆ ಸಿದ್ದಪಡಿಕೆಗೆ ಛಾಯಾಚಿತ್ರಗಳ ವಿಭಾಗದಲ್ಲಿ ಜೊತೆಯಾಗಿದ್ದರು. ಪತ್ರಿಕೆಯು ಅಂದಿನ ದಿನದಲ್ಲೇ ಆರ್.ಎನ್.ಐ ಸಂಖ್ಯೆಯನ್ನು ನೊಂದಾಯಿಸಲ್ಪಟ್ಟಿತ್ತು. ಪ್ರಾರಂಭದ ದಿನಗಳಲ್ಲಿ ವಾರ ಪತ್ರಿಕೆಯಾಗಿ ಮುದ್ರಣವಾಗುತ್ತಿದ್ದ ಕ್ಷೀರಸಾಗರ ಭಿತ್ತಿ ಪತ್ರಿಕೆಯಾಗಿತ್ತು. ಕ್ಷೀರ ಸಾಗರ ಬಿತ್ತಿ ಪತ್ರಿಕೆಯನ್ನು ಹಾಲು ಶೇಖರಣೆ ಮಾಡುವ ವಾಹನಗಳ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕಳುಹಿಸಲಾಗುತ್ತಿದ್ದದ್ದು ಇತಿಹಾಸ. ಅಲ್ಲಿ ಆ ಪತ್ರಿಕೆಗಳನ್ನು ಗೊಡೆಗೆ ಅಂಟಿಸುವ ಮೂಲಕ ಹಾಲು ಉತ್ಪಾದಕರ ರೈತರಿಗೆ ಹೈನೊದ್ಯಮ ವಿಷಯ/ಜ್ಞಾನ ತಲುಪುತ್ತಿತ್ತು.


ಆರಂಭದ ದಿನಗಳಲ್ಲಿ ಕೆಡಿಡಿಸಿಯ ನಾಲ್ಕು ಘಟಕಗಳಾದ ಮೈಸೂರು, ಹಾಸನ, ಬೆಂಗಳೂರು ತುಮಕೂರು ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪತ್ರಿಕೆ ತಲುಪುತ್ತಿತ್ತು. ಪತ್ರಿಕೆಯಲ್ಲಿ ಸಂಘಗಳ ಗರಿಷ್ಠ ಹಾಲು ಉತ್ಪಾದನೆ, ಮಾದರಿ ಸಂಘಗಳು, ರಾಸುಗಳ ಕಾಯಿಲೆ ಮತ್ತು ಚಿಕಿತ್ಸೆ, ತಾಂತ್ರಿಕ ವಿಷಯ ಹೀಗೆ ಹಲವಾರು ಉಪಯುಕ್ತ ಲೇಖನಗಳನ್ನು ಅನುಭವಿ ಲೇಖಕರಿಂದ ಬರೆಯಿಸಿ ಮುದ್ರಿಸಲಾಗುತ್ತಿತ್ತು. 1978ರಲ್ಲಿ ವಾರ ಪತ್ರಿಕೆಯಾಗಿ ಮುದ್ರಣವಾಗುತ್ತಿದ್ದ ಕ್ಷೀರಸಾಗರ ಬಿತ್ತಿ ಪತ್ರಿಕೆ ಕ್ಷೀರಸಾಗರ ಮಾಸ ಪತ್ರಿಕೆಯಾಗಿ ಟ್ಯಾಬೋಲೈಡ್ ರೂಪ ಪಡೆಯಿತು. ಕಾಲಾಂತರದಲ್ಲಿ ಎ-4 ಸೈಜಿನ ಪತ್ರಿಕೆಯಾಗಿ ಅಂದಿನಿಂದ ಇಂದಿನವರೆಗೂ ನಿರಂತರ 47ವರ್ಷಗಳಿಂದ ಮುದ್ರಣವಾಗುತ್ತಾ ಹಾಲು ಉತ್ಪಾದಕರಿಗೆ ಹೈನೋದ್ಯಮದ ಎಲ್ಲಾ ಅಗತ್ಯ ಮಾಹಿತಿಗಳನ್ನು ನೀಡುತ್ತಾ ಬಂದಿದೆ. ಆ ದಿನಗಳಲ್ಲಿ ಕಹಾಮ ಅಧ್ಯಕ್ಷರ ನೇತೃತ್ವದಲ್ಲಿ ಸಂಪಾದಕೀಯ ಮಂಡಳಿ ಸಭೆಯನ್ನು ಆಯೋಜಿಸಿ ಸಭೆಯಲ್ಲಿ ಪತ್ರಿಕೆ ರೂಪುರೇಷೆಗಳು ತಾಂತ್ರಿಕ ಲೇಖನಗಳ ಬಗ್ಗೆ ಚರ್ಚೆಯಾಗಿ ಉತ್ತಮ ಪತ್ರಿಕೆಯಾಗಿ ರೂಪಗೊಳ್ಳುತ್ತಿದ್ದನ್ನು ಕ್ಷೀರ ಸಾಗರ ಪತ್ರಿಕೆಯನ್ನು ಸುಧೀರ್ಘ 35 ವರ್ಷಗಳ ಕಾಲ ಸಿದ್ದಪಡಿಸಿ ಹಾಲು ಉತ್ಪಾದಕರಿಗೆ ಸಕಾಲದಲ್ಲಿ ತಲುಪಿಸುತ್ತಿದ್ದ ಕಹಾಮ ನಿವೃತ್ತ ಅಧಿಕಾರಿ ಬಿ. ವಿಶ್ವನಾಥ್‍ರವರು ಸ್ಮರಿಸುತ್ತಾರೆ.

