“ನಂದಿನಿ” ಸಿಹಿ ಉತ್ಪನ್ನಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕಳೆದ 5 ವರ್ಷಗಳಿಂದ ಕರ್ನಾಟಕ ಹಾಲು ಮಹಾಮಂಡಳವು “ನಂದಿನಿ ಸಿಹಿ ಉತ್ಸವ” ಯೋಜನೆ ನೀಡಿ ಎಲ್ಲಾ ಸಿಹಿ ಉತ್ಪನ್ನಗಳ ಮಾರಾಟ ದರದ ಮೇಲೆ ರಿಯಾಯಿತಿ ನೀಡಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಮೆಚ್ಚುಗೆ ವ್ಯಕ್ತವಾಗಿರುತ್ತದೆ.
ಪ್ರಸ್ತುತ, ಕಹಾಮವು ಹೊಸವರ್ಷ, ಕ್ರಿಸ್ಮಸ್ ಮತ್ತು ಸಂಕ್ರಾಂತಿ ಹಬ್ಬಗಳ ಪ್ರಯುಕ್ತ ದಿನಾಂಕ 19.12.2022 ರಿಂದ ಒಂದು (01) ತಿಂಗಳ ಕಾಲ ನಂದಿನಿ ಸಿಹಿ ಉತ್ಸವವನ್ನು ರಾಜ್ಯದಾದ್ಯಂತ ಆಚರಿಸಲಾಗುತ್ತಿದ್ದು, ಎಲ್ಲಾ ನಂದಿನಿ ಸಿಹಿ ಉತ್ಪನ್ನಗಳಾದ ಮೈಸೂರ್ಪಾಕ್, ಪೇಡಾ, ಧಾರವಾಡ, ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಬಾದಾಮ್/ಕ್ಯಾಶು/ಡ್ರೈಪ್ರೂಟ್ರ್ಸ್/ ಕೋಕೋನಟ್/ಚಾಕೋಲೇಟ್ ಬರ್ಫಿಗಳು, ಕುಂದ, ಜಾಮೂನ್, ರಸಗುಲ್ಲಾ, ಸಿರಿಧಾನ್ಯ ಲಾಡು, ಸಿರಿಧಾನ್ಯ ಹಾಲಿನ ಪುಡಿ, ಚಕ್ಕಿ ಲಾಡು, ಕುಕ್ಕೀಸ್ ಮತ್ತು ಎಲ್ಲಾ ಸಿಹಿ ಉತ್ಪನ್ನಗಳ ಮಾರಾಟ ದರದ ಮೇಲೆ ಪ್ರಪ್ರಥಮವಾಗಿ ಶೇ. 20 ರಷ್ಟು ರಿಯಾಯಿತಿ ಯನ್ನು ನೇರವಾಗಿ ಗ್ರಾಹಕರಿಗೆ ನೀಡಲಾಗುತ್ತ್ತಿದೆ.
ಈ ಬಾರಿ ಗ್ರಾಹಕರ ಅಭಿರುಚಿಯನ್ನು ಪರಿಗಣಿಸಿ ಹೊಸದಾಗಿ ಖೋವಾ ಬಾದಮ್ ರೋಲ್, ಖೋವಾ ಚಾಕೋನಟ್ಟಿ ರೋಲ್, ಗೋಡಂಬಿ ರೋಲ್, ಬೆಲ್ಲದ ಬರ್ಫಿ. ಕಲಾಕಂದ್, ಬೋವಾ ಲಾಡು, ಕರದಂಟು, ಅಕ್ಕಿ ಪಾಯಸ ಮಿಶ್ರಣ, ಗುಡ್ಲೈಫ್ ಚಾಕೋಲೇಟ್ ಗಿಫ್ಟ್ ಬಾಕ್ಸ್ ಇತ್ಯಾದಿ ಅನೇಕ ಸಿಹಿ ಉತ್ಪನ್ನಗಳ ಸೇರ್ಪಡೆ ಮಾಡಿದ್ದು, ಈ ನೂತನ ಉತ್ಪನ್ನಗಳಿಗೂ ಶೇ. 20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ದಿನಾಂಕ: 19.12.2022 ರಂದು ಕರ್ನಾಟಕ ಹಾಲು ಮಹಾಮಂಡಳದ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಬಿ.ಸಿ.ಸತೀಶ್,ಕೆಸಿಎಸ್ ರವರು “ನಂದಿನಿ ಸಿಹಿ ಉತ್ಸವ” ಯೋಜನೆಗೆ ಬೆಂಗಳೂರಿನ ನಂದಿನಿ ಪಾರ್ಲರ್ನಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗಿದ್ದು, ರಾಜ್ಯದ್ಯಾಂತ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೋರಿದರು ಹಾಗೂ ಈ ಸಂಧರ್ಭದಲ್ಲಿ ಕಹಾಮದ ಇತರೆ ಹಿರಿಯ ಅಧಿಕಾರಿಗಳು ಮತ್ತು ಗ್ರಾಹಕರು ಭಾಗವಹಿಸಿದ್ದರು.