ಉಪಯುಕ್ತ ಮಾಹಿತಿ

ಹಲಸಿನ ಹಣ್ಣನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ? ಓದಿ

ಈ ಹಣ್ಣನ್ನು ಸಿಗುವ ಕಾಲದಲ್ಲಿ ನಿಯಮಿತವಾಗಿ ಸೇವಿಸುವುದರಿಂದ ಇದರಲ್ಲಿರುವ ಫೋಷಕಾಂಶಗಳು ಕ್ಯಾನ್ಸರ್ ಅನ್ನು ನಿವಾರಿಸಲು ಸಹಾಯ ಮಾಡುತ್ತವೆ, ಅಧಿಕ ವಿಟಮಿನ್ ಎ ಇರುವುದರಿಂದ ಕಣ್ಣಿನ ಸಮಸ್ಯೆಗಳು ಕಡಿಮೆಯಾಗುತ್ತವೆ.

ಅದರಲ್ಲಿ ಮುಖ್ಯವಾಗಿ ಇರುಳುಗಣ್ಣು ತೊಂದರೆಗಳಿಗೆ ಉತ್ತಮ. ಇದರಲ್ಲಿರುವ ತಾಮ್ರದ ಅಂಶ ಥೈರಾಯಿಡ್ ತೊಂದರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬಾಳೆ ಹಣ್ಣನ್ನು ರಾತ್ರಿ ಹೊತ್ತು ತಿನ್ನಬಾರದು ಏಕೆ ಗೊತ್ತಾ? ಓದಿ

ಹಲಸಿನ ಹಣ್ಣಿನಲ್ಲಿ ಆಧಿಕ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳು ಸವೆತನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿ, ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನಂಶ ನಾವು ಸೇವಿಸಿದ ಆಹಾರ ಜೀರ್ಣವಾಗಲು ಸಹಕಾರಿಯಾಗುತ್ತದೆ. ಮತ್ತು ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ತಿನ್ನುವುದು ಉತ್ತಮ.ಹಲಸಿನ ಹಣ್ಣಿನಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು ಹೇಹದಲ್ಲಿನ ರಕ್ತ ಸಂಚಲನೆಗೆ ಸಹಾಯ ಮಾಡುವುದರ ಜೊತೆಗೆ ಮೂಳೆಗಳನ್ನು ಬಲಪಡಿಸಿ ಶರೀರದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ತಡೆಯುತ್ತದೆ.ಹಲಸಿನ ಹಣ್ಣನ್ನು ಸಕ್ಕರೆ ಕಾಯಿಲೆ ಇರುವವರು ವೈದ್ಯರ ಸಲಹೆಯ ನಂತರ ಸೇವಿಸುವುದು ಒಳ್ಳೆಯದು.

Jackfruit stock image. Image of isolated, candy, dish - 118812685
ಪ್ರತಿಯೊಂದು ಹಣ್ಣುಗಳಲ್ಲೂ ಒಂದೊಂದು ರೀತಿಯ ವಿಟಮಿನ್ಸ್ ಗಳು ದೊರೆಯುತ್ತವೆ. ಆಯ ಸೀಸನ್‍ಗಳ ಅನುಗುಣವಾಗಿ ಪ್ರತಿಯೊಂದು ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಉತ್ತಮ.
-ಲಕ್ಷ್ಮಿ ಸಂತೋಷ್

 

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!