ಕ್ಷೀರ ಸಾಗರ ಮಾಸ ಪತ್ರಿಕೆಯಲ್ಲಿ ಹೈನೋದ್ಯಮ ವಿಷಯದ ಲೇಖನ ಬಿಟ್ಟು ಬೇರೆ ಯಾವುದೇ ವಿಷಯದ ಲೇಖನಗಳಿಗೆ ಆದ್ಯತೆ ಕೊಟ್ಟಿರುವುದಿಲ್ಲ. ಈ ಹಿಂದೆ ಇದ್ದ ವ್ಯವಸ್ಥಾಪಕ ನಿರ್ದೇಶಕರುಗಳು ಪತ್ರಿಕೆ ಬಗ್ಗೆ ಕಾಳಜಿ ವಹಿಸಿ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ಹಲವಾರು ಹಿರಿಯ ಅಧಿಕಾರಿಗಳು ಪತ್ರಿಕೆಗೆ ಲೇಖನಗಳನ್ನು ನಿರಂತರವಾಗಿ ಬರೆಯುತ್ತಿದ್ದರು. ವಿಶೇಷವಾಗಿ ಎ.ಎಸ್. ಪ್ರೇಮನಾಥ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರು ಕ್ಷೀರ ಸಾಗರ ಪತ್ರಿಕೆಗೆ ಹೆಚ್ಚಿನ ಆದ್ಯತೆ ಕೊಟ್ಟು ಹಾಲು ಉತ್ಪಾದಕರಿಗೆ ನೇರವಾಗಿ ನಿಮ್ಮೊಂದಿಗೆ ಅಂಕಣದ ಮೂಲಕ ನಿರಂತರವಾಗಿ ಅವರ ಅವಧಿಯಲ್ಲಿ ಹಲವಾರು ಹೈನೋದ್ಯಮದ ವಿಷಯಗಳನ್ನು ಹಂಚಿಕೊಂಡಿದ್ದರು. ಡಾ: ಡಿ.ಎನ್. ಹೆಗಡೆ ನಿವೃತ್ತ ನಿರ್ದೇಶಕರು ಪ.ಸಂ ರವರು ಕ್ಷೀರಸಾಗರ ಪತ್ರಿಕೆಗೆ ಹ¯ವಾರು ಉಪಯುಕ್ತ ಲೇಖನಗಳನ್ನು ಬರೆಯುತ್ತಿದ್ದರು, ವಿಶೇಷವಾಗಿ ಋತುಮಾನ ಮಾಹಿತಿ ನೀಡುತ್ತಿದ್ದರು.


