ಸಾಧಕರು

ಸಾಧಿಸಬೇಕೆಂಬ ಛಲವಿದ್ದವನಿಗೆ ಸಣ್ಣ ಕಡ್ಡಿಯೊಂದೇ ಸಾಕು!!

ಸಾಧಿಸಬೇಕೆಂಬ ಛಲವಿದ್ದವನಿಗೆ ಸಣ್ಣ ಕಡ್ಡಿಯೊಂದೇ ಸಾಕು!!

ಸಮಾಜನದಲ್ಲಿ ಪ್ರತಿಯೊಬ್ಬರು ತಮ್ಮ ಇರುವಿಕೆಯನ್ನು ಗುರುತಿಸಿಕೊಳ್ಳಲು ಏನಾದರೊಂದು ಕೆಲಸವನ್ನು ಮಾಡುತ್ತಿರುತ್ತಾರೆ. ಮತ್ತೆ ಕೆಲವರು ಸಾಧಿಸಬೇಕೆಂಬ ಹುಮ್ಮಸಿನಿಂದ ವಿಶೇಷವಾಗಿ ಯಾವುದಾದರೊಂದು ಕೆಲಸವನ್ನು ಮಾಡುತ್ತಿರುತ್ತಾರೆ. ಆದರೆ ಸಾಧಿಸಬೇಕೆಂಬ ಛಲವಿದ್ದವನಿಗೆ ಸಣ್ಣ ಕಡ್ಡಿಯೊಂದೇ ಸಾಕು!! ಆ ಕಡ್ಡಿಯಿಂದ ಆ ವ್ಯಕ್ತಿ ಗಿನ್ನಿಸ್ ದಾಖಲೆ ಮಾಡುತ್ತಾನೆಂದರೆ ಯಾರಿಗಾದರು ಅನುಮಾನ ಬಂದೇ ಬರುತ್ತದೆ. ಅಂದ ಹಾಗೆ ಆ ಕಡ್ಡಿ ಬೇರೆ ಯಾವುದೂ ಅಲ್ಲ ನಾವು ಹಲ್ಲನ್ನು ಸ್ವಚ್ಚಗೊಳಿಸಲು ಬಳಸುವ ಸಾಮಾನ್ಯ ಟೂತ್‍ಪಿಕ್!!

ಇವತ್ತು ನಾನು ಪರಿಚಯ ಮಾಡುತ್ತಿರುವ ಸಾಧಕನ ಹೆಸರು ಮಲ್ಲಿಕಾರ್ಜುನ ರೆಡ್ಡಿ ಇವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮದ ಯುವಕ. ಇವರ ತಂದೆ ಅದೇ ಊರಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಚಂಗಲರಾಯರೆಡ್ಡಿ.

ಬಾಲ್ಯದಲ್ಲೇ ಕಲೆ ಬಗ್ಗೆ ಆಸಕ್ತಿ ಇದ್ದ ಮಲ್ಲಿಕಾರ್ಜುನ ರೆಡ್ಡಿ ಸಿಮೇ ಸುಣ್ಣದಲ್ಲಿ ಹಲವಾರು ಮಹನೀಯರ ಚಿತ್ರಗಳನ್ನು ಕೆತ್ತಿದ್ದಾರೆ. ಅಕ್ಕಿಕಾಳಿನಲ್ಲಿಯೂ ಇವರ ಕಲಾಕೃತಿಗಳು ರಚನೆಗೊಂಡಿವೆ. ಇದು ನಿಜಕ್ಕೂ ಸವಾಲಿನ ಕೆಲಸ ಏಕೆಂದರೆ ಅತ್ಯಂತ ಸೂಕ್ಸ್ಮವಾಗಿ ಈ ಕಾರ್ಯವನ್ನು ಮಾಡಬೇಕಾಗುತ್ತದೆ. ಇಲ್ಲವಾದರೆ ಪೂರ್ತಿ ಕೆತ್ತನೆ ಮಾಡುವ ಮುಂಚೆಯೇ ಮುರಿದು ಹೋಗುವ ಸಂಭವವಿರುತ್ತದೆ. ಈ ರೀತಿ ಸೂಕ್ಮ ಕೆತ್ತನೆಯ ಕೆಲಸವನ್ನು ಕರಗತ ಮಾಡಿಕೊಂಡಿದ್ದ ಈ ಯುವಕ 2005ರಲ್ಲಿ ಟೂತ್‍ಪಿಕ್ ನಲ್ಲಿ 28 ಚೈನ್ ಲಿಂಕ್ ಮಾಡುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. ಇವರ ಕಲಾಕೃತಿಗಳ ಪ್ರದರ್ಶನ ಬೆಂಗಳೂರಿನ ಚಿತ್ರಕಲಾ ಪರಿಷತ್‍ನಲ್ಲಿ 2001ರಲ್ಲಿ ನಡೆದಿದೆ.

ಸರಳತೆಯೇ ಬದುಕೆಂದು ಬದುಕುತ್ತಿರುವ ಮಲ್ಲಿಕಾರ್ಜುನ್ 60ಕ್ಕೂ ವಿವಿಧ ದೇಶಗಳನ್ನೂ ಸುತ್ತಿದ್ದಾರೆ. ಪ್ರಸ್ತುತ ಯುನೆಸ್ಕೋದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಇವರು ಪ್ರಪಂಚದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಇವರ ಸಾಧನೆ ಯುವ ಸಮೂಹಕ್ಕೆ ಪ್ರೇರಣೆಯಾಗಲಿ.
-ನವೀನ್ ರಾಮನಗರ

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!