ರಾಜ್ಯದ 14 ಹಾಲು ಒಕ್ಕೂಟಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಬೆಂಗಳೂರು ಹಾಲು ಒಕ್ಕೂಟದಲ್ಲಿ ಖಾಲಿ ಇರುವ ವಿವಿಧ ವೃಂದದ 297 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಆಹ್ವಾನಿಸಲಾಗಿರುತ್ತದೆ.
ನೇಮಕಾತಿಗೆ ಅಭ್ಯರ್ಥಿಗಳು ಆರ್ಜಿಗಳನ್ನು ಖುದ್ದಾಗಿ/ಅಂಚೆ/ಕೋರಿಯರ್ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ. ಇದನ್ನು ಬೆಂಗಳೂರು ಹಾಲು ಒಕ್ಕೂಟ ಸ್ಪಷ್ಟವಾಗಿ ತಿಳಿಸಿರುತ್ತದೆ. ಅರ್ಜಿಗಳನ್ನು ದಿನಾಂಕ 04.01.2021 ರಿಂದ ಸಲ್ಲಿಸಬಹುದಾಗಿದ್ದು, ಕೊನೆಯ ದಿನಾಂಕ 03.02.2021 ಆಗಿರುತ್ತದೆ. ಈ ಸಂಬಂಧ ಹೆಚ್ಚಿನ ಮಾಹಿತಿ, ಅರ್ಜಿಗಳಿಗಾಗಿ www.bamulnandini.coop ವೆಬ್ ಸೈಟ್‍ಗೆ ಭೇಟಿ ನೀಡಿ.
ಹುದ್ದೆಗಳು: ಸಹಾಯಕ ವ್ಯವಸ್ಥಾಪಕರು(ಪ.ವೈ) 50 ಹುದ್ದೆಗಳು, ಸಹಾಯಕ ವ್ಯವಸ್ಥಾಪಕರು(ವಿತ್ತ) 03 ಹುದ್ದೆಗಳು, ಹಿರಿಯ ಪ್ರೋಟೇಕ್ಷನ್ ಆಫೀಸರ್ 01 ಹುದ್ದೆ, ತಾಂತ್ರಿಕ ಅಧಿಕಾರಿ 23 ಹುದ್ದೆಗಳು, ಕಿರಿಯ ತಾಂತ್ರಿಕರು 106 ಹುದ್ದೆಗಳು, ಸೇರಿದಂತೆ ವಿವಿಧ ವೃಂದದ ಒಟ್ಟು 297 ಹುದ್ದೆಗಳು.
ಸದರಿ ಪರೀಕ್ಷೆಯ ಸಿದ್ದತೆ, ಸಿಲೇಬಸ್, ಮತ್ತು ಅಧ್ಯಯನ ಪುಸ್ತಕಗಳ ಮಾಹಿತಿಗಳ ಅವಶ್ಯಕತೆ ಇರುವವರು ಯೂ ಟ್ಯೂಬ್ ಚಿಗುರು ಟಿ.ವಿಯನ್ನು ಉಚಿತವಾಗಿ ಸಬ್‍ಸ್ಕ್ರಬ್ ಮಾಡಿಕೊಳ್ಳಿ, ಇದರಲ್ಲಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯ ವಿಡಿಯೋಗಳು ಮುಂದಿನ ದಿನಗಳಲ್ಲಿ ಸಿಗುತ್ತವೆ.