ಮಾವಿನ ಎಲೆಯನ್ನು ತಿನ್ನುವುದರಿಂದ ದೇಹದ ಆರೋಗ್ಯವನ್ನು ಸದೃಡವಾಗಿ ಇಟ್ಟುಕೊಳ್ಳಬಹುದು. ಮೊದಲು ಎಲ್ಲರು ಮಾವಿನಹಣ್ಣು, ಕಾಯಿಯನ್ನು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಿದ್ದರು. ಆದರೆ ಮಾವಿನ ಎಲೆಯಲ್ಲೂ ಕೂಡ ಔಷಧಿಗುಣಗಳಿವೆ.
ಮಾವಿನ ಎಲೆಯನ್ನು ಯಾವ ರೀತಿ ಬಳಸುವುದು ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
*ಮಾವಿನೆಲೆಯಲ್ಲಿ ಆÀ್ಯಂಟಿಆಂಕ್ಸಿಡೆಂಟ್ ಹೇರಳವಾಗಿರುತ್ತದೆ ಮತ್ತು ವಿಟಮಿನ್ ಸಿ ಸಹ ಇದರಲ್ಲಿ ಸಿಗುತ್ತದೆ. ನಮ್ಮ ದೇಹಕ್ಕೆ ವಿಟಮಿನ್ ಸಿ ಟಾಕ್ಸಿನ್ ಅನ್ನು ಹೊರ ಹೊಗಲು ಸಹಾಯ ಮಾಡುತ್ತದೆ. ಇದನ್ನು ತಿನ್ನಲು ಹಾಗದವರು ಟೀ ಮಾಡಿ ಕುಡಿಯುತ್ತಾರೆ
*ಬಿಕ್ಕಳಿಕೆ ಮತ್ತು ಗಂಟಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಮಾವಿನ ಎಲೆಯು ಒಂದು ಉತ್ತಮ ಮನೆ ಮದ್ದು ಎಂದು ಹೇಳಲಾಗುತ್ತದೆ. ಮಾವಿನೆಲೆಯನ್ನು ಸುಟ್ಟು ಅದರ ಹೊಗೆಯನ್ನು ಮೂಗಿನಿಂದ ಎಳೆದುಕೊಳ್ಳಿ. ಇದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಹಾಗೆಯೇ ಗಂಟಲಿನ ಸಮಸ್ಯೆಯು ಕಡಿಮೆ ಯಾಗುತ್ತದೆ.*2 ಹಿಡಿ ಮಾವಿನ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ ಆ ನೀರಿನಿಂದ ಸ್ನಾನ ಮಾಡಿದರೆ ಯಾವುದೆ ಕೆಲಸದ ಒತ್ತಡದಿಂದ ತಲೆ ನೋವು ತಲೆ ಬಿಸಿಯಾಗಿದ್ದರೇ ಅದು ಸರಿಹೋಗುತ್ತದೆ. ಮತ್ತು ಮನಸ್ಸು ಉಲ್ಲಾಸಗೊಳ್ಳುತ್ತದೆ.* 10 ಮಾವಿನ ಎಲೆಯನ್ನು ಚೆನ್ನಾಗಿ ತೊಳೆದೆ ಕ್ಲೀನ್ ಮಾಡಿ ಅದನ್ನು 1 ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿರಿ ಅದನ್ನು ಇಡೀ ರಾತ್ರಿ ಹಾಗೇಯೇ ಬಿಡಿ. ಬೆಳಿಗ್ಗೆ ಮಾವಿನ ಎಲೆಗಳನ್ನು ತೆಗೆದು ಕಾಲಿ ಹೊಟ್ಟೆಗೆ ಆ ನೀರನ್ನು ಕುಡಿಯುವುದರಿಂದ ಮಧುಮೇಹ ಕಡಿಮೆಯಾಗಿತ್ತದೆ.*ಮಾವಿನ ಎಲೆಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
-lakshmi santhosh