ಪ್ರಸ್ತುತ ಪ್ರತಿಯೊಬ್ಬರು ಜಿ-ಮೇಲೆ ಅಕೌಂಟ್ ಆಯ್ಕೆಯನ್ನು ಹೊಂದಿರುತ್ತಾರೆ. ಜಿ-ಮೇಲೆ ಕೇವಲ ಮೇಲ್ ಮಾಡಲು ಮಾತ್ರವಲ್ಲದೇ ಸಂಪೂರ್ಣ ಡಿಜಿಟಲ್ ಲೈಫ್‌ನ ಕೀಲಿಕೈ ಇದ್ದಂತೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇಬೇಕಾಗಿದೆ. ಏಕೆಂದರೇ ಪ್ರತಿಯೊಂದು ಡಿಜಿಟಲ್ ಸೇವೆಯು ಬಳಕೆದಾರರ ಜಿ-ಮೇಲ್ ಐಡಿ ನಮೂದಿಸಲು ಕೇಳುತ್ತದೆ. ಇಷ್ಟೆಲ್ಲಾ ಅಗತ್ಯವಾಗಿರುವ ಜಿ-ಮೇಲ್ ನೀವು ಸತ್ತ ಮೇಲೆ ಏನಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದಿರಾ?.ಬಹುಶಃ ಯೋಚಿಸಿರಲ್ಲ.
ಹೌದು, ಸ್ಮಾರ್ಟ್‌ಫೋನ್ ಅಪ್ಲಿಕೇಶನ್ಸ್, ಆನ್‌ಲೈನ್ ತಾಣಗಳು, ಗೂಗಲ್ ಡ್ರೈವ್, ಹೀಗೆ ಹಲವಾರು ಕಡೆ ನೀವು ಜಿ-ಮೇಲ್ ಐಡಿ ನೀಡಿ ಡಿಜಿಟಲ್ ಸೇವೆಗಳನ್ನು ಆಕ್ಸಸ್ ಮಾಡಿರುತ್ತಿರಿ. ನಿಮ್ಮ ಜಿ-ಮೇಲ್ ಖಾತೆ ಆಕ್ಟಿವ್ ಆಗಿರುತ್ತದೆ. ಮುಂದೊಂದಿನ ನೀವು ಇಲ್ಲವಾದಾಗ ನಿಮ್ಮ ಜಿ-ಮೇಲ್ ಐಡಿ ಎನಾಗುತ್ತದೆ ಎಂಬ ಪ್ರಶ್ನೇ ನಿಮ್ಮನ್ನು ಕಾಡಿರಬಹುದು. ಅಂಥ ಸಮಯಕ್ಕೆ ಡಿಆಕ್ಟಿವ್ ಮಾಡುವ ಆಯ್ಕೆಗಳನ್ನು ಗೂಗಲ್ ನೀಡಿದೆ.
ಬಳಕೆದಾರರು ಇಲ್ಲವಾದಾಗ ಅವರ ಖಾತೆಯನ್ನು ಸ್ಮರಿಸುವ (memorialize)ಆಯ್ಕೆಯನ್ನು ಫೇಸ್‌ಬುಕ್‌ನಲ್ಲಿ ಕಾಣಬಹುದು. ಹಾಗೆಯೇ ಜಿ-ಮೇಲ್‌ನಲ್ಲಿ ಸಹ ಖಾತೆಯನ್ನು ನಿಷ್ಕ್ರಿಯ ಮಾಡುವ ಅವಕಾಶಗಳನ್ನು ಗೂಗಲ್ ನೀಡಿದ್ದು, ಅದಕ್ಕಾಗಿ ‘ಪ್ರಿ ಸೆಲೆಕ್ಟೆಡ್ ಪೀರಿಡ್’ ಆಯ್ಕೆ ಮತ್ತು ಖಾತೆ ಡಿಆಕ್ಟಿವ್ ಮಾಡಲು ಕುಟುಂಬ ಸದಸ್ಯರಿಗೆ ಆಕ್ಸಸ್ ನೀಡುವ ಆಯ್ಕೆಗಳನ್ನು ನೀಡಿದೆ. ಹಾಗಾದರೇ ನೀವಿಲ್ಲದ ಕಾಲಕ್ಕೆ ನಿಮ್ಮ ಜಿ-ಮೇಲ್ ಖಾತೆ ಡಿಆಕ್ಟಿವ್ ಆಗಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮುಂದೆ ಓದಿರಿ.
ಖಾತೆ ಡಿಲೀಟ್ ಮಾಡುವ ಆಯ್ಕೆ
ಜಿ-ಮೇಲ್ ಖಾಯೆಯನ್ನು ಹೊಂದಿರುವ ಬಳಕೆದಾರರು ಇಲ್ಲವಾದಾಗ ಅವರ ಖಾತೆಯನ್ನು ನಿಷ್ಕ್ರಿಯ ಮಾಡುವ ಆಯ್ಕೆ ಗೂಗಲ್ ಸೆಟ್ಟಿಂಗ್‌ನಲ್ಲಿದೆ. ಬಳಕೆದಾರರು ಪ್ರಿ ಸೆಲೆಕ್ಟೆಡ್ ಪೀರಿಡ್ ಆಯ್ಕೆಯ ಡಿಆಕ್ಟಿವ್ ಮಾಡುವ ಅವಕಾಶ ನೀಡಿದೆ. ಬಳಕೆದಾರ ಇಲ್ಲವಾದಾಗ ಅವರ ಕುಟುಂಬ ಸದಸ್ಯರು ಖಾತೆ ಡಿಆಕ್ಟಿವ್ ಮಾಡಲು ಆಕ್ಸಸ್ ನೀಡುವ ಆಯ್ಕೆ ಗೂಗಲ್ ನೀಡಿದೆ.
