ಸ್ನೇಹಿತರೆ ಸಾಮಾನ್ಯವಾಗಿ ಬೆಕ್ಕಿನ ಬಗ್ಗೆ ಅಪನಂಬಿಕೆಯ ಮಾತುಗಳನ್ನು ಕೇಳಿರುತ್ತೇವೆ. ಅದು ಏನೆಂದರೆ ಬೆಕ್ಕು ಅಡ್ಡ ಬಂದರೆ ಅಪಶಕುನ ನಮಗೆ ಒಳ್ಳೆಯದಾಗುವುದಿಲ್ಲ ಕೆಡುಕಾಗುತ್ತದೆ ಎಂಬ ಮಾತುಗಳು ಸಾಮಾನ್ಯವಾಗಿ ನಮ್ಮ ಕಿವಿಗೆ ಬೀಳುತ್ತಿರುವುದನ್ನು ನಾವು ಗಮನಿಸಿರುತ್ತೇವೆ.
ನಮ್ಮ ಹಿಂದಿನವರು ಏನನ್ನು ಮಾಡಿದರೂ ಕೂಡ ಒಂದು ವೈಜ್ಞಾನಿಕ ಕಾರಣದಿಂದ ಮಾಡಿರುತ್ತಾರೆ. ಯಾವುದೇ ಮೂಡನಂಬಿಕೆÉಗಳಿಂದ ಅವುಗಳನ್ನು ಬೆಳೆಸಿಕೊಂಡು ಬಂದಿರುವುದಿಲ್ಲ. ಅದರೆ ಅದು ಬೆಳೆದಂತೆ ಬೆಳೆದಂತೆ ಮೂಡನಂಭಿಕೆಯಾಗಿ ಬದಲಾವಣೆಯಾಗಿ ಅದರ ಹಿಂದಿರುವ ವೈಜ್ಞಾನಿಕ ಕಾರಣವೆ ಮರೆತುಬಿಟ್ಟಿದ್ದೆವೆ. ಎಂಬುದು ನಮಗೆಲ್ಲ ಗೊತ್ತಿರುವ ವಿಷಯ ಬೆಕ್ಕು ಅಡ್ಡ ಬಂದರೆ ಒಳ್ಳೆಯಾದಗುವುದಿಲ್ಲ ಎಂಬುದರ ಹಿಂದೆ ವೈಜ್ಞಾನಿಕ ಕಾರಣ ಇದೆ ಎಂಬ ಪ್ರಶ್ನೆ ಎಲ್ಲರ ತಲೆಯಲ್ಲೂ ಬಂದಿರುವುದು ಸಾಮಾನ್ಯ ಅದಕ್ಕಿರುವ ವೈಜ್ಞಾನಿಕ ಕಾರಣ ಏನೆಂದರೆ ಹಿಂದಿನ ಕಾಲದಲ್ಲಿ ಜನರು ಒಂದೂರಿನಿಂದ ಮತ್ತೊಂದು ಊರಿಗೆ ಹೋಗುವಾಗ ಕಾಡು ಬೆಕ್ಕುಗಳು ರಸ್ತೆಯಲ್ಲಿ ಅಡ್ಡ ಬರುತ್ತಿದ್ದವು.
ಹಿಂದಿನ ಕಾಲದಲ್ಲಿ ಒಂದೂರಿಂದ ಮತ್ತೊಂದು ಊರಿಗೆ ಹೋಗುವಾಗ ಯಾವುದೇ ವಾಹನಗಳನ್ನು ಬಳಸುತ್ತಿರಲಿಲ್ಲ, ಆಗ ಕುದುರೆ ಗಾಡಿ ಅಥವಾ ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದರು ಅಂತಹ ಸಮಯದಲ್ಲಿ ಬೆಕ್ಕುಗಳು ಅಡ್ಡ ಬಂದಾಗ ಅವುಗಳ ಕಣ್ಣಿನ ಬೆಳಕಿಗೆ ಎತ್ತು ಅಥವಾ ಕುದುರೆ ಹೆದರಿ ಓಡಿ ಹೋಗುತ್ತಿದ್ದವು.
ಲವಂಗದಿಂದ ಏನೆಲ್ಲಾ ಉಪಯೋಗವಿದೆ ಗೊತ್ತಾ? ಓದಿ
ಅದರಿಂದ ಕೆಲವೊಬ್ಬರ ಸಾವು ಕೂಡ ಆಗಿತ್ತಿತ್ತು ಅದರಿಂದ ಹೆಚ್ಚು ಹೆಚ್ಚಿನ ಅಪಾಯಗಳು ಕೂಡ ಸಂಭವಿಸುತ್ತಿತ್ತು . ಆ ಕಾರಣದಿಂದ ಜನರು ಈ ರೀತಿ ಬೆಕ್ಕುಗಳ ಅಡ್ಡ ಬಂದಾಗ ಆ ಗಾಡಿಗಳನ್ನು ನಿಲ್ಲಿಸಿ ಎತ್ತು ಅಥವಾ ಕುದುರೆಗೆ ಸಮಾಧಾನ ಮಾಡಿಕೊಂಡು ಅವು ಸಮಾಧಾನವಾದ ನಂತರ ಆ ಸ್ಥಳದಿಂದ ಹೊರಡುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಸಹ ಬೆಕ್ಕು ಅಡ್ಡ ಬಂದರೆ ಒಂದು ಕ್ಷಣ ಸ್ಥಳದಲ್ಲಿ ನಿಂತು ಹೋಗುವುದು ವಾಡಿಕೆಯಾಗಿದೆ ಅದರ ಹಿಂದಿರುವ ವೈಜ್ಞಾನಿಕ ಕಾರಣವನ್ನು ಮರೆತಿರುವ ಜನರು ಅದನ್ನು ಮೂಢನಂಬಿಕೆಯಾಗಿ ಬದಲಾವಣೆ ಮಾಡಿಕೊಂಡು ಈ ಆಧುನಿಕ ಕಾಲದಲ್ಲಿ ಕೂಡ ಬಾಳುತ್ತಿರುವುದನ್ನು ನಾವು ನೋಡಬಹುದು. ಇನ್ನು ಮುಂದೆ ಆದರೂ ಬೆಕ್ಕು ಅಡ್ಡ ಬಂದರೆ ಅಪಶಕುನ ಎಂದು ಅಂದುಕೊಳ್ಳದೆ. ನಿಮ್ಮ ಕೆಲಸವನ್ನು ನೀವು ಆರಾಮಾಗಿ ಮಾಡಿಕೊಳ್ಳಿ ಈ ವಿಷಯವನ್ನು ನೀವು ತಿಳಿದುಕೊಳ್ಳಿ ಮತ್ತು ಬೇರೆಯವರಿಗೂ ತಿಳಿಸಿ.
-lakshmi Santhosh