ಲವಂಗದಿಂದ ನಾವು ನಮ್ಮ ದೇಹದ ಎಷ್ಟೋ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಲವಂಗ ಒತ್ತಡವನ್ನು ನಿವಾರಣೆ ಮಾಡಿ ದೇಹವನ್ನು ಸಮ ಸ್ಥಿತಿಗೆತರುತ್ತದೆ. ಇನ್ನು ಕೆಲವರಿಗೆ ಪ್ರಯಾಣ ಹೋಗುವಾಗ ವಾಕರಿಕೆ ಬಂದ ಹಾಗೇ ಆಗುವುದು ಮತ್ತು ತಿಂದ ಆಹಾರ ಸರಿಯಾಗಿ ಜೀರ್ಣ ಆಗದೇ ಪಿತ್ತ ಆಗಿ ಸಹ ವಾಕರಿಕೆ ಆಗಬವುದು. ಇದಕ್ಕೆ ಲವಂಗವನ್ನು ಉಪಯೋಗಿಸುವುದು ಸೂಕ್ತ ಪರಿಹಾರ
ಹಲಸಿನ ಹಣ್ಣನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ? ಓದಿ
ಶೀತ ಮತ್ತು ಜ್ವರಕ್ಕೆ: ಒಂದು ಲೋಟ ಬಿಸಿ ನೀರಿಗೆ ಲವಂಗವನ್ನು ಜಜ್ಜಿ ಹಾಕಿ ಕುಡಿಯುವುದರಿಂದ ಶೀತ ಕಡಿಮೆಯಾಗುತ್ತದೆ. 2ಲವಂಗ ಮತ್ತು 4/5 ತುಳಸಿ ಎಲೆಗಳನ್ನ ನೀರಿಗೆ ಹಾಕಿಆರಿಸಿ ಸ್ವಲ್ಪ ಜೇನು ಬೆರೆಸಿ ಸೇವಿಸುವುದರಿಂದ ಶೀತ ಮತ್ತು ಜ್ವರ ಕಡಿಮೆ ಆಗುತ್ತದೆ.
ಕತ್ತು ನೋವಿಗೆ: ಸಾಸಿವೆ ಎಣ್ಣೆಗೆ 2 ಲವಂಗವನ್ನು ಬೇರೆಸಿ ಸ್ವಲ್ಪ ಬಿಸಿ ಮಾಡಿ ಕತ್ತು ನೋವಿರುವ ಜಾಗಕ್ಕೆ ಹಚ್ಚಿ ಸ್ವಲ್ಪ ಹೋತ್ತು ಹಾಗೇ ನೀವುÀವುದರಿಂದ ಕುತ್ತಿಗೆ ನೋವು ಕಡಿಮೆಯಾಗುತ್ತದೆ. ಪ್ರತಿ ನಿತ್ಯ 2ಲವಂಗವನ್ನು ನೀರಿಗೆ ಹಾಕಿ ಕುದಿಸಿ ತಣ್ಣಗೆ ಆದ ಮೇಲೆ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುತ್ತದೆ.
ಪ್ರತಿ ನಿತ್ಯ 2 ಲವಂಗ ಮತ್ತು 1 ಏಲಕ್ಕಿಯನ್ನು ಜಗಿಯುತ್ತ ಇದ್ದರೆ ಬಾಯಿಯ ದುರ್ವಾಸನೆ ಮತ್ತು ಹಲ್ಲು ನೋವು ಸಹ ಕಡಿಮೆಯಾಗುತ್ತದೆ. ಹಾಗೇ ಬಾಯಿಯಲ್ಲಿ ಹುಣ್ಣು ಆಗಿದ್ದರೆ 2 ಲವಂಗವನ್ನ ಜಜ್ಜೀ ಬಾಯಲ್ಲಿಟ್ಟುಕೊಂಡರೆ ಹುಣ್ಣು ಕಡಿಮೆಯಾಗುತ್ತದೆ.
ಲವಂಗದಿಂದ ನಮ್ಮ ದೇಹಕ್ಕೆ ಇರುವಂತಹ ಎಷ್ಟೋ ಉಪಯೋಗಗಳನ್ನು ತಿಳದುಕೊಂಡಿದ್ದೆವೆ ಹಾಗಾಗಿ ನಾವು ಪ್ರತಿ ನಿತ್ಯ ಲವಂಗ ತಿನ್ನುವುದು ಆರೋಗ್ಯಕ್ಕೆ ಉತ್ತಮ.