ಪ್ರಿ ಸೆಲೆಕ್ಟೆಡ್ ಪೀರಿಡ್-ಸೆಟ್ ಮಾಡಿ
* ಮೊದಲು myaccount.google.com ತೆರೆಯಿರಿ
* ಪ್ರೈವೆಸಿ ಮತ್ತು ಪರ್ನಲೈಜೇಶನ್ ಆಯ್ಕೆಯಲ್ಲಿ ಮ್ಯಾನೇಜ್ ಯೂವರ್ ಡೇಟಾ ಮತ್ತು ಪರ್ನಲೈಜೇಶನ್ ಆಯ್ಕೆ ಸೆಲೆಕ್ಟ್ ಮಾಡಿರಿ
* ನಂತರ ಮೇಕ್ ಪ್ಲಾನ್ ಫಾರ್ ಡೇಟಾ ಸೆಷನ್ ಆಯ್ಕೆ ಟ್ಯಾಪ್ ಮಾಡಿರಿ.
* ಆನಂತರ ಸ್ಟಾರ್ಟ್ ಆಯ್ಕೆಯನ್ನು ಒತ್ತಿರಿ
ಕಾಂಟ್ಯಾಕ್ಟ್ ಮಾಹಿತಿ ತುಂಬಿರಿ
* ನೀವು ಇಲ್ಲವಾದಾಗ ನಿಮ್ಮ ಖಾತೆ ಇನ್‌ಆಕ್ಟಿವ್ ಆಗಿರದಿದ್ದರೇ ಡಿಆಕ್ಟಿವ್ ಮಾಡಲು ಗೂಗಲ್ ಎಷ್ಟು ತಿಂಗಳು ಕಾಯಬೇಕು ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
* 3ತಿಂಗಳು, 6ತಿಂಗಳು, 12ತಿಂಗಳು ಮತ್ತು 18 ತಿಂಗಳು ಆಯ್ಕೆಗಳು ಕಾಣಿಸುತ್ತವೆ.
* ನಿಮ್ಮ ಫೋನ್ ನಂಬರ್ ಮತ್ತು ನಿಮ್ಮ ಕುಟುಂಬದವರ ಫೋನ್ ನಂಬರ್ ನಮೂದಿಸಿ
* ನಿಮ್ಮ ಮೇಲ್ ಐಡಿ ಮತ್ತು ಆಲ್ಟ್ರನೇಟಿವ್ ಮೇಲ್ ಐಡಿ ನೀಡಿರಿ.
ಯಾರಿಗೆ ಖಾತೆ ಆಕ್ಸಸ್ ನೀಡುವಿರಿ
* ಯಾರಿಗೆ ಖಾತೆ ಆಕ್ಸಸ್ ನೀಡುವಿರಿ ಅವರ ಹೆಸರನ್ನು ಬರೆಯಿರಿ
* ಕುಟುಂಬಸ್ಥರ ಜಿಮೇಲ್ ಐಡಿ ನಮೂದಿಸಿರಿ
* ಹಾಗೆಯೇ ಅವರ ಪೋನ್ ನಂಬರ್ ಬರೆಯಿರಿ(ಬೇಕಿದ್ದರೇ ಮೆಸ್ಸೆಜ್ ಸಹ ಬರೆಯಬಹುದು)
* ಸುಮಾರು 10 ಜನರ ಮಾಹಿತಿ ನಮೂದಿಸಲು ಅವಕಾಶ
ಖಾತೆ ಡಿಲೀಟ್ ಮಾಡಲು ಇಚ್ಚಿಸುವಿರಾ
* ಡಿಲೀಟ್ ಮೈ ಇನ್‌ಆಕ್ಟಿವ್ ಗೂಗಲ್ ಅಕೌಂಟ್ ಬಟನ್ ಸೆಲೆಕ್ಟ್ ಮಾಡಿರಿ.
* ನೀವು ಸೆಲೆಕ್ಟ್ ಮಾಡಿರುವ ತಿಂಗಳುಗಳ ಆಯ್ಕೆಯ ಅವಧಿ ಮುಗಿದ ಬಳಿಕ ಖಾತೆ ಡಿಲೀಟ್ ಆಗುವುದು
* ಪ್ರಿವ್ಯೂವ್ ಆಯ್ಕೆ ಇದೆ, ನೋಡಿ ಆನಂತರ ಕನ್ಫರ್ಮ್ ಪ್ಲ್ಯಾನ್ ಆಯ್ಕೆ ಕಾಣಿಸಲಿದೆ.
* ಈ ಪ್ರಕ್ರಿಯೇ ಬೇಡವಾದರೇ ಟರ್ನ್ ಆಫ್ ಮೈ ಪ್ಲ್ಯಾನ್ ಆಯ್ಕೆ ಸೆಲೆಕ್ಟ್ ಮಾಡಿಬಿಡಿ.