ದಟ್ಟವಾದ ಕೇಶ ರಾಶಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ಇಂದಿನ ಜೀವನಶೈಲಿ, ಆಹಾರ ಕ್ರಮದಿಂದ ಕೂದಲು ಉದುರುವುದರ ಜೊತೆಗೆ ತಲೆಹೊಟ್ಟಿನ ಸಮಸ್ಯೆ ಕೂಡ ಕಾಡುತ್ತದೆ.
ಹೊಟ್ಟಿನ ಸಮಸ್ಯೆಯಿಂದ ಬಳುತ್ತಿರುವವರು ಈ ಆಹಾರವನ್ನು ಸೇವಿಸಿದರೆ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ರಾಮನಗರದಲ್ಲಿ ದಿನಸಿ ಕಿಟ್ (ಅನ್ನಂ ಪರಬ್ರಹ್ಮ )ನೀಡುವ ಕಾರ್ಯಕ್ಕೆ ಹೆಚ್ಡಿಕೆ ಕುಟುಂಬದಿಂದ ಚಾಲನೆ.
ಶುಂಠಿಯು ಬ್ಯಾಕ್ಟೀರಿಯಾ, ಶೀಲಿಂಧ್ರಗಳ ನಾಶಕಾರಿ ಗುಣವನ್ನು ಹೊಂದಿದೆ. ಹಾಗಾಗಿ ಸರಿಯಾಗಿ ಜೀರ್ಣಕ್ರೀಯೆ ಆಗದವರು ಶುಂಠಿಯನ್ನು ನಿಮ್ಮ ಅಹಾರದೊಂದಿಗೆ ಸೇವಿಸಿ. ಇದರಿಂದ ಜೀರ್ಣಕ್ರೀಯೆ ಸುಲಭವಾಗಿ ತಲೆಹೊಟ್ಟು ಕೂಡ ನಿವಾರಣೆಯಾಗುತ್ತದೆ. ಪದೇ ಪದೇ ಈ ಸಮಸ್ಯೆ ಕಾಡದಂತೆ ಕಾಪಾಡುತ್ತದೆ.
ನೀವು ಕರಿಬೇವಿನ ಸೊಪ್ಪು ಬಳಸುತ್ತೀರಾ? ಅದರ ಉಪಯೋಗ ಓದಿ
ಇನ್ನು ಸೂರ್ಯಕಾಂತಿ ಬೀಜ ಕೂಡ ಜೀರ್ಣಕ್ರೀಯೆಗೆ ಹೆಚ್ಚಿನ ಸಹಕಾರಿಯಾಗಿದೆ. ಇದರಲ್ಲಿರುವ ಸತು ಮತ್ತು ವಿಟಮಿನ್ ಬಿ6 ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಇದು ಅಜೀರ್ಣವನ್ನು ಕಡಿಮೆ ಮಾಡುತ್ತದೆ. ಇದು ಕೂಡ ತಲೆಹೊಟ್ಟು ಆಗದಂತೆ ತಡೆಯುತ್ತದೆ.
-lakshmi Santhosh