ಪ್ರಾರಂಭದಲ್ಲಿ ಕ್ಷೀರಸಾಗರ ಪತ್ರಿಕೆಯ ಸಂಪಾದಕರು ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಿದ್ದರು. ಪ್ರಸ್ತುತ ಕಹಾಮ ಪಶುಸಂಗೋಪನೆ ವಿಭಾಗದಿಂದ ಕ್ಷೀರಸಾಗರ ಪತ್ರಿಕೆ ಮುದ್ರಣವಾಗುತ್ತಿದ್ದು, ನಿರ್ದೇಶಕರಾದ ಡಾ: ಕೆ.ಎಸ್. ಬಸವರಾಜರವರು ಸಂಪಾದಕರಾಗಿರುತ್ತಾರೆ. ಇವರು ಕೂಡ ಹೈನೋದ್ಯಮದ ಹಲವಾರು ವಿಷಯಗಳನ್ನು ಲೇಖನಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಜಂಟಿ ನಿರ್ದೇಶಕರಾದ ಡಾ: ಮೋಹನ್ ಕುಮಾರ್ ರವರು ಪತ್ರಿಕೆಗೆ ಮೇಲ್ವಿಚಾರಕರಾಗಿರುತ್ತಾರೆ. ಪತ್ರಿಕೆಗೆ ನಿರಂತರವಾಗಿ ಜಂಟಿ ನಿರ್ದೇಶಕರಾದ ಡಾ; ಎಲ್. ರಾಘವೇಂದ್ರರವರು ಲೇಖನಗಳನ್ನು ಬರೆಯುತ್ತಿದ್ದು, ಹದಿನೈದು ಹಾಲು ಒಕ್ಕೂಟಗಳಿಂದ ಮತ್ತು ಕಹಾಮ ಘಟಕಗಳಿಂದ ಕ್ಷೀರಸಾಗರ ಪತ್ರಿಕೆಗೆ ಸುದ್ದಿ/ಲೇಖನ ನೀಡಲು ನೊಡೆಲ್ ಅಧಿಕಾರಿಗಳು ನಿಯೋಜನೆಗೊಂಡಿರುತ್ತಾರೆ.

ಕಹಾಮ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಂ.ಕೆ. ಜಗದೀಶ್ ರವರು ಕ್ಷೀರಸಾಗರ ಪತ್ರಿಕೆಯನ್ನು ಮತ್ತಷ್ಟು ಉತ್ತಮ ಗುಣಮಟ್ಟದಲ್ಲಿ ನೂತನ ವಿನ್ಯಾಸದೊಂದಿಗೆ ಹೊರತರಲು ಪ್ರೋತ್ಸಾಹ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಪತ್ರಿಕೆಯನ್ನು ಹೊರತರಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಪ್ರಸ್ತುತ ಹದಿನೈದು ಸಾವಿರ ಪತ್ರಿಕೆಗಳು ಮುದ್ರಣವಾಗುತ್ತಿದ್ದು, ಹಾಲು ಉತ್ಪಾದಕ ಸಂಘಗಳಿಗೆ, ರೈತರಿಗೆ, ಜನಪ್ರತಿನಿಧಿಗಳಿಗೆ, ಚಂದಾದಾರರಾಗಿರುವವರಿಗೆ ಪತ್ರಿಕೆ ತಲುಪುತ್ತಿದೆ ಸಾಕಷ್ಟು ಜನ ಆಸಕ್ತಿಯಿಂದ ಕ್ಷೀರಸಾಗರ ಪತ್ರಿಕೆಯನ್ನು ಓದುತ್ತಿದ್ದಾರೆ ಪತ್ರಿಕೆಯಲ್ಲಿ ಹೈನೋದ್ಯಮದ ಸುದ್ದಿಗಳು, ತಾಂತ್ರಿಕ ಲೇಖನಗಳು, ಪ್ರಶ್ನೋತ್ತರ, ಪದಬಂಧ, ಹೊಸ ಉತ್ಪನ್ನಗಳ ಛಾಯಾಚಿತ್ರಗಳು ಕಹಾಮ/ಒಕ್ಕೂಟಗಳ ಸುದ್ದಿಗಳು ಪ್ರಸಾರವಾಗುತ್ತಿದೆ.

ಜೆ.ನವೀನ್ ಕುಮಾರ್
ಸಹಾಯಕ ನಿರ್ದೇಶಕರು ಹಾಗೂ
ಕ್ಷೀರಸಾಗರ ಪತ್ರಿಕೆ ನಿರ್ವಾಹಕರು.
ಕೇಂದ್ರೀಯ ತರಬೇತಿ ಸಂಸ್ಥೆ. ಕಹಾಮ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!