ಕರ್ನಾಟಕ ಹಾಲು ಮಹಾಮಂಡಳಿ ಕೇಂದ್ರ ಕಛೇರಿಯಲ್ಲಿ ದಿನಾಂಕ 01.06.2025ರಂದು ವಿಶ್ವ ಹಾಲು ದಿನಾಚರಣೆ 2025ರ ಅಂಗವಾಗಿ ಸಾರ್ವಜನಿಕರಿಗಾಗಿ ಪನೀರ್ ಖಾದ್ಯ ಸ್ಪರ್ಧೆ ಮತ್ತು ನಂದಿನಿ ಗುಡ್‍ಲೈಪ್ ಸ್ಲೈಸ್ ಕೇಕ್, ಮಫಿನ್ಸ್ ಹಾಗೂ ಬಾರ್ ಕೇಕ್ ಎಂಬ ಮೂರು ಮಾದರಿಯ ವಿವಿಧ 18 ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.
ನೂತನ ಉತ್ಪನ್ನಗಳನ್ನು ಕೆಎಂಎಫ್ ಎಂ.ಡಿ ಬಿ.ಶಿವಸ್ವಾಮಿಯವರು ಬಿಡುಗಡೆಗೊಳಿಸಿ ಮಾತನಾಡಿ ಇಂದು ವಿಶ್ವಹಾಲು ದಿನಾಚರಣೆ ಅಂಗವಾಗಿ ನಂದಿನಿ ಪನೀರ್ ಖಾದ್ಯ ಸ್ಪರ್ಧೆ ಏರ್ಪಡಿಸಲಾಗಿದೆ ಹಾಗೂ ಇಂದು ನೂತನವಾಗಿ ನಂದಿನಿ ಉತ್ಪನ್ನಗಳಾದ ಸ್ಲೈಸ್ ಕೇಕ್, ಬಾರ್ ಕೇಕ್ ಮಫಿನ್ಸ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಸದಾ ಹೊಸತನದೊಂದಿಗೆ ಸ್ವಾದಿಷ್ಟ ಉತ್ಪನ್ನಗಳನ್ನು ನಂದಿನಿ ಗ್ರಾಹಕರಿಗೆ ಒದಗಿಸುತ್ತಿದೆ ಎಂದರು.
ಸಾರ್ವನಿಕರಿಗಾಗಿ ಏರ್ಪಡಿಸಿದ್ದ ನಂದಿನಿ ಪನಿರ್ ಖಾದ್ಯ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 30 ಸ್ಪರ್ಧಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಆಗಮಿಸಿದ್ದ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿರವರು 30 ಸ್ಪರ್ಧಿಗಳಲ್ಲಿ 3 ಜನ ವಿಜೇತರನ್ನು ಘೋಷಿಸಿದರು. ಮೊದಲ ಬಹುಮಾನ ರೂ. 50,000/- ( ಮಹಾಲಕ್ಷ್ಮಿ – ಬೆಂಗಳೂರು) ಎರಡನೇ ಬಹುಮಾನ ರೂ. 30,000/-(ವಿಶಿಕಾ ಕೇಶವ್-ಮಂಗಳೂರು) ಹಾಗೂ ಮೂರನೇ ಬಹುಮಾನ ರೂ. 20,000/- (13ವರ್ಷದ ವಿನೋದಿನಿ ಬಿ-ಬೆಂಗಳೂರು, ) ಗಳ ಚೆಕ್‍ಗಳನ್ನು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಿ. ಶಿವಸ್ವಾಮಿಯವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಕಹಾಮ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.