ನಿಜ ನಮ್ಮ ದೇಹಕ್ಕೆ 2 ಬಾಳೆಹಣ್ಣು ಸೇವಿಸುವುದರಿಂದ ಅಗತ್ಯವಾದ ಎಲ್ಲ ಪೋಷಕಾಂಶಗಳೂ ಸಿಗುತ್ತವೆ ಮತ್ತು ಬಾಳೆಹಣ್ಣಿನಲ್ಲಿರುವ ಪೋಟ್ಯಾಷಿಯಂ ಅಂಶ ನಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.
ಡಬಲ್ ಡೋರ್ ಬ್ಲಾಕ್ ಅಂಡ್ ವೈಟ್ ಟಿ.ವಿ ನೋಡಿದ ನೆನಪಿದಿಯಾ?
ಎಲ್ಲರೂ ನಂಬಿದಂತೆ ಬಾಳೆ ಹಣ್ಣನ್ನು ರಾತ್ರಿ ಮಲಗುವಾಗ ತಿನ್ನಲೇ ಬಾರದಂತೆ. ಏಕೆಂದರೆ, ರಾತ್ರಿ ವೇಳೆಯಲ್ಲಿ ಬಾಳೆ ಹಣ್ಣು ಬೇಗ ಜೀರ್ಣವಾಗದ ಕಾರಣ ನಮ್ಮ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿ ಕೆಲಸ ಮಾಡುವುದಕ್ಕೆ ಸೋಮಾರಿತನವನ್ನು ಕಂಡುಕೊಳ್ಳಬಹುದು. ಅದಕ್ಕೆ ಅದಷ್ಟು ಬಾಳೆಹಣ್ಭನ್ನು ಬೆಳಗ್ಗೆ ತಿಂದರೆ ಒಳ್ಳೆಯದು ಅಥವಾ ಸಂಜೆ ತಿಂದರೂ ಆಗಬಹುದು. ಫಿಟ್ ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಜಿಮ್ ನಂತರ ತಿಂದರೆ ಒಳ್ಳೇಯದೇ.
ಜ್ವರ ,ಕೆಮ್ಮು ,ನೆಗಡಿಯಿಂದ ಬಳಲುತ್ತಿರುವವರು ಬಾಳೆಹಣ್ಣನ್ನು ತಿನ್ನದಿದ್ದರೆ ಉತ್ತಮ. ಬಾಣಂತಿಯರು ತಿನ್ನಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ, ವೈದ್ಯರ ಸಲಹೆಯ ನಂತರ ಬಾಣಂತಿಯರು ತಿಂದರೆ ಒಳ್ಳೆಯದು.
ಅಪರೂಪಕ್ಕೊಮ್ಮೆ ರಾತ್ರಿ ಮಲಗುವಾಗ ತಿಂದರೆ ಪರಾವಾಗಿಲ್ಲ ಆದರೆ, ದಿನ ತಿನ್ನುವುದರಿಂದ ಅದು ಅಸ್ತಮಾ ಅಥವಾ ಸೈನಸ್ ಬರುವಂತಹ ಸಾಧ್ಯತೆ ಇರುತ್ತದೆ.ಬಾಳೆ ಹಣ್ಣು ತಿನ್ನುವ ಮೂಲಕ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಿ ಆದರೆ ರಾತ್ರಿಹೊತ್ತು ತಿನ್ನದೇ ಇರಲು ಪ್ರಯತ್ನಿಸಿ.
-lakshmi santhosh