ಸೂರಿಲ್ಲದ ನಿರ್ಗತಿಕರಿಗೆ ಹಾಗೂ ಬಡವರಿಗೆ ಆಹಾರ ಒದಗಿಸಲು ಫುಡ್ ಬ್ಯಾಂಕ್ ಆಫ್ ಇಂಡಿಯಾ ಈಗ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದೆ . ಈ ಅಭಿಯಾನದ ಮುಖ್ಯ ರೂವಾರಿ ಚೆನ್ನೈನ ಸ್ನೇಹಾ ಮೋಹನ್ ದಾಸ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದ ಖಾತೆ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಚೆನ್ನೈನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸ್ನೇಹಾ, ವಿದ್ಯಾರ್ಥಿ ದೆಸೆಯಿಂದಲೂ ಜನಪರ ಕಾಳಜಿ ಹೊಂದಿದ್ದರು.
ಇದು ಸಂಪೂರ್ಣ ಕಾರ್ಯಗತವಾಗಿದ್ದು 2015 ರಲ್ಲಿ.ಮಹಾ ಪ್ರವಾಹದಿಂದ ಚೆನ್ನೈ ನಲುಗಿತ್ತು. ಈ ಸಂದರ್ಭ ಜನ ಹಸಿವು, ಆಹಾರ ಕೊರತೆಯನ್ನು ತೀವ್ರವಾಗಿ ಅನುಭವಿಸುತ್ತಿದ್ದರು. ಇದಕ್ಕಾಗಿ ಮಿಡಿದ ಹೃದಯವೇ ಸ್ನೇಹಾ .ಫುಡ್ ಬ್ಯಾಂಕ್ ಇಂಡಿಯಾ ಎಂಬ ಸರ್ಕಾರೇತರ ಸಂಸ್ಥೆ ಸ್ಥಾಪಿಸಿದ ಈಕೆ ಹಸಿವು ಮುಕ್ತ ಭಾರತವೇ ನನ್ನ ಧ್ಯೇಯೋದ್ದೇಶ ಎಂದು ಮುಂದಡಿ ಇಟ್ಟರು. ಎನ್‍ಜಿಓ ಮೂಲಕ ಅವರು ಮನೆಯಲ್ಲಿ ತಯಾರಾದ ಆಹಾರವನ್ನು ಸೂರಿಲ್ಲದವರಿಗೆ ಶುದ್ಧವಾಗಿ ತಲುಪಿಸುವ ಕಾಯಕದಲ್ಲಿ ತೊಡಗಿದರು.ಪ್ರವಾಹ ನಿಂತರೂ ಸ್ನೇಹಾ ಅವರ ಸೇವಾ ಪ್ರವಾಹ ಹೆಚ್ಚಾಗುತ್ತಲೇ ಹೋಯಿತು .ಈಗ ಅದು ದೇಶದ 18 ಸ್ಥಳಗಳಿಗೆ ವಿಸ್ತರಿಸಿದೆ.
ಮನೆ ಇಲ್ಲದವರಿಗೆ ಆಹಾರ ನೀಡುವ ಅಭ್ಯಾಸ ರೂಢಿ ಮಾಡಿಸಿದ ನನ್ನ ತಾಯಿ ನನಗೆ ಸ್ಫೂರ್ತಿ ಎನ್ನುವ ಅವರು ಹಸಿವು ಮುಕ್ತ ಭಾರತಕ್ಕೆ ಸಹಾಯ ಮಾಡಿ ಎಂದು ಬೇಡುತ್ತಾರೆ. ಅನಿವಾಸಿ ಭಾರತೀಯರೊಂದಿಗೆ ಸೇರಿ ಭಾರತವನ್ನು ಹಸಿವು ಮುಕ್ತ ಮಾಡುವ ನಿಟ್ಟಿನಲ್ಲಿ ಸ್ನೇಹಾ ಹೋರಾಟ ದೊಡ್ಡ ಮಾರ್ಗವನ್ನೇ ಕ್ರಮಿಸಿದೆ. ಸಾಮೂಹಿಕ ಅಡುಗೆ, ಅಡುಗೆ ಮ್ಯಾರಥಾನ್ ಮಗುವಿಗೆ ಹಾಲುಣಿಸುವುದು ಸೇರಿ ನೂರೆಂಟು ಅಭಿಯಾನಗಳು ಫುಡ್ ಬ್ಯಾಂಕ್ ನ ಅನ್ನದಾನಕ್ಕೆ ಪುಷ್ಟಿ ನೀಡಿವೆ.
information credit: vijayavaani