ನೀವು ಸತ್ತಿದ್ದು ನಿಮ್ಗೆ ಗೊತ್ತಾಗುತ್ತೆ ಅಂದ್ರೆ ನೀವು ನಂಬುತ್ತೀರಾ.. ಅರೇ ನಾನೇ ಸತ್ತು ಹೋಗಿರುತ್ತೇನೆ. ಅದ್ಹೇಗೆ ಸಾಧ್ಯ. ಇದೆಲ್ಲ ಸುಳ್ಳು ಅನ್ನೋ ಮಂದಿಯೇ ಹೆಚ್ಚು. ಆದರೆ, ವಿಜ್ಞಾನ ಇದು ಸತ್ಯ ಅನ್ನುತ್ತೆ.!
ವಿಜ್ಞಾನದ ಪ್ರಕಾರ ಸಾವು ಅಂದ್ರೆ, ಈ ದೇಹ ತನ್ನ ಚಲನೆಯನ್ನ ನಿಲ್ಲಿಸುವುದು. ದೇಹದ ಯಾವುದೇ ಭಾಗ ಕೆಲಸ ಮಾಡುವುದಿಲ್ಲ. ಅದೇ ಧರ್ಮದ ಪ್ರಕಾರ, ಈ ದೇಹದಲ್ಲಿರುವ ಆತ್ಮ ಪರಮಾತ್ಮನಲ್ಲಿ ಲೀನವಾಗುತ್ತೆ ಅನ್ನೋದು. ಅಲ್ಲಿಗೆ ಈ ದೇಹಕ್ಕೆ ಅಂತ್ಯವಿದೆ. ಆತ್ಮಕ್ಕೆ ಅಲ್ಲ. ಹೀಗಾಗಿ ಪುನರ್ಜನ್ಮದಲ್ಲಿ ಕೆಲವರು ನಂಬಿಕೆ ಇಟ್ಟಿದ್ದಾರೆ.
ನೀವು ಸತ್ತ ಮೇಲೆ ನಿಮ್ಮ ಜಿ-ಮೇಲ್ ಡಿಲೀಟ್ ಮಾಡೋದು ಹೇಗೆ ಗೊತ್ತಾ?
ಮನುಷ್ಯನ ಇಡೀ ದೇಹದ ಪ್ರಮುಖ ಅಂಗ ಮೆದುಳು. ಇದು ಸತ್ತ ನಂತರವೂ ಮಾಹಿತಿಯನ್ನ ಕಲೆ ಹಾಕುತ್ತದೆಯಂತೆ. ಮನುಷ್ಯನ ಸಾವಿನ ಬಳಿಕವೂ ಅದು ಬರೋಬ್ಬರಿ 4 ಗಂಟೆಗಳ ಕಾಲ ಕೆಲಸ ಮಾಡುತ್ತದೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಹೀಗಾಗಿ ಮೆದುಳಿನಲ್ಲಿರುವ ಮಾಹಿತಿಯನ್ನ ರಿಸ್ಟೋರ್ ಮಾಡಬಹುದು ಅನ್ನೋ ಕುತೂಹಲಕಾರಿಯಾದ ಅಂಶ ಸಂಶೋಧನೆಯಿಂದ ತಿಳಿದು ಬಂದಿದೆ.
ನ್ಯೂಯಾರ್ಕ್ ನ ಎನ್ ವೈಯು ಲ್ಯಾಂಗೊನ್ ಸ್ಕೂಲ್ ಆಫ್ ಮೆಡಿಷನ್ ನ ಡಾ. ಪಾರ್ನಿಯಾ ಹಾಗೂ ನರ್ಸ್ ಗಳು, ರೋಗಿಗಳು ಸತ್ತ ನಂತರವೂ ಮಾಹಿತಿಯನ್ನ ನೆನಪಿಸಿಕೊಳ್ಳುತ್ತಾರೆ ಅನ್ನೋ ಅಚ್ಚರಿಯ ಅಂಶ ತಿಳಿದು ಬಂದಿದೆ ಅಂತಾ ಹೇಳಿದ್ದಾರೆ. ಇನ್ನು ಹಾರ್ಟ್ ಅಟ್ಯಾಕ್ ಆದ ಬಳಿಕ ಮೆದುಳಿಗೆ ಏನಾಗುತ್ತೆ, ಅದು ಮರಣಾನಂತರವೂ ಎಲ್ಲಿಯವರೆಗೆ ಕೆಲಸ ಮಾಡುತ್ತೆ ಅನ್ನೋದು ತಿಳಿಯುತ್ತೆ ಅಂತಿದ್ದಾರೆ.
ಈ ಬಗ್ಗೆ ಇದೀಗ ಪ್ರಾಣಿಗಳ ಮೇಲೆ ಅಧ್ಯಯನ ನಡೆದಿದೆ. ಇದು ಮನುಷ್ಯನ ಮೆದುಳಿನ ಹೇಗೆ ಪರಿಣಾಮ ಬೀರುತ್ತೆ ಅನ್ನೋ ಕುತೂಹಲ ಮೂಡಿದೆ.