ನೆಗಡಿ ಮತ್ತು ಕೆಮ್ಮು ಸಾಮನ್ಯವಾಗಿ ಎಲ್ಲರಿಗೂ ಕಾಡುವಂತ ಸಮಸ್ಯೆಗಳು, ಧೂಳು, ಹೋಗೆ, ಕಲುಷಿತ ವಾತಾವರಣ ಅಲರ್ಜಿಯಿಂದ ಹೀಗೆ ಆನೇಕ ಕಾರಣಗಳಿಂದ ಕೆಮ್ಮು ಬರುತ್ತದೆ. ಅದಕ್ಕೆ ಸೂಕ್ತವಾದ ಮನೆಮದ್ದುಗಳನ್ನು ತಿಳಿಯೋಣ.
ಒಂದು ಲೋಟ ಹಾಲನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಬೇಲ್ಲ ,ಜೀರಿಗೆ ಮತ್ತು ಶುಂಠಿಯನ್ನು ಜಜ್ಜಿ ಅದನ್ನು 20 ನಿಮಿಷಗಳ ಕಾಲ ಕುದಿಸಿ ನಂತರ ಅದನ್ನು ಕುದಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ. ಒಂದು ಚಮಚ ಜೇನುತುಪ್ಪದ ಜೊತೆಗೆ ಕರಿಮೆಣಸನ್ನು ಪುಡಿ ಮಾಡಿ ಚೆನ್ನಗಿ ಬೆರೆಸಿ ದಿನಕ್ಕೆ ಎರಡು ಸಾಲ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ. ಯಾಕೆಂದರೆ ಜೇನುತುಪ್ಪದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಇರುತ್ತದೆ.
ನಿಂಬೆಹಣ್ಣಿನ ಟೀ ಜೊತೆಗೆ ಶುಂಠಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ ತಯಾರಿಸಿದ ಟೀಯನ್ನು ಕುಡಿಯುವುದರಿಂದ ದೀರ್ಘಕಾಲದ ಕೆಮ್ಮು ಕಡಿಮೆಯಾಗುತ್ತದೆ. ಶುಂಠಿ ಮತ್ತೆ ನಿಂಬೆಹಣ್ಣಿನಲ್ಲಿ ಬ್ಯಾಕ್ಟೀರಿಯಗಳೊಂದಿಗೆ ಹೊರಡುವ ಶಕ್ತಿ ಹೆಚ್ಚಗಿರುತ್ತದೆ. ಇವುಗಳಲ್ಲಿ ಯಾವುದಾದರು ಒಂದನ್ನು ಪ್ರಯತ್ನಿಸಿ ನಿಮ್ಮ ಕೆಮ್ಮು ಕಡಿಮೆ ಆಗದಿದ್ದರೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
-ಲಕ್ಷ್ಮೀಲೋಕೇಶ್