ಈ ಜಗತ್ತಿನಲ್ಲಿರುವ ಜೀವಿಗಳ ಬದುಕು ಒಂದೊಕ್ಕೊಂದು ಭಿನ್ನವಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಅದರಲ್ಲಿ ಚೇಳಿನ ಬದುಕು ತುಂಬ ಅಚ್ಚರಿಯಿಂದ ಕೂಡಿದೆ. ಚೇಳನ್ನು ಕಂಡರೆ ಪ್ರತಿಯೊಬ್ಬರಿಗೂ ಭಯ ಕಾಡದೆ ಇರದು ಏಕೆಂದರೆ ಇದರ ವಿಷ ಅಪಯಕಾರಿ. ಜೀವ ವೈವಿದ್ಯಮಯದಲ್ಲಿ ಇದರ ಬದುಕು ಅತ್ಯಂತ ಅಚ್ಚರಿಯಿಂದ ಕೂಡಿರುವುದು ಎಷ್ಟೋ ಮಂದಿಗೆ ತಿಳಿದಿಲ್ಲ.
ಇದು ತನ್ನ ಮರಿಗಳಿಗೆ ಜನ್ಮ ನೀಡುವ ಮೂಲಕ ತನ್ನ ಬದುಕನ್ನು ಅಂತ್ಯ ಮಾಡಿಕೊಳ್ಳುತ್ತದೆ! ಕಾರಣ ಮರಿಗಳಿಗೆ ಜನ್ಮ ನೀಡಿದ ನಂತರ ಮರಿಗಳಿಗೆ ತಿನ್ನಲು ಏನೂ ಇರದ ಕಾರಣ ಇದು ತನ್ನ ಮರಿಗಳಿಗೆ ತನ್ನನ್ನೆ ಸಮರ್ಪಿಸಿಕೊಳ್ಳುವ ಮೂಲಕ ತನ್ನ ಮರಿಗಳಿಗೆ ಆಹಾರವಾಗುತ್ತದೆ.
ಚೇಳು ಸುಮಾರು 20 ರಿಂದ 25 ಮರಿಗಳಿಗೆ ಒಮ್ಮೆ ಜನ್ಮ ನೀಡುತ್ತದಂತೆ, ಆ ಮರಿಗಳು ಹುಟ್ಟಿದ ಕೂಡಲೇ ಹಸಿವಿನಿಂದ ತನ್ನ ತಾಯಿಯನ್ನೇ
ತಿನ್ನಲು ಪ್ರಾರಂಭಿಸುತ್ತದಂತೆ ತನ್ನ ಮರಿಗಳ ಹಸಿವನ್ನು ತಿಳಿದುಕೊಂಡ ತಾಯಿ ಚೇಳು ಯಾವುದೇ ರೀತಿಯ ಪ್ರತಿಕಾರ ಮಾಡದೇ ತನ್ನನ್ನು ಮರಿಗಳಿಗೆ ಸಮರ್ಪಿಸಿಕೊಂಡು ಸಾವನ್ನಪ್ಪುತ್ತದೆ.
ಈ ತಾಯಿಯ ತ್ಯಾಗಕ್ಕೆ ಸರಿ ಸಮಾನವಾದದ್ದು ಯಾವುದು ಇಲ್ಲ!