ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನ 14 ಹಾಲು ಒಕ್ಕೂಟಗಳಲ್ಲಿ ಒಂದಾದ ಚಾಮರಾಜನಗರ ಹಾಲು ಒಕ್ಕೂಟವು ತನ್ನ ಕಾರ್ಯವ್ಯಾಪ್ತಿಯಲ್ಲಿ ಪ್ರತಿನಿತ್ಯ ಗ್ರಾಮೀಣ ಭಾಗದಿಂದ ಹಾಲನ್ನು ಸಂಗ್ರಹಿಸಿ ಸಂಸ್ಕರಿಸಿ ಹಾಲು ಮತ್ತು ಹಾಲಿನ ವಿವಿಧ ಉತ್ಪನ್ನಗಳನ್ನು ಪರಿಶುದ್ದತೆಯಿಂದ ತಯಾರು ಮಾಡಿ ಗ್ರಾಹಕರಿಗೆ ಒದಗಿಸುತ್ತಿರುವ ಸಹಕಾರಿ ಸಂಸ್ಥೆಯಾಗಿದ್ದು, ಈ ಕಾರ್ಯಾಚರಣೆಯನ್ನು ಬಲಪಡಿಸಲು ವಿವಿಧ 72 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.
ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ. ಖುದ್ದಾಗಿ/ಅಂಚೆ/ಕೋರಿಯರ್/ಪ್ರತ್ಯೇಕವಾಗಿ ಅರ್ಜಿ ಕಳುಹಿಸಲು ಅವಕಾಶವಿರುವುದಿಲ್ಲ. ಖುದ್ದಾಗಿ/ಅಂಚೆ/ಪ್ರತ್ಯೇಕವಾಗಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆಂದು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದೆ.
ಹುದ್ದೆಗಳು: ಸಹಾಯಕ ವ್ಯವಸ್ಥಾಪಕರು 8 ಹುದ್ದೆ, ತಾಂತ್ರಿಕ ಅಧಿಕಾರಿ 3ಹುದ್ದೆ, ಉಗ್ರಾಣಧಿಕಾರಿ 1 ಹುದ್ದೆ, ಕೃಷಿ ಅಧಿಕಾರಿ 2 ಹುದ್ದೆ, ವಿಸ್ತರಣಾಧಿಕಾರಿ 6ಹುದ್ದೆ, ಈ ರೀತಿಯಾಗಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ (ಹುದ್ದೆಗಳ ಸಂಪೂರ್ಣ ಮಾಹಿತಿ, ಅರ್ಹ ವಿದ್ಯಾರ್ಹತೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ www.chamul.co.in web ಸೈಟ್ ನೋಡುವುದು)
ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಪ್ರಾರಂಭಿಕ ದಿನಾಂಕ 20.02.2019 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20.03.2019 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 21.03.2019ಆಗಿರುತ್ತದೆ. ಸಂಪೂರ್ಣ ಮಾಹಿತಿಯನ್ನು ಚಾಮರಾಜನಗರ ಹಾಲು ಒಕ್ಕೂಟದ ಅಧಿಕೃತ ವೆಬ್ ಸೈಟ್ www.chamul.co.in ವಿವರಗಳನ್ನು ಓದಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಈ ಮಾಹಿತಿಯನ್ನು ನಿಮ್ಮ ಫೇಸ್‍ಬುಕ್ ಮತ್ತು ವಾಟ್ಸಪ್ ಮೂಲಕ ಸಾಧ್ಯವಾದಷ್ಟು ಗೆಳೆಯರ ಬಳಕ್ಕೆ ಹಂಚಿ ನಿಮ್ಮಿಂದ ಒಬ್ಬರಿಗೆ ಅನುಕೂಲವಾದರೆ ಅದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ.